ಜೀವನದಲ್ಲಿ, ಸಮಸ್ಯೆಗಳ ನಿಜವಾದ ಕಾರಣವನ್ನು ಕಂಡುಹಿಡಿಯುವುದು ಕಠಿಣವಾಗಿದೆ. ನಾವು ಜೀವನದಲ್ಲಿಯೋ ವೃತ್ತಿ ಜೀವನದಲ್ಲಿಯೋ ಔನ್ನತ್ಯವನ್ನು ಪಡೆಯದೇ ಇದ್ದಾಗ ನಮ್ಮ ಸಹೋದ್ಯೋಗಿಗಳನ್ನು ದೂಷಿಸುತ್ತೇವೆ. ನಮ್ಮ ಕೌಶಲ್ಯ ಅಥವಾ ಶ್ರಮದ ಕೊರತೆಯ ಬಗ್ಗೆ ನಾವು ಯೋಚಿಸುವುದಿಲ್ಲ. ಸಂಗಾತಿಯೊಂದಿಗಿನ ಜಗಳದಲ್ಲಿ, ನಾವು ಸಣ್ಣಪುಟ್ಟ ಅನವಶ್ಯಕವಾದ ವಿಷಯಗಳ ಬಗ್ಗೆ ಜಗಳ ಮಾಡುತ್ತೇವೆ. ಹಲವು ವರ್ಷಗಳಿಂದ ಬಗೆಹರಿಯದ ಸಮಸ್ಯೆಗಳನ್ನು ನಾವು ನಿರ್ಲಕ್ಷಿಸುತ್ತೇವೆ. ಜಾಗತಿಕ ಸಮಸ್ಯೆಗಳ ಬಗ್ಗೆ ಯೋಚಿಸುವಾಗ, ನಾವು ರಾಜಕೀಯ ಪ್ರತಿಪಕ್ಷಗಳನ್ನು ದೂಷಿಸುತ್ತೇವೆ, ನಿಜವಾದ, ಗಂಭೀರ ಸಮಸ್ಯೆಗಳನ್ನು ಅವಗಣನೆ ಮಾಡುತ್ತೇವೆ.
ಆಳವಾಗಿ ವಿಚಾರಿಸುವುದಕ್ಕಿಂತ ಮೇಲ್ನೋಟದ ವಿಷಯಗಳಿಗೆ, ಪ್ರಾಮುಖ್ಯತೆಯನ್ನು ಕೊಡುವ ಈ ಪ್ರವೃತ್ತಿ ಸಾಮಾನ್ಯವಾಗಿದೆ. ಇದು ನಮ್ಮ ಧರ್ಮಗ್ರಂಥಗಳ ಅನೇಕ ದಂತಕಥೆಗಳಲ್ಲಿಯೂ ಕಂಡುಬರುತ್ತದೆ. ಅಂತಹ ಒಂದು ದಂತಕಥೆಯು ರಾಜ ಪರೀಕ್ಷಿತನನ್ನು ಕುರಿತದ್ದು. ಅವನು ಮೊದಲು ಶಾಪಕ್ಕೆ ಬಲಿಯಾದನು . ನಂತರ ಅವನು ತನ್ನ ನತದೃಷ್ಟತೆಯ ಸ್ಪಷ್ಟ ಕಾರಣವನ್ನು ಅರಿತುಕೊಂಡನು.
ಪರೀಕ್ಷಿತ ರಾಜನು ಧರ್ಮಭೀರು ರಾಜನಾಗಿದ್ದ. ಒಂದು ದಿನ, ಅವನು ಬೇಟೆಯ ಸಮಯದಲ್ಲಿ, ದಣಿದು ಬಾಯಾರಿದ .ಆಗ ಅವನು ಸಮೀಪದಲ್ಲೇ ಇದ್ದ ಋಷಿ ಶಮೀಕನ ಆಶ್ರಮಕ್ಕೆ ಹೋಗಿ ನೀರು ಕೇಳಿದ. ಧ್ಯಾನದಲ್ಲಿ ಮುಳುಗಿದ್ದ ಋಷಿ ಪ್ರತಿಕ್ರಿಯಿಸಲಿಲ್ಲ. ನಿರ್ಲಕ್ಷ್ಯತೆ ಮತ್ತು ಸಿಟ್ಟಿನ ಭರದಲ್ಲಿ ಪರೀಕ್ಷಿತ ರಾಜನು ಉದ್ಧಟತನದಿಂದ ವರ್ತಿಸಿದ. ಋಷಿಯನ್ನು ಅವಮಾನಿಸಲು ಸತ್ತ ಹಾವನ್ನು ಋಷಿಯ ಕುತ್ತಿಗೆಗೆ ಹಾಕಿದ.
