ಯುಗ

ಯುಗದ ಅರ್ಥ ಮತ್ತು ಪ್ರಾಮುಖ್ಯತೆಯನ್ನು ತಿಳಿಯಲು ನಾವು ಸಮಯವನ್ನು ಪುರಾಣಗಳಲ್ಲಿ ಮತ್ತು ಇತಿಹಾಸಗಳಲ್ಲಿ ಹೇಗೆ ಪರಿಗಣಿಸಲಾಗಿದೆ ಎಂದು ತಿಳಿಯಬೇಕು.  

ಕಲ್ಪ ಎಂದರೇನು?

ಬ್ರಹ್ಮಾಂಡವನ್ನು ಸೃಷ್ಟಿಸಿದ ಮೇಲೆ ಅದು 4.32 ಬಿಲಿಯನ್ ವರ್ಷಗಳು ಉಳಿಯುತ್ತದೆ. ಈ ಕಾಲಾವಧಿಯನ್ನು ಕಲ್ಪ ಎಂದು ಕರೆಯಲಾಗುತ್ತದೆ. ಇದಾದ ನಂತರ ನೈಮಿತ್ತಿಕ ಪ್ರಳಯವು ಸಂಭವಿಸುತ್ತದೆ.

ಮನ್ವಂತರ ಎಂದರೇನು?

ಒಂದು ಕಲ್ಪದಲ್ಲಿ 14 ಮನ್ವಂತರಗಳಿವೆ.

ಚತುರ್ಯುಗ ಅಥವಾ ಮಹಾಯುಗ ಎಂದರೇನು?

ಒಂದು ಮನ್ವಂತರದಲ್ಲಿ 71 ಚತುರ್ಯುಗಗಳು ಅಥವಾ ಮಹಾಯುಗಗಳು ಇವೆ. ಕೃತಯುಗ – ತ್ರೇತಾಯುಗ – ದ್ವಾಪರಯುಗ – ಕಲಿಯುಗ ಎಂಬ ಈ ನಾಲ್ಕು ಯುಗಗಳನ್ನು ಚತುರ್ಯುಗ ಎಂದು ಕರೆಯಲಾಗುತ್ತದೆ ಮತ್ತು ಇವು ಪುನರಾವರ್ತಿಸುತ್ತವೆ. ಕೃತಯುಗವನ್ನು ಸತ್ಯಯುಗವೆಂದೂ ಕರೆಯುತ್ತಾರೆ.

 

 

ಯುಗಗಳಲ್ಲಿ ಎಷ್ಟು ವರ್ಷಗಳಿವೆ?

ಕೃತಯುಗ – 17,28,000 ವರ್ಷಗಳು
ತ್ರೇತಾಯುಗ – 12,96,000 ವರ್ಷಗಳು
ದ್ವಾಪರಯುಗ – 8,64,000 ವರ್ಷಗಳು
ಕಲಿಯುಗ – 4,32,000 ವರ್ಷಗಳು

ಈಗ ಯಾವ ಯುಗವು ನಡೆಯುತ್ತಿದೆ?

ಪ್ರಸ್ತುತ ಕಲ್ಪದ ಹೆಸರು ಶ್ವೇತವರಾಹ. ಇದರಲ್ಲಿ, ಏಳನೆಯ ಮನ್ವಂತರವು ನಡೆಯುತ್ತಿದೆ. ಇದರ ಹೆಸರು ವೈವಸ್ವತ ಮನ್ವಂತರ. ಇದರಲ್ಲಿ 28ನೇ ಚತುರ್ಯುಗವು ನಡೆಯುತ್ತಿದೆ. ಅದರಲ್ಲಿ, ಈಗ ಕ್ರಿಸ್ತ ಪೂರ್ವ 3102ರಲ್ಲಿ ಪ್ರಾರಂಭವಾದ ಕಲಿಯುಗವು ನಡೆಯುತ್ತಿದೆ. ಇದು ಕ್ರಿಸ್ತ ಶಕ 4,28,899 ರಲ್ಲಿ ಕೊನೆಯಾಗಲಿದೆ. 

ಕ್ರಿ.ಶ. 2021 ರಲ್ಲಿ ಈ ವಿಶ್ವವು ಸೃಷ್ಟಿಯಾಗಿ 1,96,08,53,123 ವರ್ಷಗಳಾಗಿವೆ.

 

 

48.5K

Comments

3njhp

ಅನ್ನದಾನ ಮಾಡುವುದರಿಂದ ಯಾವೆಲ್ಲಾ ಲಾಭಗಳಿವೆ?

