ಯುಗಾದಿಯು ವರ್ಷದ ಮೊದಲ ದಿನ, ಮೊದಲ ಹಬ್ಬ. ಇಂದಿನಿಂದ ವಸಂತ ಋತುವಿನ ಆರಂಭ.ಎಲ್ಲೆಡೆಯೂ ಸಡಗರದ ವಾತಾವರಣ. ಹೊಸ ಚಿಗುರು, ಹಸಿರು, ಹೂ ಗಿಡಗಳು, ಹಕ್ಕಿಗಳ ಕಲರವ ಇತ್ಯಾದಿಗಳು ಪ್ರಕೃತಿಯಲ್ಲಿ ಹೊಸ ಚೇತನವನ್ನೇ ತಂದಿರುತ್ತದೆ.ಇಂತಹ ಹಬ್ಬದ ಸಂದರ್ಭದಲ್ಲಿ, ಬೆಳಿಗ್ಗೆ ಬೇಗನೇ ಎದ್ದು, ಸ್ನಾನಾದಿಗಳನ್ನು ಮುಗಿಸಿ, ದೇವರ ಮುಂದೆ ದೀಪ ಹಚ್ಚಿ, ಪ್ರಾರ್ಥನೆ ಸಲ್ಲಿಸಿ,ತಂದೆತಾಯಿಯರಿಗೆ ವಂದಿಸಬೇಕು. ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಬೇಕು. ದೇವರಿಗ ಪಂಚಾಮೃತ ಅಭಿಷೇಕ ದೊಂದಿಗೆ ಪೂಜೆ ಮಾಡಬೇಕು. ಯೋಗ್ಯತೆಗೆ ಅನುಗುಣವಾಗಿ ಪಕ್ವಾನ್ನ ಗಳನ್ನು ತಯಾರಿಸಿ, ದೇವರಿಗೆ ಸಮರ್ಪಿಸಬೇಕು. ಈ ದಿನ ಹೋಳಿಗೆ ಮಾಡುವುದು ಸಂಪ್ರದಾಯ. ಜೊತೆಗೆ ಬೇವು ಬೆಲ್ಲ(ಕಹಿಬೇವಿನ ಹೂ, ಬೇವಿನ ಚಿಗುರು, ಮೆಣಸು ಉಪ್ಪು,ಇಂಗು, ಜೀರಿಗೆ,ಓಮ, ಹುಣಸೆಹಣ್ಣು, ಬೆಲ್ಲ ಇವುಗಳ ಮಿಶ್ರಣ ) ವನ್ನು ನೈವೇದ್ಯಕ್ಕೆ ಇಡಬೇಕು. ಇದನ್ನು ಸೇವಿಸುವಾಗ 'ಶತಾಯುರ್ವಜ್ರ ದೇಹಾಯ ಸರ್ವ ಸಂಪತ್ಕರಾಯ ಚ ಸರ್ವಾರಿಷ್ಟ ವಿನಾಶಯ ನಿಂಬಕದಳ ಭಕ್ಷಣಂ 'ಎಂದು ಹೇಳಬೇಕು. ವರ್ಷವಿಡೀ ಬರುವ ಸುಖದುಃಖಗಳನ್ನು ಸಮಾನವಾಗಿ ಕಾಷಬೇಕೆಂಬ ಸಂದೇಶ ಇದರಿಂದ ಸಿಗುತ್ತದೆ. ಸಾಯಂಕಾಲ ಆ ವರ್ಷದ ಆಗುಹೋಗುಗಳನ್ನು ತಿಳಿಯಲು ಪಂಚಾಂಗ ಶ್ರವಣ ಮಾಡಬೇಕು. ಮಳೆಬೆಳೆ ಗ್ರಹಣಾದಿಗಳ ವಿಚಾರವು ಇದರಿಂದ ತಿಳಿಯುವುದು ಒಂದು ಉದ್ದವಾದ ಕೋಲಿಗೆ ತಂಬಿಗೆಯನ್ನು ಕಟ್ಟಿ, ಅದರಲ್ಲಿ ಕುಬಸದ ಖಣ,ಮಾವಿನ ಹಾಗೂ ಬೇವಿನ ಚಿಗುರು, ಹೂಗಳನ್ನು ಇಟ್ಟು, ಎಲ್ಲರಿಗೂ ಕಾಣುವಂತಹ ಜಾಗದಲ್ಲಿ ನಿಲ್ಲಿಸಿ, ಪೂಜೆ ಮಾಡುತ್ತಾರೆ. ದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ, ದೀಪೋತ್ಸವ ಗಳನ್ನು ಮಾಡುತ್ತಾರೆ. ಸಾಯಂಕಾಲ ಭಜನೆ ಹಾಗೂ ಸಾಸಂಕೃತಿಕ ಕಾರ್ಯಗಳನ್ನು ಏರ್ಪಡಿಸಿ ಇಡೀ ದಿನವನ್ನು ಸಂತೋಷದಿಂದ ಕಳೆಯುತ್ತಾರೆ. ಒಂದು ತಿಂಗಳ ವ್ರತಾಚರಣೆಯ ನಂತರ ಬ್ರಾಹ್ಮಣ ರಿಗೆ ಉದಕಕುಂಭ ದಾನಕೊಡುವ ಪದ್ಧತಿ ಮೊದಲು ಇತ್ತು. ಸಂಪ್ರದಾಯಗಳಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆಗಳಿದ್ದರೂ, ದೇಶದ ಎಲ್ಲೆಡೆ ಸಂಭ್ರಮದಿಂದ ಯುಗಾದಿಹಬ್ಬವನ್ನು ಆಚರಿದಲಾಗುತ್ತದೆ.
1. ಕಲಿಕೆಯ ಸೌಲಭ್ಯಕ್ಕಾಗಿ. 2.ಯಜ್ಞಗಳಲ್ಲಿ ಅವುಗಳ ಬಳಕೆಯ ಆಧಾರದ ಮೇಲೆ ವೇದವನ್ನು ವಿಂಗಡಿಸಲಾಗಿದೆ ಮತ್ತು ಸಂಕಲಿಸಲಾಗಿದೆ.
ಅನಾದಿ ಕಾಲದಿಂದ, ತಲೆತಲಾಂತರವಾಗಿ ಮುಂದುವರೆದುಕೊಂಡು ಬಂದಿರುವ, ಕೇವಲ ಒಂದು ವ್ಯಕ್ತಿ ಗೆ ಸಂಬಂಧ ಪಡದಿರುವ, ದಂತಕಥೆಗಳಿಗೆ ಐತಿಹ್ಯ ಎನ್ನಲಾಗುತ್ತದೆ.ಈ ಐತಿಹ್ಯವು, ವಿದ್ವಾಂಸರಿಂದ ಹಾಗೂ ಒಂದು ವರ್ಗದ ಜನರಿಂದ, ಜನಜನಿತ ವಾಗಿ ಒಪ್ಪಿಕೊಂಡು, ನಿರಂತರವಾಗಿ ನಂಬಿಕೊಂಡು ಬಂದಿರುವ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ವೃತ್ತಾಂತವಾಗಿರುತ್ತದೆ