101.0K
15.2K

Comments

Security Code

30032

finger point right
ಹರೇ ಕೃಷ್ಣ ಪ್ರಭು ತುಂಬಾ ಮನಸಿಗೆ ತುಂಬಾ ಖುಷಿ ಆಯ್ತು -User_siknmu

ಮತ್ತೆ, ಮತ್ತೆ ಈ ಹಾಡು ಕೇಳಬೇಕು ಅನಿಸುತ್ತೆ. ನಿಜವೇ ಇದು ಎಲ್ಲಾ ನು ಮಾಯವೆ. ಎಂತಾ ಅದ್ಭುತ,ಸಾಲುಗಳು -Prabu R

ಸನಾತನ ಧರ್ಮದ ಉಳಿವಿಗಾಗಿ ಹಾಗೂ ಮುಂದಿನ ಪೀಳಿಗೆಗೆ ಧರ್ಮ ಮತ್ತು ಆಧ್ಯಾತ್ಮದ ದಾರಿ ದೀವಿಗೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೇದಧಾರಕ್ಕೆ ಇದರ ಎಲ್ಲಾ ಗೌರವಾನ್ವಿತ ಕಾರ್ಯಕರ್ತರಿಗೆ ಸಚ್ಚಿದಾನಂದೇಶ್ವರನ ಸಂಪೂರ್ಣ ಅನುಗ್ರಹ ಉಂಟಾಗಲಿ ಎಂದು ಪರಮೇಶ್ವರನಲ್ಲಿ ನನ್ನ ಮನಃಪೂರ್ವಕ ಪ್ರಾರ್ಥನೆ ಸರ್ವೇ ಜನೋ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಈಶ್ವರ ತತ್ವವನ್ನು ಜಗತ್ತಿಗೆ ಪ್ರಚರಪಡಿಸುತ್ತಿರುವ ನಿಮ್ಮ ವಾಹಿನಿಗೆ ನೂರು ನಮನಗಳು -ಸುರೇಶ್ ಎನ್ ಎಸ್

ಸನಾತನ ಧರ್ಮದ ಬಗ್ಗೆ ಮಾಹಿತಿಯ ಖಜಾನೆ -ಲಕ್ಷ್ಮಿ

Read more comments

ನೀ ಮಾಯೆಯೊಳಗೊ
ನಿನ್ನೊಳು ಮಾಯೆಯೊ

ನೀ ದೇಹದೊಳಗೊ
ನಿನ್ನೊಳು ದೇಹವೊ

ಬಯಲು ಆಲಯದೊಳಗೊ
ಆಲಯವು ಬಯಲೊಳಗೊ
ಬಯಲು ಆಲಯವೆರಡು
ನಯನದೊಳಗೊ
ನಯನ ಬುದ್ಧಿಯೊಳಗೊ
ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು
ನಿನ್ನೊಳಗೊ ಹರಿಯೆ

ಸವಿಯು ಸಕ್ಕರೆಯೊಳಗೊ
ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಗಳೆರಡು
ಜಿಹ್ವೆಯೊಳಗೊ
ಜಿಹ್ವೆ ಮನಸಿನೊಳಗೊ
ಮನಸು ಜಿಹ್ವೆಯೊಳಗೊ
ಜಿಹ್ವೆ ಮನಸುಗಳೆರಡು
ನಿನ್ನೊಳಗೊ ಹರಿಯೆ

ಕುಸುಮದೊಳು ಗಂಧವೊ
ಗಂಧದೊಳು ಕುಸುಮವೊ
ಕುಸುಮ ಗಂಧಗಳೆರಡು
ಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ
ನಿನ್ನೊಳಗೊ

Knowledge Bank

ವ್ಯಾಸ ಮುನಿಗಳನ್ನು ಏಕೆ ವೇದವ್ಯಾಸರೆಂದು ಕರೆಯಲಾಯಿತು?

ವ್ಯಾಸರು ವೇದದ ಮುಖ್ಯಾಂಶವನ್ನು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂದು ನಾಲ್ಕು ಭಾಗಗಳಲ್ಲಿ ವಿಭಾಗಿಸಿದ್ದರಿಂದ ಅವರನ್ನು ವೇದವ್ಯಾಸರೆಂದು ಕರೆಯಲಾಯಿತು.

ಸುರಭಿ ಎಂಬ ದೈವಿಕ ಹಸು ಹುಟ್ಟಿದ್ದು ಹೇಗೆ?

ಒಮ್ಮೆ ಬ್ರಹ್ಮನು ಅತಿಯಾಗಿ ಅಮೃತವನ್ನು ಕುಡಿದು ವಾಂತಿ ಮಾಡಿಕೊಂಡನು. ಅದರಿಂದ ಸುರಭಿ ಹುಟ್ಟಿದಳು.

Quiz

ಶೌರಿ ಎಂದು ಯಾವ ದೇವರನ್ನು ಕರೆಯುತ್ತಾರೆ?

Recommended for you

ವಿಜಯಕ್ಕಾಗಿ ಮಂತ್ರ

ವಿಜಯಕ್ಕಾಗಿ ಮಂತ್ರ

ಫಟ್ ಉಚ್ಚಾಟಯೋಚ್ಚಾಟಯ ಠಃ ಠಃ ಸ್ತಂಭಯ ಸ್ತಂಭಯ ಖೇಂ ಖೇಂ ಮಾರಯ ಮಾರಯ....

Click here to know more..

ಎಲ್ಲಾ ಆಸೆಗಳನ್ನು ಪೂರೈಸುವ ಮಂತ್ರ

ಎಲ್ಲಾ ಆಸೆಗಳನ್ನು ಪೂರೈಸುವ ಮಂತ್ರ

ಪುನಸ್ತ್ವಾದಿತ್ಯಾ ರುದ್ರಾ ವಸವಃ ಸಮಿಂಧತಾಂ ಪುನರ್ಬ್ರಹ್ಮಾಣೋ ವ�....

Click here to know more..

ಹನುಮದ್ ರಕ್ಷಾ ಕವಚ

ಹನುಮದ್ ರಕ್ಷಾ ಕವಚ

ಪ್ರಣಮ್ಯ ಶ್ರೀಗಣೇಶಂ ಚ ಶ್ರೀರಾಮಂ ಮಾರುತಿಂ ತಥಾ . ರಕ್ಷಾಮಿಮಾಂ ಪಠ....

Click here to know more..