ತಂಬೂರಿ ಮೀಟಿದವ ಭವಾಬ್ಧಿ ದಾಟಿದವ
ತಾಳವ ತಟ್ಟಿದವ ಸುರರೊಳು ಸೇರಿದವ
ಗೆಜ್ಜೆಯ ಕಟ್ಟಿದವ ಖಳರೆದೆಯ ಮೆಟ್ಟಿದವ
ಗಾನವ ಪಾಡಿದವ ಹರಿ-ಮೂರುತಿ ನೋಡಿದವ
ವಿಠ್ಠಲನ ನೋಡಿದವ
(ಪುರಂದರ) ವಿಠ್ಠಲನ ನೋಡಿದವ ವೈಕುಂಠಕೆ ಓಡಿದವ
ಅಹಿಂಸೆಯು ಧರ್ಮದ ಅತ್ಯುನ್ನತ ರೂಪವಾಗಿದೆ.
ನಾನು ಭಾರತೀಯ ಪ್ರಜೆಯಾಗಿದ್ದ ಪಕ್ಷದಲ್ಲಿ, ನನಗೆ ಇಷ್ಟವಾಗದ ಹೊರತು ನಾನು ಯಾವುದೇ ಪರಕೀಯ ಸಂಪ್ರದಾಯಗಳನ್ನು ಪಾಲಿಸುತ್ತಿರಲಿಲ್ಲ. ಖಂಡಿತವಾಗಿಯೂ ಇಂಗ್ಲಿಷರ ಹ್ಯಾಂಡ್ ಶೇಕ್ ಗಾಗಿ ಭಾರತೀಯ ವಂದಿಸುವ ಪದ್ಧತಿಯನ್ನು ಬಿಡುತ್ತಿರಲಿಲ್ಲ. ಇನ್ನೊಂದು ಪದ್ಧತಿ ಯ ಅನುಕರಣೆ ಮಾಡುವುದು, ಅಂದರೆ, ಅದರ ಹೆಚ್ವುಗಾರಿಕೆಯನ್ನು ಒಪ್ಪಿಕೊಂಡಂತೆಯೇ ಸರಿ.- ( ಜಾನ್ ವುಡ್ರೋಫ್ )