ಇದನ್ನು ಕಂಡು ಋಷಿಯ ಮಗ ಶೃಂಗಿಯು ಕೋಪಗೊಂಡ. ಕೋಪದಲ್ಲಿ ಅವನು ಪರೀಕ್ಷಿತನನ್ನು ಶಪಿಸಿದ. ಏಳು ದಿನಗಳಲ್ಲಿ ಒಂದು ಹಾವು ರಾಜನನ್ನು ಕಚ್ಚುತ್ತದೆ ಮತ್ತು ಅವನ ಸಾವಿಗೆ ಕಾರಣವಾಗುತ್ತದೆ ಎಂದು ಅವನು ಘೋಷಿಸಿದ. ಪರೀಕ್ಷಿತನಿಗೆ ಭಯ ಮತ್ತು ಕೋಪ ಬಂದಿತು. ಅವನು ಶಾಪವನ್ನು ಅನ್ಯಾಯವೆಂದು ಪರಿಗಣಿಸಿದ. ತನ್ನನ್ನು ವಿಧಿಯ ಬಲಿಪಶು ಎಂದು ಅಂದುಕೊಂಡ. ತನ್ನ ಸ್ವಂತ ಕೃತ್ಯಗಳು ಈ ಪರಿಸ್ಥಿತಿಗೆ ಕಾರಣವಾಗಿವೆ ಎಂದು ಅವನು ಪರಿಗಣಿಸಲೇ ಇಲ್ಲ.
ಸಮಯ ಕಳೆದಂತೆ ಪರೀಕ್ಷಿತ ಆಳವಾಗಿ ಯೋಚಿಸತೊಡಗಿದ. ಅವರು ಜ್ಞಾನಿಯಾದ ಶುಕ ಮುನಿಯಿಂದ ಸಲಹೆ ಪಡೆದ. ಶುಕ ಮುನಿಯು ಶಾಪದ ಹೊರತಾಗಿಯೂ ಗಹನವಾಗಿ ವಿಚಾರಮಾಡುವಂತೆ ತಿಳಿಸಿದನು. ಪರೀಕ್ಷಿತನಿಗೆ ತನ್ನ ಕರ್ಮಗಳನ್ನು ಅವಲೋಕಿಸಲು ಹೇಳಿದನು. ತನ್ನ ಬೇಜವಾಬ್ದಾರಿಯುತ ವರ್ತನೆಯು ಶಾಪಕ್ಕೆ ಕಾರಣವಾಯಿತು ಎಂದು ಪರೀಕ್ಷಿತನಿಗೆ ಆಗ ಅರ್ಥವಾಯಿತು. ಅವನ ಅನಿಯಂತ್ರಣ ಮತ್ತು ಅಗೌರವದ ವರ್ತನೆಯು ಅವನ ಅವನತಿಗೆ ಕಾರಣವಾಯಿತು.
ಇದನ್ನು ಮನಗಂಡ ಪರೀಕ್ಷಿತನು ತನ್ನ ವಿಧಾನವನ್ನು ಬದಲಾಯಿಸಿದ. ಅವನು ವಿಧಿಯನ್ನು ದೂಷಿಸುವುದನ್ನು ನಿಲ್ಲಿಸಿದ. ಬದಲಿಗೆ ಆತ್ಮಾವಲೋಕನದ ಮೇಲೆ ಕೇಂದ್ರೀಕರಿಸಿದ. ಶುಕಮುನಿಯು ಹೇಳಿದಂತೆ ಭಾಗವತ ಪುರಾಣ ಶ್ರವಣ ಮಾಡುತ್ತಾ ತನ್ನ ಕೊನೆಯ ದಿನಗಳನ್ನು ಕಳೆದ. ಈ ಪವಿತ್ರ ಗ್ರಂಥವು ಅವನಿಗೆ ಕರ್ಮ, ಧರ್ಮ ಮತ್ತು ಆತ್ಮದ ಬಗ್ಗೆ ಕಲಿಸಿತು. ಆಳವಾದ ಆಧ್ಯಾತ್ಮಿಕ ಅಜ್ಞಾನದಿಂದಾಗಿ ತನಗೆ ದುರದೃಷ್ಟವು ಸಂಭವಿಸಿದೆ ಎಂದು ಪರೀಕ್ಷಿತನು ಕಂಡುಕೊಂಡ.
