ಓಂ ಗೋಪೀರಮಣನಾಥಾಯ ಸ್ವಾಹಾ .
೧ ಸ್ನಾನ, ೨ ಸಂಧ್ಯಾವಂದನೆ (ತ್ರಿಕಾಲಗಳಲ್ಲಿ ಸೂರ್ಯದೇವನ ಪ್ರಾರ್ಥನೆ ), ೩ ಮಂತ್ರಗಳು ಮತ್ತು ಶ್ಲೋಕಗಳ ಪಠಣ, ೪ ಮನೆಯಲ್ಲಿ ದಿನವೂ ದೇವರ ಪೂಜೆ ಮಾಡುವುದು ಹಾಗೂ ದೇವಸ್ಥಾನ ಗಳಿಗೆ ಹೋಗುವುದು, ೫ ಅಡುಗೆ ಮಾಡಿದ ನಂತರ ಸ್ವಲ್ಪ ಆಹಾರವನ್ನು ಪಕ್ಷಿ/ಜೀವಜಂತು ಗಳಿಗೆ ಇಡುವುದು,೬ ಅತಿಥಿ ಸತ್ಕಾರ ವನ್ನು ಮಾಡುವುದು.
ಶ್ರೀಮದ್ಭಾಗವತದ ಒಂದು ಶ್ಲೋಕ (11.5.41)ದಲ್ಲಿ ಹೀಗೆ ಹೇಳಲಾಗಿದೆ—ಮುಕುಂದನ ಚರಣಕಮಲಗಳಿಗೆ ಶರಣಾಗತನಾದರೆ, ಎಲ್ಲಾ ವಿಧವಾದ ಪ್ರಾಪಂಚಿಕ ಬಂಧನ, ಐಹಿಕ ದುಃಖ, ಎಲ್ಲದರಿಂದ, ಸಾಧಕನು ಮುಕ್ತನಾಗುತ್ತಾನೆ. ಈ ಜೀವನದಲ್ಲಿ ನಾವು ಅನೇಕ ವಿಧವಾದ ಪಾರಿವಾರಿಕ, ಸಾಮಾಜಿಕ, ಪಿತೃಗಳ, ದೇವತಾ, ಋಷಿಗಳ ಇತ್ಯಾದಿ ಹೊಣೆಗಳನ್ನು ಹೊರಬೇಕಾಗುತ್ತದೆ. ಇವೆಲ್ಲವೂ ಬಂಧನ ಅಥವಾ ಬಾಂಧವ್ಯದ ನೆವದಲ್ಲಿ ನಮ್ಮನ್ನು ಪಾರಮಾರ್ಥಿಕವನ್ನು ಸಾಧಿಸದಂತೆ, ಲೌಕಿಕತೆಯಿಂದ ಹೊರಬಾರಲಾರದಂತೆ ಕಟ್ಟಿ ಹಾಕುತ್ತವೆ. ಆದರೆ ಮುಕುಂದನಲ್ಲಿ ಸಂಪೂರ್ಣ ಶರಣಾಗತನಾಗಿ, ಸರ್ವ ಸಮರ್ಪಣಾ ಭಾವದಿಂದ ಅವನಿಗೆ ಎಲ್ಲವನ್ನೂ ಸಮರ್ಪಿಸಿದರೆ, ಕೃಷ್ಣನಲ್ಲಿಯೇ ನೆಟ್ಟ ಭಕ್ತಿಯಿಂದ ಅವನನ್ನು ಅನನ್ಯವಾಗಿ ಭಜಿಸಿದರೆ, ಸತ್‌ಚಿತ್ ಆನಂದವನ್ನು ಪಡೆಯುವುದರೊಂದಿಗೆ, ಲೌಕಿಕದಿಂದ ಮುಕ್ತಿ ಪಡೆಯಲು ಸಾಧ್ಯ.