ಭಳಿ ಭಳಿರೆ ನಾರಸಿಂಹ ಮಹಾಸಿಂಹ |
ಮಲಮಲಾ ಮಲತವರ ವೈರಿ ಉರಿಮಾರಿ||
ನಗನಗಾ ನಗನಗಗಳಲ್ಲಾಡೆ ಚತುರ್ದಶ |
ಜಗಜಗ ಜಗವೆಲ್ಲ ಕಂಪಿಸಿ ಕಂಬನಾಗೆ ||
ಹಗೆ ಹಗೆ ಹಗೆ ಹಗೆ ಬಲವ ದೆಶೆಗೆಡಿಸಿ ರೋಷಗಿಡಿ |
ಉಗು ಉಗು ಉಗುಳುತ್ತ ಬಂದ ನರಸಿಂಹ || 1 ||
ಬಿಗಿ ಬಿಗಿ ಬಿಗಿದು ಹುಬ್ಬುಗಂಟನೆ ಹಾಕಿ |
ಹೊಗೆ ಹೊಗೆ ಹೊಗೆ ಸುತ್ತಿ ಸರ್ವರಂಜೆ ||
ನೆಗ ನೆಗ ನೆಗ ನೆಗದು ಕುಪ್ಪಳಿಸಿ ಅಸುರನ್ನ |
ಮಗು ಮಗು ಮಗು ಮಗು ಬೇಡಿಕೊಂಡ ನರಸಿಂಹ || 2 ||
ಉಗು ಉಗು ಉಗು ಉಗರಿಂದ ಕ್ರೂರನ್ನ ಹೇರೊಡಲ |
ಬಗ ಬಗ ಬಗ ಬಗದು ರಕುತವನ್ನು |
ಉಗಿ ಉಗೀ ಉಗೀ ಉಗಿದು ಚಲ್ಲಿ ಕೊರಳಿಗೆ ಕರುಳ |
ತೆಗೆ ತೆಗೆ ತೆಗೆ ತೆಗೆದು ಇಟ್ಟ ನರಸಿಂಹ || 3 ||
ಯುಗ ಯುಗ ಯುಗ ಯುಗದೊಳಗೆ ಪ್ರಣತಾರ್ತಿ ಹರನೆಂದು |
ಝಗ ಝಗಾ ಝಗಝಗಿಪ ಮಕುಟ ತೂಗೆ |
ನಗು ನಗು ನಗು ನಗುತ ಸುರರು ಗಗನದಿ ನೆರೆದು |
ಮಿಗಿ ಮಿಗಿ ಮಿಗಿ ಮಿಗಿಲೆನೆ ನಾರಸಿಂಹ || 4 ||
ಒಂದೊಂದೊಂದೊಂದು ಮುನಿಗಳಿಗೊಲಿದು |
ಅಂದಂದಂದಂದದೀಗಾಯತ ವೊಲಿದು |
ಅಂದಂದಂದವ ಕಾವ ಚೊಳಂಗಿರಿ |
ಮಂದಿರನೆ ವಿಜಯವಿಠ್ಠಲ ನಾರಸಿಂಹ||5||
ಸ್ತ್ರೀ ಯರನ್ನು ಗೌರವಿಸಬೇಕು ಹಾಗೂ ಸ್ತ್ರೀಯರ ಸ್ವಾತಂತ್ರ್ಯಕ್ಕೆ ಭಂಗ ತರುವ ಆಚರಣೆಗಳನ್ನು ತೊಡೆದುಹಾಕಬೇಕು, ಇದಿಲ್ಲವಾದರೆ, ಸಮಾಜವು ಅವನತಿಯೆಡೆಗೆ ಸಾಗುತ್ತದೆ. ನಮ್ಮ ಗ್ರಂಥಗಳ ಪ್ರಕಾರ ಸ್ತ್ರೀಯರು ಶಕ್ತಿ ಯ ಸಂಕೇತ . ಉತ್ತಮ ಸ್ತ್ರೀಯಿಂದ ಉತ್ತಮ ಪ್ರಜೆ. ಸ್ತ್ರೀ ಯರಿಗೆ ಸಿಕ್ಕಿದ ನ್ಯಾಯ, ಮುಂದೆಲ್ಲಾ ಒಳಿತನ್ನೇ ಮಾಡುತ್ತದೆ. ಹೀಗೊಂದು ವಾಕ್ಯವಿದೆ ,ಸ್ತ್ರೀಯರು ದೇವತೆಗಳು ಸ್ತ್ರೀಯರು ಜೀವನ. ಸ್ತ್ರೀಯರನ್ನು ಗೌರವಿಸುವುದರಿಂದ ಹಾಗೂ ಉತ್ತೇಜಿವುದರಿಂದ , ಸಮಾಜದ ಪ್ರಗತಿ ಹಾಗೂ ಸಮಾಜದ ಸ್ವಾಸ್ಥ್ಯ ಉತ್ತಮವಾಗುತ್ತದೆ
ವ್ಯಾಸ ಮುನಿಗಳು ಶ್ರೀಮದ್ಭಾಗವತಂನ ಲೇಖಕರು.
ಅಪಾಯಗಳಿಂದ ರಕ್ಷಣೆಗಾಗಿ ದಕ್ಷಿಣ ಕಾಳಿ ಮಂತ್ರ
ಓಂ ಕ್ರೀಂ ಕ್ರೀಂ ಕ್ರೀಂ ಹ್ರೀಂ ಹ್ರೀಂ ಹ್ರೂಂ ಹ್ರೂಂ ದಕ್ಷಿಣೇ ಕಾಲ....
Click here to know more..ತ್ವರಿತ ಮತ್ತು ಸಂತೋಷದ ಮದುವೆಗಾಗಿ ಸ್ವಯಂವರಾ ಪಾರ್ವತಿ ಮಂತ್ರ
ಓಂ ಹ್ರೀಂ ಯೋಗಿನಿ ಯೋಗಿನಿ ಯೋಗೇಶ್ವರಿ ಯೋಗೇಶ್ವರಿ ಯೋಗಭಯಂಕರಿ ಸ�....
Click here to know more..ಚಂಡೀ ಕವಚ
ಓಂ ಮಾರ್ಕಂಡೇಯ ಉವಾಚ. ಯದ್ಗುಹ್ಯಂ ಪರಮಂ ಲೋಕೇ ಸರ್ವರಕ್ಷಾಕರಂ ನೃಣ�....
Click here to know more..