ಶ್ರೀ ಕೃಷ್ಣ ಪರಮಾತ್ಮ ಗೀತೆಯಲ್ಲಿ ಹೇಳುತ್ತಾನೆ 'ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಂ..'
ಯಾರು ನನ್ನನ್ನು ಹೇಗೆ ಭಜಿಸುತ್ತಾರೆಯೋ, ನಾನು ಹಾಗೆಯೇ ಪ್ರತಿಕ್ರಿಯಿಸುತ್ತೇನೆ.
ದೇವರ ಕುರಿತಾದ ಈ ಸತ್ಯವನ್ನು ಅರ್ಥಮಾಡಿಕೊಳ್ಳಬೇಕು.
ಪಾಂಡವರು ಕುರುಕ್ಷೇತ್ರ ಯುದ್ಧವನ್ನು ಗೆದ್ದರು, ಆದರೆ ಪಾಂಡವರ ಎಲ್ಲಾ ಮಕ್ಕಳನ್ನು ಏಕೆ ಕೊಲ್ಲಲಾಯಿತು?
ಅವರ ಹೆಚ್ಚಿನ ಆಪ್ತರು ಸಹ ಸತ್ತರು, ಸರಿ?
ಕಾರಣ, ಪಾಂಡವರು ದೇವರನ್ನು ಮಾರ್ಗದರ್ಶಕ ಮತ್ತು ಸ್ನೇಹಿತನಂತೆ ಕಂಡರು, ರಕ್ಷಕನಾಗಿ ಅಲ್ಲ.
ನಾವು ಹೋರಾಡುತ್ತೇವೆ, ನೀನು ನಮಗೆ ಕೇವಲ ಮಾರ್ಗದರ್ಶನ ನೀಡುತ್ತಿ ಎಂದು ಅವರು ಭಾವಿಸಿದರು.
ಆದರೆ ಉತ್ತರೆ, ‘ಭಗವಂತ ನನಗೆ ಬೇರೆ ಯಾರೂ ಇಲ್ಲ’ ಎಂದು ಅಳುತ್ತಾಳೆ.
ಆಗ ಭಗವಂತ ಅವಳ ಗರ್ಭವನ್ನು ಬ್ರಹ್ಮಾಸ್ತ್ರದಿಂದ ರಕ್ಷಿಸಿದನು.
ನಾವು ದೇವರಿಂದ ಏನನ್ನು ನಿರೀಕ್ಷಿಸುತ್ತೇವೆಯೋ ಅದನ್ನೇ ದೇವರು ನಮಗೆ ಕೊಡುತ್ತಾನೆ.
ನಾವು ದೇವರನ್ನು ಮಾರ್ಗದರ್ಶಿಯಾಗಿ ನೋಡಿದರೆ, ದೇವರು ನಮಗೆ ಅನೇಕ ಮೂಲಗಳಿಂದ ಮಾರ್ಗದರ್ಶನ ನೀಡುತ್ತಾನೆ.
ನಾವು ದೇವರನ್ನು ಸಂರಕ್ಷಕನಾಗಿ ನೋಡಿದರೆ, ದೇವರು ನಮ್ಮನ್ನು ಎಲ್ಲಾ ಅಪಾಯಗಳಿಂದ ರಕ್ಷಿಸುತ್ತಾನೆ.
ನಾವು ದೇವರನ್ನು ಮಗುವಿನಂತೆ ನೋಡಿದರೆ, ದೇವರು ಅನೇಕ ಮಕ್ಕಳ ಮೂಲಕ ಸಂತೋಷವನ್ನು ತರುತ್ತಾನೆ.
ಕೃಷ್ಣನಷ್ಟೇ ಅಲ್ಲ, ಎಲ್ಲ ದೇವತೆಗಳೂ ಹೀಗೆಯೇ.
