ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..
ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..
ಕಮಲನಾಭನ ಹೃದಯ ಕಮಲದಲಿ ನಿಂತೋಳೆ ಕಮಲಿ ನೀ ಕರಮುಗಿವೆ ಬಾ ಮಾ..
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ...
ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..
ಕಾವೇರಿ ನೀರ ಅಭಿಷೇಕಕಾಗಿ ನಿನಗಾಗಿ ನಾ ತಂದೆನಮ್ಮ..
ಕಂಪನ್ನು ಚೆಲ್ಲೋ ಸುಮರಾಶಿಯಿಂದ ಹೂಮಾಲೆ ಕಟ್ಟಿರುವೆನಮ್ಮ..
ಬಂಗಾರ ಕಾಲ್ಗೆಜ್ಜೆನಾದ ನಮ್ಮ ಮನೆಯಲ್ಲವ ತುಂಬುವಂತೆ..ಎ...ಎ..
ಬಂಗಾರ ಕಾಲ್ಗೆಜ್ಜೆನಾದ ನಮ್ಮ ಮನೆಯಲ್ಲವ ತುಂಬುವಂತೆ..
ನಲಿಯುತ.. ಕುಣಿಯುತ.. ಒಲಿದು ಬಾ.. ನಮ್ಮ ಮನೆಗೆ ಬಾ..
ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..
ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..
ಕಮಲನಾಭನ ಹೃದಯ ಕಮಲದಲಿ ನಿಂತೋಳೆ ಕಮಲಿ ನೀ ಕರಮುಗಿವೆ ಬಾ ಮಾ..
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ...
ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..
ಶ್ರೀದೇವಿ ಬಾ ಮಾ ಧನಲಕ್ಷ್ಮಿ ಬಾ ಮಾ ಮನೆಯನ್ನು ಬೆಳಕಾಗಿ ಮಾಡು..
ದಯೆತೋರಿ ಬಂದು ಮನದಲ್ಲಿ ನಿಂತು ಸಂತೋಷ ಸೌಭಗ್ಯ ನೀಡು..
ಸ್ಥಿರವಾಗಿ ಬಂದಿಲ್ಲಿ ನೆಲೆಸು.. ತಾಯೇ ವರಮಹಾಲಕ್ಷ್ಮಿಯೇ ಹರಸು..
ಸ್ಥಿರವಾಗಿ ಬಂದಿಲ್ಲಿ ನೆಲೆಸು.. ತಾಯೇ ವರಮಹಾಲಕ್ಷ್ಮಿಯೇ ಹರಸು..
ಕರವನು ಮುಗಿಯುವೆ.. ಆರತಿ ಈಗ ಬೆಳಗುವೆ..
ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..
ಕಮಲನಾಭನ ಹೃದಯ ಕಮಲದಲಿ ನಿಂತೋಳೆ ಕಮಲಿ ನೀ ಕರಮುಗಿವೆ ಬಾ ಮಾ..
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ...
ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..
ಕಮಲವ ಕೈಯಲ್ಲಿ ಹಿಡಿದೊಳೆ..
ದುರ್ದಮನು ವಿಶ್ವಾವಸು ಎಂಬ ಒಬ್ಬ ಗಂಧರ್ವನ ಮಗ.ಒಂದು ಸಲ ಆತ ತನ್ನ ಸಾವಿರಾರು ಜನ ಪತ್ನಿಯರೊಂದಿಗೆ ಕೈಲಾಸದ ಬಳಿಯ ಸರೋವರದಲ್ಲಿ ಆನಂದದಿಂದ ವಿಹರಿಸುತ್ತಿದ್ದ . ಸಮೀಪದಲ್ಲಿಯೇ ತಪಸ್ಸನ್ನು ಆಚರಿಸುತ್ತಿದ್ದ ವಸಿಷ್ಟ ಮುನಿಯ ತಪಸ್ಸಿಗೆ ಇದರಿಂದ ಅಡಚಣೆ ಉಂಟಾಗಿ, ಅವರು ಅವನನ್ನು ರಾಕ್ಷಸನಾಗೆಂದು ಶಪಿಸಿದರು. ಆಗ ದುರ್ದಮನ ಪತ್ನಿಯರೆಲ್ಲರು ಅವನನ್ನು ಕ್ಷಮಿಸಬೇಕೆಂದು ವಸಿಷ್ಟರನ್ನು ಬೇಡಿಕೊಂಡರು ಮಹಾವಿಷ್ಣುವಿನ ಅನುಗ್ರಹದಿಂದ ದುರ್ದಮನು ಹದಿನೇಳು ವರ್ಷಗಳ ನಂತರ ಮತ್ತೊಮ್ಮೆ ಗಂಧರ್ವನಾಗುತ್ತಾನೆಂದು ವಸಿಷ್ಟರು ಹೇಳಿದರು. ಕಾಲಾಂತರದಲ್ಲಿ ದುರ್ದಮನು ಗಾಲವ ಮುನಿಯನ್ನು ನುಂಗಲು ಪ್ರಯತ್ನಿಸುತ್ತಿದ್ದಾಗ ಮಹಾವಿಷ್ಣು ವಿನಿಂದ ಶಿರಚ್ಛೇದನಕ್ಕೆ ಒಳಗಾದನು ಹಾಗೂ ಮೂಲ ಸ್ವರೂಪವನ್ನು ಮರಳಿ ಪಡೆದನು. ಈ ಕಥೆಯ ನೀತಿ ಏನೆಂದರೆ, ಮಾಡುವ ಎಲ್ಲಾ ಕರ್ಮಗಳಿಗೆ ಪ್ರತಿಫಲ ಇದ್ದೇ ಇರುತ್ತದೆ ಆದರೆ ಅನುಕಂಪ ಹಾಗೂ ದೈವ ಕೃಪೆಯಿಂದ ದೇವತಾನುಗ್ರಹ ಸಾ
ಹನುಮಂತನು ಭಕ್ತಿ, ನಿಷ್ಠೆ, ಧೈರ್ಯ, ಶಕ್ತಿ, ನಮ್ರತೆ ಮತ್ತು ನಿಸ್ವಾರ್ಥತೆಯನ್ನು ಸಂಕೇತಿಸುತ್ತದೆ. ಇದು ನಿಮ್ಮ ಸ್ವಂತ ಜೀವನದಲ್ಲಿ ಈ ಸದ್ಗುಣಗಳನ್ನು ಸಾಕಾರಗೊಳಿಸಲು, ವೈಯಕ್ತಿಕ ಬೆಳವಣಿಗೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ ಮತ್ತು ಮಾರ್ಗದರ್ಶನ ನೀಡುತ್ತದೆ