ಬ್ರಹ್ಮಾಂಡ ಪುರಾಣದ ಪ್ರಕಾರ, ಅನ್ನದಾನ ಮಾಡುವವರ ಆಯುಷ್ಯ, ಧನ-ಸಂಪತ್ತು, ಕಾಂತಿ ಮತ್ತು ಆಕರ್ಷಕತೆ ಹೆಚ್ಚುತ್ತದೆ. ಅವರನ್ನು ಕರೆದುಕೊಂಡು ಹೋಗಲು ಸ್ವರ್ಗಲೋಕದಿಂದ ಬಂಗಾರದಿಂದ ಮಾಡಿದ ವಿಮಾನ ಬರುತ್ತದೆ. ಪದ್ಮ ಪುರಾಣದ ಪ್ರಕಾರ, ಅನ್ನದಾನಕ್ಕೆ ಸಮಾನವಾದ ಇನ್ನೊಂದು ದಾನವಿಲ್ಲ. ಹಸಿವಾದವರನ್ನು ಆಹರಿಸುವುದರಿಂದ ಇಹಲೋಕ ಮತ್ತು ಪರಲೋಕದಲ್ಲಿ ಸುಖವನ್ನು ಪಡೆಯುತ್ತಾರೆ. ಪರಲೋಕದಲ್ಲಿ ಬೆಟ್ಟಗಳಷ್ಟು ರುಚಿಕರವಾದ ಆಹಾರ ಅಂಥ ದಾತನಿಗಾಗಿ ಯಾವಾಗಲೂ ಸಿದ್ಧವಾಗಿರುತ್ತದೆ. ಅನ್ನದಾತನಿಗೆ ದೇವತೆಗಳು ಮತ್ತು ಪಿತೃಗಳು ಆಶೀರ್ವಾದವನ್ನು ನೀಡುತ್ತಾರೆ. ಅವನು ಎಲ್ಲಾ ಪಾಪಗಳಿಂದ ಮುಕ್ತನಾಗುತ್ತಾನೆ

ಭಗವಾನ್ ನರಸಿಂಹನು ಅಹೋಬಿಲವನ್ನು ತನ್ನ ನಿವಾಸವಾಗಿ ಏಕೆ ಆರಿಸಿಕೊಂಡನು?

ಭಗವಾನ್ ನರಸಿಂಹನು ಅಹೋಬಿಲಂ ಅನ್ನು ತನ್ನ ವಾಸಸ್ಥಾನವಾಗಿ ಆರಿಸಿಕೊಂಡನು ಏಕೆಂದರೆ ಇಲ್ಲಿಯೇ ಅವನು ರಾಕ್ಷಸ ಹಿರಣ್ಯಕಶಿಪುವನ್ನು ಸೋಲಿಸಿದನು. ಈ ಘಟನೆಯ ನಂತರ, ಹಿರಣ್ಯಕಶಿಪುವಿನ ಮಗ ಮತ್ತು ಭಗವಾನ್ ವಿಷ್ಣುವಿನ ನಿಷ್ಠಾವಂತ ಭಕ್ತ ಪ್ರಹ್ಲಾದನು ಅಹೋಬಿಲಂ ಅನ್ನು ತನ್ನ ಶಾಶ್ವತ ನಿವಾಸವನ್ನಾಗಿ ಮಾಡುವಂತೆ ನರಸಿಂಹನನ್ನು ಪ್ರಾರ್ಥಿಸಿದನು. ಪ್ರಹ್ಲಾದನ ಪ್ರಾಮಾಣಿಕ ಪ್ರಾರ್ಥನೆಗೆ ಸ್ಪಂದಿಸಿದ ನರಸಿಂಹ ದೇವರು ಈ ಸ್ಥಳವನ್ನು ತನ್ನ ವಾಸಸ್ಥಾನವನ್ನಾಗಿ ಮಾಡುವ ಮೂಲಕ ಆಶೀರ್ವದಿಸಿದನು. ಭಗವಾನ್ ನರಸಿಂಹನು ತನ್ನ ವಾಸಸ್ಥಾನವಾಗಿ ಅಹೋಬಿಲಂ ಅನ್ನು ಏಕೆ ಆರಿಸಿಕೊಂಡನು ಎಂಬುದನ್ನು ತಿಳಿದುಕೊಳ್ಳುವುದು ನಿಮ್ಮ ಆಧ್ಯಾತ್ಮಿಕ ಒಳನೋಟವನ್ನು ಆಳಗೊಳಿಸುತ್ತದೆ, ಭಕ್ತಿಯನ್ನು ಪ್ರೇರೇಪಿಸುತ್ತದೆ ಮತ್ತು ತೀರ್ಥಯಾತ್ರೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುತ್ತದೆ

Quiz

ಮಹಾಭಾರತವನ್ನು ಮೂಲತಃ ಏನೆಂದು ಕರೆಯಲಾಗುತ್ತಿತ್ತು?

ಅನುವಾದ: ಡಿ.ಎಸ್.ನರೇಂದ್ರ

Kannada Topics

Kannada Topics

ಸಾಮಾನ್ಯ ವಿಷಯಗಳು

Copyright © 2024 | Vedadhara | All Rights Reserved. | Designed & Developed by Claps and Whistles
| | | | |