ಜೀವನದಲ್ಲಿ ನಾವು ಅನೇಕ ಬಾರಿ ನಮ್ಮ ಅರಿವು ಹಾಗೂ ವಿವೇಚನೆ ಯನ್ನು ಮರೆಮಾಚುವ ಭ್ರಮೆಗೆ ಒಳಪಡುತ್ತೇವೆ.ಈ ಭ್ರಮೆಗಳು ಒಂದೊಂದು ಸಲ ಒಂದೊಂದು ಥರ.ತಪ್ಪು ಅಭಿಪ್ರಾಯಗಳು, ತಪ್ಪು ನಂಬಿಕೆಗಳು, ನಮ್ಮ ಗುರಿಯನ್ನು ತಲುಪಲು ಅಡ್ಡಿ ಆತಂಕಗಳನ್ನು ತಂದಿಡುವ ಅನವಶ್ಯಕವಾದ ಸವಾಲುಗಳು... ಇತ್ಯಾದಿಗಳು. ಆದ್ದರಿಂದ ಉತ್ತಮ ಜ್ಞಾನ ಮತ್ತು ಅರಿವನ್ನು ಬೆಳೆಸಿಕೊಳುವುದು ಅಗತ್ಯ. ಪರಿಶೀಲಿಸಿ ನೋಡುವ ಗುಣವನ್ನು ಅರಿತಿರಬೇಕು. ಹೊಳೆಯುವ ವಸ್ತುಗಳೆಲ್ಲಾ ಬಂಗಾರವಲ್ಲ.ಸತ್ಯಾಸತ್ಯ ಜ್ಞಾನ, ಆಂತರಿಕ ಜ್ಞಾನ, ವಿವೇಚನಾಶೀಲತೆಗಳಿಂದ ಸಂಸಾರ ಸಾಗರವನ್ನು ದಾಟುವುದು ಹಾಗೂ ಪರಮಾತ್ಮನ ಸಾಕ್ಷಾತ್ಕಾರ ಪಡೆದುಕೊಳ್ಳುವುದು ಸಾಧ್ಯ. ಬದುಕಿನ ಜಂಜಾಟಗಳನ್ನು, ಪ್ರಬುದ್ಧ ಮನಸ್ಸಿನಿಂದ ಗೆಲ್ಲುವುದಕ್ಕೆ ಖಂಡಿತಾ ಸಾಧ್ಯ. ನಿಜವಾದ ಜ್ಞಾನ ವಿರುವುದೇ ಜೀವನದ ಉದ್ದೇಶವನ್ನು ಅರಿಯುವುರಲ್ಲಿ, ನಮ್ಮ ಯೋಗ್ಯತೆ ಯನ್ನು ಅರಿತು ಉನ್ನತ ವಾದುದನ್ನು ಸಾಧಿಸುವುದರಲ್ಲಿ.
ದುರ್ದಮನು ವಿಶ್ವಾವಸು ಎಂಬ ಒಬ್ಬ ಗಂಧರ್ವನ ಮಗ.ಒಂದು ಸಲ ಆತ ತನ್ನ ಸಾವಿರಾರು ಜನ ಪತ್ನಿಯರೊಂದಿಗೆ ಕೈಲಾಸದ ಬಳಿಯ ಸರೋವರದಲ್ಲಿ ಆನಂದದಿಂದ ವಿಹರಿಸುತ್ತಿದ್ದ . ಸಮೀಪದಲ್ಲಿಯೇ ತಪಸ್ಸನ್ನು ಆಚರಿಸುತ್ತಿದ್ದ ವಸಿಷ್ಟ ಮುನಿಯ ತಪಸ್ಸಿಗೆ ಇದರಿಂದ ಅಡಚಣೆ ಉಂಟಾಗಿ, ಅವರು ಅವನನ್ನು ರಾಕ್ಷಸನಾಗೆಂದು ಶಪಿಸಿದರು. ಆಗ ದುರ್ದಮನ ಪತ್ನಿಯರೆಲ್ಲರು ಅವನನ್ನು ಕ್ಷಮಿಸಬೇಕೆಂದು ವಸಿಷ್ಟರನ್ನು ಬೇಡಿಕೊಂಡರು ಮಹಾವಿಷ್ಣುವಿನ ಅನುಗ್ರಹದಿಂದ ದುರ್ದಮನು ಹದಿನೇಳು ವರ್ಷಗಳ ನಂತರ ಮತ್ತೊಮ್ಮೆ ಗಂಧರ್ವನಾಗುತ್ತಾನೆಂದು ವಸಿಷ್ಟರು ಹೇಳಿದರು. ಕಾಲಾಂತರದಲ್ಲಿ ದುರ್ದಮನು ಗಾಲವ ಮುನಿಯನ್ನು ನುಂಗಲು ಪ್ರಯತ್ನಿಸುತ್ತಿದ್ದಾಗ ಮಹಾವಿಷ್ಣು ವಿನಿಂದ ಶಿರಚ್ಛೇದನಕ್ಕೆ ಒಳಗಾದನು ಹಾಗೂ ಮೂಲ ಸ್ವರೂಪವನ್ನು ಮರಳಿ ಪಡೆದನು. ಈ ಕಥೆಯ ನೀತಿ ಏನೆಂದರೆ, ಮಾಡುವ ಎಲ್ಲಾ ಕರ್ಮಗಳಿಗೆ ಪ್ರತಿಫಲ ಇದ್ದೇ ಇರುತ್ತದೆ ಆದರೆ ಅನುಕಂಪ ಹಾಗೂ ದೈವ ಕೃಪೆಯಿಂದ ದೇವತಾನುಗ್ರಹ ಸಾ