ಮಾದೇವ ಮಾದೇವ
ಮಾದೇವ ಮಾದೇವ
ಮಾ_ದೇ_ವ ಮಾದೇವ
ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪ
ಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಮ್ಗೆ
ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿ ದಳವ
ಮಾದಪ್ಪನ ಪೂಜೆಗೆ ಬಂದು ಮಾದೇವ ನಿಮ್ಮ
ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ತಪ್ಪಾಲೆ ಬೆಳಗಿವಿನೀ ತುಪ್ಪವ ಕಾಸಿವ್ನಿ
ಕಿತ್ತಾಳೆ ಹಣ್ಣ ತಂದ್ವಿನಿ ಮಾದೇವ ನಿಮ್ಗೆ
ಕಿತ್ತಾಳೆ ಹಣ್ಣ ತಂದೀವ್ನಿ ಮಾದಪ್ಪ
ಕಿತ್ತಾಡಿ ಬರುವೆ ಪರಸೆಗೆ ಮಹಾದೇವ ನಿಮ್ಗೆ
ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಬೆಟ್ಟತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ
ಬೆಟ್ಟದ್ಮಾದೇವ ಗತಿ ಎಂದು ಮಾದೇವ ನೀವೆ
ಮಾದೇವ ನೀವೇ, ಮಾದೇವ ನೀವೇ, ಮಾದೇವ ನೀವೆ
ಬೆಟ್ಟತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ
ಬೆಟ್ಟದ್ಮಾದೇವ ಗತಿ ಎಂದು ಮಾದೇವ ನೀವೆ
ಬೆಟ್ಟದ್ಮಾದೇವ ಗತಿ ಎಂದು ಅವರಿನ್ನೂ
ಹಟ್ಟಿ ಹಂಬಲವ ಮರೆತಾರೋ ಮಾದೇವ ನಿಮ್ಮ
ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಉಚ್ಛೆಳ್ಳು ಹೂವಂಗೆ ಹೆಚ್ಚ್ಯವೋ ನಿನ್ನ ಪರುಸೆ
ಹೆಚ್ಚಳಗಾರ ಮಾದಯ್ಯ, ಮಾದಯ್ಯ ನೀನೆ
ಹೆಚ್ಚಳಗಾರ ಮಾದಯ್ಯ ಏಳುಮಲೈಯ
ಹೆಚ್ಚೇವು ಕೌದಳ್ಳಿ ಕಣಿವೆಲಿ ಮಾದೇವ ನಿಮ್ಮ
ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ ನಿಮ್ಮ, ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ
ಸೂಜುಗದ ಸೂಜು ಮಲ್ಲಿಗೆ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ ಆ ಆ ಆ…
ಸೂಜುಗದ ಸೂಜು ಮಲ್ಲಿಗೆ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ
ಸೂಜುಗದ ಸೂಜು ಮಲ್ಲಿಗೆ
ಮಾದೇವ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ
ಸೂಜುಗದ ಸೂಜು ಮಲ್ಲಿಗೆ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ, ಮಾದೇವ
ಭಕ್ತಿ ಯೋಗವು ನಮ್ಮಲ್ಲಿ ದೈವಿಕ ಪ್ರಜ್ಞೆಯನ್ನು ಬೆಳೆಸುತ್ತದೆ ಪ್ರೇಮ,ಕೃತಜ್ಞತೆ ಹಾಗೂ ಸಮರ್ಪಣಾ ಭಾವಗಳು ನಮ್ಮ ಹೃದಯದಲ್ಲಿ ಮೂಡುವಂತೆ ಮಾಡುತ್ತ
ವರುಣರು ಚಾಕ್ಷುಷ ಮನ್ವಂತರದ ಅಂತ್ಯದಲ್ಲಿ ಒಂದು ಯಾಗವನ್ನು ಮಾಡಿದರು. ಅದು ಋಷಿಗಳು ಭೂಮಿಯ ಮೇಲೆ ಜನ್ಮತಾಳಲು ಕಾರಣವಾಯಿತು. ಹೋಮ ಕುಂಡದಿಂದ ಮೊದಲು ಹೊರಬಂದವರು ಭೃಗು.
ಶಾಂತಿ ಮತ್ತು ಸಮೃದ್ಧಿಗಾಗಿ ಭಗವಾನ್ ವಿಷ್ಣುವಿನ ಮಂತ್ರ
ಓಂ ನಮೋ ಭಗವತೇ ವಿಷ್ಣವೇ ಶ್ರೀಸಾಲಿಗ್ರಾಮನಿವಾಸಿನೇ ಸರ್ವಾಭೀಷ್ಟ�....
Click here to know more..ವೈವಾಹಿಕ ಆನಂದ ಮತ್ತು ಶಾಶ್ವತ ಸಮೃದ್ಧಿಗಾಗಿ ಶ್ರೀ ರಾಮ ಮಂತ್ರ
ಸೀತಾನಾಥಾಯ ವಿದ್ಮಹೇ ಜಗನ್ನಾಥಾಯ ಧೀಮಹಿ ತನ್ನೋ ರಾಮಃ ಪ್ರಚೋದಯಾತ....
Click here to know more..ರಾಮ ಪದ್ಮ ಸ್ತೋತ್ರ
ನಮಸ್ತೇ ಪ್ರಿಯಪದ್ಮಾಯ ನಮಃ ಪದ್ಮಾಪ್ರಿಯಾಯ ತೇ . ನಮಃ ಪದ್ಮಶ್ರಿಯೇ ....
Click here to know more..