ಧರ್ಮವು ಭಾರತೀಯರಾದ ನಮ್ಮೆಲ್ಲರ ಮನೆ ಮನಗಳ ಅಡಿಗಲ್ಲು. ಸಂಸ್ಕೃತಿಯನ್ನು ರೂಪಿಸುವುದು ಹಾಗೂ ರಾಷ್ಟ್ರೀಯ ಭಾವನೆಗಳನ್ನು ವ್ಯಕ್ತಪಡಿಸುವುದು ಇದರ ಉದ್ದೇಶ. ಧರ್ಮವು ಬದುಕೆಂ ಬ ಮರದ ಬೇರು ಹಾಗೂ ಕಾಂಡವನ್ನು ಪ್ರತಿನಿಧಿಸುತ್ತಾ ಬದುಕಿನ ವಿವಿಧ ಮಗ್ಗುಲುಗಳೆಂಬ ಹಲವಾರು ಶಾಖೆಗಳನ್ನು ಪೋಷಿಸುವ ಹೊಣೆ ಇದರದು. ಧರ್ಮದ ನಂಬಿಕೆಗಳ ಮೇಲೆ ಬಲಗೊಂಡ ತತ್ವ ಹಾಗೂ ಕಲೆ ಇದರ ಪ್ರಮುಖ ಭಾಗಗಳು. ಈ ಧರ್ಮದ ತಳಹದಿಯು ಜ್ಞಾನ ಹಾಗೂ ಸೌಂದರ್ಯವೆಂಬ ಅಮೂಲ್ಯ ವಸ್ತ್ರವನ್ನು ಅವಿನಾಭಾವದೊಂದಿಗೆ ಪ್ರೀತಿಯಿಂದ ಹೆಣೆಯುತ್ತಾ ಒಂದಕ್ಕೊಂದು ಪೂರಕವಾಗಿಸಿದೆ ಭಾರತದಮಟ್ಟಿಗೆ ಧರ್ಮವು ಕೇವಲ ಸಂಪ್ರದಾಯಗಳ ಹೊರೆಯಾಗಿರದೆ, ಆಲೋಚನೆ, ಸೃಜನಾತ್ಮಕತೆ, ಸಾಮಾಜಿಕ ಮೌಲ್ಯಗಳ ಮೇಲೆ ಪ್ರಭಾವ ಬೀರುವ ಅಗಾಧ ಶಕ್ತಿಯಾಗಿದೆ. ದೈನಂದಿನ ಜೀವನ ದೊಂದಿಗೆ ಭಾರತೀಯ ಭಾವವನ್ನು ಹಾಸುಹೊಕ್ಕಾಗಿ ಹೆಣೆಯುತ್ತಾ ಬೇರೂರಿದ ಆಧ್ಯಾತ್ಮಿಕತೆಯನ್ನು ಮುಂದಿನ ಜನಾಂಗಕ್ಕೆ ಉಡುಗೊರೆಯಾಗಿ ಕೊಡುತ್ತಾ ಸಾಂಸ್ಕೃತಿಕ ಪರಂಪರೆಯನ್ನು ನಿರಂತರವಾಗಿ ಮುನ್ನಡೆಸುತ್ತದೆ.
ಪ್ರಕೃತಿ ಮತ್ತು ಬ್ರಹ್ಮಾಂಡದೊಂದಿಗೆ ಸಾಮರಸ್ಯದಿಂದ ಬದುಕಲು ವೇದಗಳು ನಮಗೆ ಮಾರ್ಗದರ್ಶನ ನೀಡುತ್ತವೆ.