ಹಾಸನಾಂಬ ದೇವಾಲಯ

Hasanamba

 

ಸ್ಥಳ 

ಹಾಸನಾಂಬ ದೇವಾಲಯವು ಕರ್ನಾಟಕದ ಹಾಸನದಲ್ಲಿದೆ.

ಈ ದೇವಿಯ ಹೆಸರಿನಿಂದಲೇ ಹಾಸನ ನಗರವು ತನ್ನ ಹೆಸರನ್ನು ಪಡೆದುಕೊಂಡಿದೆ. 

ಹಾಸನಾಂಬ ಎಂದರೆ ಸದಾ ಮುಗಳ್ನಗುವ ತಾಯಿ ಎಂದರ್ಥ.  

 

Click below to watch video on Hasanamba Temple 

 

 `Hasanamba Mahatme`: Significance of Hasanamba Devi Temple

 

ಈ ದೇವಾಲಯದ ವಿಶೇಷತೆ ಏನು? 

ಈ ದೇವಾಲಯವು ವರ್ಷದಲ್ಲಿ ಕೇವಲ ಒಂದು ವಾರಕ್ಕೆ ಮಾತ್ರವೇ ತೆರೆದಿರುತ್ತದೆ. 

ಇದು ದೀಪಾವಳಿಯ ಸಮಯದೊಂದಿಗೆ ಹೊಂದಿಕೊಳ್ಳುತ್ತದೆ.

ದೇವಾಲಯವನ್ನು ಮುಚ್ಚುವ ಸಮಯದಲ್ಲಿ, ಒಂದು ತುಪ್ಪದ ದೀಪವನ್ನು ಹಚ್ಚಿ ಗರ್ಭಗುಡಿಯಲ್ಲಿ ಇಡಲಾಗುತ್ತದೆ. 

ಒಂದು ವರ್ಷದ ನಂತರ ದೇವಾಲಯವನ್ನು ತೆರೆದಾಗ, ದೀಪವು ಇನ್ನೂ ಉರಿಯುತ್ತಿರುವುದನ್ನು ಭಕ್ತರು ನೋಡಿದ್ದಾರೆ. 

ಅಂಬೆಗೆ ಅರ್ಪಿಸಿರುವ ಹೂವುಗಳು ಇನ್ನೂ ತಾಜಾವಾಗಿರುತ್ತವೆ.



ದೇವಾಲಯವು ಹೇಗೆ ಅಸ್ತಿತ್ವಕ್ಕೆ ಬಂದಿತು? 

ಹಾಸನದ ಪ್ರಾಕೃತಿಕ ಸೌಂದರ್ಯವು ಸನ್ಮೋಹನಗೊಳಿಸುತ್ತದೆ. 

ಒಮ್ಮೆ ಸಪ್ತ-ಮಾತೃಕೆಯರು (ವಿಶ್ವದ ಏಳು ಜನ ತಾಯಂದಿರು - ಬ್ರಾಹ್ಮಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡ)  ದಕ್ಷಿಣ ಭಾರತದಲ್ಲಿ ಪ್ರವಾಸ ಮಾಡುತ್ತಿದ್ದರು. 

ಅವರುಗಳು ಹಾಸನಕ್ಕೆ ಬಂದಾಗ, ಅವರು ಅಲ್ಲಿಯೇ ಶಾಶ್ವತವಾಗಿ ನೆಲೆ ನಿಲ್ಲಲು ಬಯಸಿದರು.

ಅವರಲ್ಲಿ ಚಾಮುಂಡವನ್ನು ಬಿಟ್ಟು ಮಿಕ್ಕ ಆರು ಜನರು ಅಲ್ಲಿಯೇ ನೆಲೆನಿಲ್ಲಲು ನಿರ್ಧರಿಸಿದರು.

ಮೂರು ಜನರು ದೇವಾಲಯದ ಒಳಗಡೆ ಹುತ್ತದ ರೂಪದಲ್ಲಿ ನೆಲೆ ನಿಂತರು.

ಉಳಿದ ಮೂರು ಜನರು ದೇವಾಲಯದ ಹತ್ತಿರವಿರುವ ಕೆರೆಯಾದ ದೇವಗಿರಿ ಹೊಂಡದಲ್ಲಿ ಬಾವಿಗಳಾದರು.

ಚಾಮುಂಡದೇವಿಯು ಹಾಸನದಿಂದ ನಲವತ್ತು ಕಿ.ಮಿ. ದೂರದಲ್ಲಿರುವ ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆ ನಿಂತಳು.


ಸೊಸೆ ಕಲ್ಲು 

ಅಂಬೆಯ ಒಬ್ಬ ಭಕ್ತೆಯ ಅತ್ತೆ ಆಕೆಯನ್ನು ಸದಾ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಳು. 

