ರಾಮ ಮಂತ್ರವ ಜಪಿಸೋ ಹೇ ಮನುಜ|| ಪ ||
ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ
ಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರ|| ಅ.ಪ ||
ಕುಲಹೀನನಾದರು ಕೂಗಿ ಜಪಿಸುವ ಮಂತ್ರ
ಸಲೆ ಬೀದಿ ಬೀದಿಯೊಳು ನುಡಿವ ಮಂತ್ರ
ಹಲವು ಪಾಪಂಗಳ ಹತಗೊಳಿಸುವ ಮಂತ್ರ
ಸುಲಭದಿಂದಲಿ ಸ್ವರ್ಗ ಸೂರೆಗೊಂಬುವ ಮಂತ್ರ|| ೧ ||
ಸ್ನಾನ ಮೌನಂಗಳಿಗೆ ಸಾಧನದ ಮಂತ್ರ
ಜ್ಞಾನಿಗಳು ಮನದಿ ಧ್ಯಾನಿಪ ಮಂತ್ರ
ಹೀನ ಗುಣಂಗಳ ಹಿಂಗಿಸುವ ಮಂತ್ರ
ಏನೆಂಬೆ ವಿಭೀಷಣಗೆ ಪಟ್ಟಗಟ್ಟಿದ ಮಂತ್ರ || ೨ ||
ಸಕಲ ವೇದಂಗಳಿಗೆ ಸಾರವೆನಿಪ ಮಂತ್ರ
ಮುಕುತಿ ಮಾರ್ಗಕೆ ಇದೆ ಮೂಲ ಮಂತ್ರ
ಭಕುತಿ ರಸಕೆ ಬಟ್ಟೆ ಒಮ್ಮೆ ತೋರುವ ಮಂತ್ರ
ಸುಖ ನಿಧಿ ಪುರಂದರ ವಿಠಲನ ಮಂತ್ರ|| ೩ ||
ಬೃಹಸ್ಪತಿ ದೇವರ ಪುರೋಹಿತರು ಮತ್ತು ಗುರು. ಅವರು ದೇವರಿಗಾಗಿ ಯಜ್ಞ ಮತ್ತು ಧಾರ್ಮಿಕ ವಿಧಿಗಳನ್ನು ನಡೆಸುತ್ತಾರೆ. ಅವರನ್ನು ದೇವಗುರು ಎಂದೂ ಕರೆಯುತ್ತಾರೆ. ಪುರಾಣ ಮತ್ತು ವೇದ ಸಾಹಿತ್ಯದಲ್ಲಿ, ಬೃಹಸ್ಪತಿಯನ್ನು ಜ್ಞಾನ ಮತ್ತು ವಿದ್ಯೆಯ ದೇವರೆಂದು ಪರಿಗಣಿಸಲಾಗುತ್ತದೆ ಮತ್ತು ಅವರು ದೇವರಿಗೆ ಧರ್ಮ ಮತ್ತು ನೀತಿಯುಗಳನ್ನು ಬೋಧಿಸುತ್ತಾರೆ. ಬೃಹಸ್ಪತಿ ಗ್ರಹಗಳಲ್ಲಿ ಗುರುವಿನ ಹೆಸರಿನಿಂದ ಕೂಡಾ ಪ್ರಸಿದ್ಧರಾಗಿದ್ದಾರೆ. ಬೃಹಸ್ಪತಿ ಹಲವು ವೇದ ಮತ್ತು ಪುರಾಣ ಗ್ರಂಥಗಳಲ್ಲಿ ದೇವರ ಪ್ರಮುಖ ಪುರೋಹಿತರೆಂದು ಉಲ್ಲೇಖಿಸಲಾಗಿದೆ.
ಅಹಿಂಸೆಯು ಧರ್ಮದ ಅತ್ಯುನ್ನತ ರೂಪವಾಗಿದೆ.