ಪರೀಕ್ಷಿತನ ದಂತಕಥೆಯು ನಮಗೆ ಒಂದು ಪ್ರಮುಖ ಪಾಠವನ್ನು ಕಲಿಸುತ್ತದೆ. ಸಮಸ್ಯೆಗಳು ಸಾಮಾನ್ಯವಾಗಿ ನಮ್ಮೊಳಗೇ ಇರುವ ತಪ್ಪು ನಡವಳಿಕೆಗಳಿಂದ ಬರುತ್ತವೆ. ನಮ್ಮ ತಪ್ಪುಗಳನ್ನು ಗುರುತಿಸುವ ಮೂಲಕ ಮತ್ತು ಬುದ್ಧಿವಂತಿಕೆಯಿಂದ ವರ್ತಿಸುವ ಮೂಲಕ, ನಾವು ಸವಾಲುಗಳನ್ನು ಬೆಳವಣಿಗೆಗೆ ಅವಕಾಶಗಳಾಗಿ ಪರಿವರ್ತಿಸಬಹುದು.
ಅವೆರಡು ಒಂದೇ ವರ್ಗಕ್ಕೆ ಸೇರಿದವಲ್ಲ. ಭಗವಂತನ ಮೇಲಿನ ಬಯಕೆಯು ಕಾಣಿಸಿಕೊಂಡಾಗ, ಲೌಕಿಕ ವಸ್ತುಗಳ ಮೇಲಿನ ಬಯಕೆಯು ಮಾಯವಾಗಲು ಪ್ರಾರಂಭಿಸುತ್ತದೆ. ಲೌಕಿಕ ವಸ್ತುಗಳ ಮೇಲಿನ ಆಸೆ ಸ್ವಾರ್ಥ. ಭಗವಂತನ ಬಯಕೆ ನಿಸ್ವಾರ್ಥ.
ಮಿತ್ರ ಮತ್ತು ವರುಣ ಎಂಬ ಇಬ್ಬರು ದೇವತೆಗಳು ಮೂಲತಃ ಒಟ್ಟಿಗೆ ಸೇರಿದ್ದರು. ಅವರು ಆದಿತ್ಯನ ವಿವಿಧ ರೂಪಗಳು. ನಂತರ ಅವರು ಬೇರ್ಪಟ್ಟರು. ಅವರ ವೀರ್ಯವನ್ನು ಮಡಕೆಯಲ್ಲಿ ಇರಿಸಲಾಗಿತ್ತು. ಆ ಮಡಕೆಯಿಂದ ಸ್ವಲ್ಪ ಸಮಯದ ನಂತರ ಅಗಸ್ತ್ಯ ಮತ್ತು ವಸಿಷ್ಠ ಹೊರಬಂದರುಅಗಸ್ತ್ಯ ಮುನಿ ಹುಟ್ಟಿದ್ದು ಹೇಗೆ? - ಮಿತ್ರ ಮತ್ತು ವರುಣ ಎಂಬ ಇಬ್ಬರು ದೇವತೆಗಳು ಮೂಲತಃ ಒಟ್ಟಿಗೆ ಸೇರಿದ್ದರು. ಅವರು ಆದಿತ್ಯನ ವಿವಿಧ ರೂಪಗಳು. ನಂತರ ಅವರು ಬೇರ್ಪಟ್ಟರು. ಅವರ ವೀರ್ಯವನ್ನು ಮಡಕೆಯಲ್ಲಿ ಇರಿಸಲಾಗಿತ್ತು. ಆ ಮಡಕೆಯಿಂದ ಸ್ವಲ್ಪ ಸಮಯದ ನಂತರ ಅಗಸ್ತ್ಯ ಮತ್ತು ವಸಿಷ್ಠ ಹೊರಬಂದರು (ಐವಿಎಫ್ನಂತೆಯೇ)..