ಒಮ್ಮೆ ಆಕೆಯು ದೇವಿಯ ಸಮ್ಮುಖದಲ್ಲಿ ಪ್ರಾರ್ಥಿಸುತ್ತಿರುವಾಗ, ಅತ್ತೆಯು ಅವಳನ್ನು ಹುಡುಕಿಕೊಂಡು ಬಂದು - ನಿನಗೆ ದೇವಾಲಯಕ್ಕೆ ಬರುವುದು ಮುಖ್ಯವೋ ಅಥವಾ ನಿನ್ನ ಕೆಲಸಗಳು ಮುಖ್ಯವೋ ಎಂದು ಕಿರುಚಿದಳು. 

ಇದನ್ನು ಹೇಳುತ್ತಾ ಆಕೆಯು ಸೊಸೆಯ ತಲೆಯ ಮೇಲೆ ಒಂದು ಬಟ್ಟಲಿನಿಂದ ಜೋರಾಗಿ ಕುಟ್ಟಿದಳು. 

ಸೊಸೆಯು ಅಂಬೆಯ ರಕ್ಷಣೆಗಾಗಿ ಪ್ರಾರ್ಥಿಸಿದಳು. 

ದೇವಿಯು ಆಕೆಯನ್ನು ಶಿಲೆಯನ್ನಾಗಿ ಪರಿವರ್ತಿಸಿ ಅವಳನ್ನು ದೇವಾಲಯದ ಆವರಣದಲ್ಲಿಯೇ ತನ್ನ ರಕ್ಷಣೆಯಲ್ಲಿ ಇಟ್ಟುಕೊಂಡಳು. 

ಈ ಕಲ್ಲು ಪ್ರತಿ ವರ್ಷ ಒಂದು ಭತ್ತದಷ್ಟು ಜರುಗುತ್ತಾ ಅಂಬೆಯ ಕಡೆಗೆ ಚಲಿಸುತ್ತದೆ. 

ಕಲಿಯುಗದ ಅಂತ್ಯದಲ್ಲಿ, ಅದು ಹಾಸನಾಂಬೆಯ ಪಾದಕಮಲಗಳನ್ನು ಸೇರಿ ಮೋಕ್ಷವನ್ನು ಪಡೆಯುತ್ತದೆ.



ಕಲ್ಲಪ್ಪನ ಗುಡಿ 

ಒಮ್ಮೆ ನಾಲ್ವರು ಕಳ್ಳರು ದೇವಾಲಯದಿಂದ ಆಭರಣಗಳನ್ನು ಕದಿಯಲು ಪ್ರಯತ್ನಿಸಿದರು. 

ಹಾಸನಾಂಬೆಯು ಅವರನ್ನು ಕಲ್ಲುಗಳಾಗಿ ಪರಿವರ್ತಿಸಿದಳು. ಈ ಕಲ್ಲುಗಳನ್ನು ಈಗಲೂ ನೋಡಬಹುದು.  

 

ರಾವಣನ ಚಿತ್ರ 

ಈ ದೇವಾಲಯದ ಇನ್ನೊಂದು ಸ್ವಾರಸ್ಯಕರ ವಿಷಯವೆಂದರೆ, ಒಂಬತ್ತು ತಲೆಗಳುಳ್ಳ ರಾವಣನ ಚಿತ್ರವು ಇಲ್ಲಿದೆ. 

ಅವನು ವೀಣೆಯನ್ನು ನುಡಿಸುತ್ತಿರುವುದನ್ನು ನೋಡಬಹುದು.


ಸಿದ್ದೇಶ್ವರ ಸ್ವಾಮಿ 

ದೇವಾಲಯದ ಸಂಕೀರ್ಣದಲ್ಲಿ ಭಗವಾನ್ ಶಿವ ಸಿದ್ದೇಶ್ವರ ಸ್ವಾಮಿಯಾಗಿ ಉಪಸ್ಥಿತನಿದ್ದಾನೆ. 

ಅವನ ಇರುವಿಕೆಯು ಅರ್ಜುನನಿಗೆ ಪಾಶುಪತಾಸ್ತ್ರವನ್ನು ಕೊಡುತ್ತಿರುವ ರೂಪದಲ್ಲಿದೆ. 

ಅವನ ಹಣೆಯಿಂದ ಸದಾ ನೀರಿನ ಹನಿಗಳು ಜಿನುಗುತ್ತವೆ.

 

ಈ ದೇವಾಲಯವನ್ನು ನಿರ್ಮಿಸಿದವರು ಯಾರು? 

ಕೃಷ್ಣಪ್ಪ ನಾಯ್ಕನು ಹೊಯ್ಸಳರ ಮನೆತನದ ಒಬ್ಬ ಪಾಳೇಗಾರನಾಗಿದ್ದ. 

ಅವನು ಈ ದೇವಾಲಯವನ್ನು 12ನೇ ಶತಮಾನದಲ್ಲಿ ನಿರ್ಮಿಸಿದ. 

ಸಿದ್ದೇಶ್ವರ ಸ್ವಾಮಿ ದೇವಾಲಯವನ್ನು ವೆಂಕಟಪ್ಪನಾಯ್ಕನು ನಿರ್ಮಿಸಿದ. 



ಹಬ್ಬಗಳು

  • ರಾವಣೋತ್ಸವ
  • ಬಲಿಪಾಡ್ಯಮಿ
  • ಚಂದ್ರಮಂಡಲ ರಥೋತ್ಸವ

 

Google Map Image

 

61.8K

Comments

3prfw

ಭಗವಾನ್ ನರಸಿಂಹನು ಅಹೋಬಿಲವನ್ನು ತನ್ನ ನಿವಾಸವಾಗಿ ಏಕೆ ಆರಿಸಿಕೊಂಡನು?

ಭಗವಾನ್ ನರಸಿಂಹನು ಅಹೋಬಿಲಂ ಅನ್ನು ತನ್ನ ವಾಸಸ್ಥಾನವಾಗಿ ಆರಿಸಿಕೊಂಡನು ಏಕೆಂದರೆ ಇಲ್ಲಿಯೇ ಅವನು ರಾಕ್ಷಸ ಹಿರಣ್ಯಕಶಿಪುವನ್ನು ಸೋಲಿಸಿದನು. ಈ ಘಟನೆಯ ನಂತರ, ಹಿರಣ್ಯಕಶಿಪುವಿನ ಮಗ ಮತ್ತು ಭಗವಾನ್ ವಿಷ್ಣುವಿನ ನಿಷ್ಠಾವಂತ ಭಕ್ತ ಪ್ರಹ್ಲಾದನು ಅಹೋಬಿಲಂ ಅನ್ನು ತನ್ನ ಶಾಶ್ವತ ನಿವಾಸವನ್ನಾಗಿ ಮಾಡುವಂತೆ ನರಸಿಂಹನನ್ನು ಪ್ರಾರ್ಥಿಸಿದನು. ಪ್ರಹ್ಲಾದನ ಪ್ರಾಮಾಣಿಕ ಪ್ರಾರ್ಥನೆಗೆ ಸ್ಪಂದಿಸಿದ ನರಸಿಂಹ ದೇವರು ಈ ಸ್ಥಳವನ್ನು ತನ್ನ ವಾಸಸ್ಥಾನವನ್ನಾಗಿ ಮಾಡುವ ಮೂಲಕ ಆಶೀರ್ವದಿಸಿದನು. ಭಗವಾನ್ ನರಸಿಂಹನು ತನ್ನ ವಾಸಸ್ಥಾನವಾಗಿ ಅಹೋಬಿಲಂ ಅನ್ನು ಏಕೆ ಆರಿಸಿಕೊಂಡನು ಎಂಬುದನ್ನು ತಿಳಿದುಕೊಳ್ಳುವುದು ನಿಮ್ಮ ಆಧ್ಯಾತ್ಮಿಕ ಒಳನೋಟವನ್ನು ಆಳಗೊಳಿಸುತ್ತದೆ, ಭಕ್ತಿಯನ್ನು ಪ್ರೇರೇಪಿಸುತ್ತದೆ ಮತ್ತು ತೀರ್ಥಯಾತ್ರೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುತ್ತದೆ

ವ್ಯಾಸ ಮುನಿಗಳನ್ನು ಏಕೆ ವೇದವ್ಯಾಸರೆಂದು ಕರೆಯಲಾಯಿತು?

ವ್ಯಾಸರು ವೇದದ ಮುಖ್ಯಾಂಶವನ್ನು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂದು ನಾಲ್ಕು ಭಾಗಗಳಲ್ಲಿ ವಿಭಾಗಿಸಿದ್ದರಿಂದ ಅವರನ್ನು ವೇದವ್ಯಾಸರೆಂದು ಕರೆಯಲಾಯಿತು.

Quiz

ಕುರುಕ್ಷೇತ್ರ ಯುದ್ಧದ ಪ್ರಾರಂಭದಲ್ಲಿ ಶಂಖವನ್ನು ಮೊದಲು ಊದಿದವರು ಯಾರು?

ಅನುವಾದ: ಡಿ.ಎಸ್.ನರೇಂದ್ರ

Kannada Topics

Kannada Topics

ದೇವಾಲಯಗಳು

Click on any topic to open

Please wait while the audio list loads..

Copyright © 2024 | Vedadhara | All Rights Reserved. | Designed & Developed by Claps and Whistles
| | | | |