ಪವಮಾನ ಪವಮಾನ ಜಗದ ಪ್ರಾಣ ಸಂಕರುಷಣ
ಭವಭಯಾರಣ್ಯ ದಹನ |ಪ|
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಗಳ ಪ್ರಿಯ |ಅ.ಪ|
ಹೇಮ ಕಚ್ಚುಟ ಉಪವೀತ ಧರಿಪ ಮಾರುತ
ಕಾಮಾದಿ ವರ್ಗ ರಹಿತ
ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ
ರಾಮಚಂದ್ರನ ನಿಜದೂತ
ಯಾಮ ಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರ ಮತಿಯನು ನೀ ಮಾಣಿಪುದು
ವಜ್ರ ಶರೀರ ಗಂಭೀರ ಮುಕುಟಧರ
ದುರ್ಜನವನ ಕುಠಾರ
ನಿರ್ಜರ ಮಣಿದಯಾ ಪಾರ ವಾರ ಉದಾರ
ಸಜ್ಜನರಘವ ಪರಿಹಾರ
ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು
ಮೂರ್ಜಗವರಿವಂತೆ ಗರ್ಜನೆ ಮಾಡಿದಿ
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ
ಮಾರ್ಜನದಲಿ ಭವ ವರ್ಜಿತನೆನಿಸೊ
ಪ್ರಾಣ ಅಪಾನ ವ್ಯಾನೋದಾನ ಸಮಾನ
ಆನಂದ ಭಾರತಿ ರಮಣ
ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ
ಜ್ಞಾನಧನ ಪಾಲಿಪ ವರೇಣ್ಯ
ನಾನು ನಿರುತದಲಿ ಏನೇನೆಸಗಿದೆ
ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ
ಪ್ರಾಣನಾಥ ಸಿರಿವಿಜಯವಿಠಲನ
ಕಾಣಿಸಿ ಕೊಡುವದು ಭಾನು ಪ್ರಕಾಶ
ಭಗವಂತನಿಗೆ ತನ್ನನ್ನು ಅನುಗಾಲವೂ ಸಮರ್ಪಿಸಿಕೊಂಡು ಭಗವಂತನೇ ಶ್ರೇಷ್ಟ ನೆಂದು ಕೊಳ್ಳುವ , ದೇವನಲ್ಲಿ ಅನನ್ಯ ಭಕ್ತಿಯನ್ನು ಇಟ್ಡುಕೊಂಡು ಪ್ರಪಂಚದ ಐಹಿಕ ಸುಖಭೋಗಗಳನ್ನು ತ್ಯಜಿಸಿ ಸರ್ವ ಜೀವಿಗಳಲ್ಲಿ ಸ್ನೇಹಭಾವವನ್ನು ಹೊಂದಿರುವ ಮಾನವನು ದೈವತ್ವದೆಡೆಗೆ ಸಾಗುತ್ತಾ
इति हैवमासिदिति यः कथ्यते स इतिहासः (ಇತಿ ಹೈವಮಾಸಿದಿತಿ ಯಃ ಕಥ್ಯತೆ ಸ ಇತಿಹಾಸಃ) ಈ ವಾಕ್ಯದ ಪ್ರಕಾರ, 'ಇದು ಹೀಗೆ ಆಗಿತ್ತು' ಎಂಬ ಸತ್ಯ ಘಟನೆ ಯ ಆಧಾರದ ಮೇಲೆ ಯಾವುದನ್ನು ಒಪ್ಪಿಕೊಳ್ಳಲಾಗುತ್ತದೆಯೋ ಅದನ್ನು ಇತಿಹಾಸ ಎನ್ನಲಾಗುತ್ತದೆ. ರಾಮಾಯಣ ಹಾಗೂ ಮಹಾಭಾರತ ಎರಡೂ ಸತ್ಯ ಘಟನೆಯ ಆಧಾರಿತ ಆಗಿರುವುದರಿಂದ, ಅವು ಇತಿಹಾಸಗಳು, ಯಾವುದೇ ಕಾಲ್ಪನಿಕ ಕಥೆ ಅಲ್ಲ. ಈ ಮಹಾಕಾವ್ಯಗಳನ್ನು ಪುರಾತನ ಕಾಲದಲ್ಲಿ ನಡೆದ ಸತ್ಯ ಘಟನೆಗಳ ನಿರೂಪಣೆ ಎಂದೇ ಭಾವಿಸಲಾಗಿದೆ.
ಸಂವಹನ ಪಾಂಡಿತ್ಯಕ್ಕಾಗಿ ಸರಸ್ವತಿ ಮಂತ್ರ
ವಾಗ್ದೇವ್ಯೈ ಚ ವಿದ್ಮಹೇ ಬ್ರಹ್ಮಪತ್ನ್ಯೈ ಚ ಧೀಮಹಿ. ತನ್ನೋ ವಾಣೀ ಪ....
Click here to know more..ಭೂಮಿ ಸೂಕ್ತಮ್: ಆಸ್ತಿ ಮತ್ತು ಸಂಪತ್ತನ್ನು ಭದ್ರಪಡಿಸುವ ಮಾರ್ಗ
ಓಂ ಭೂಮಿರ್ಭೂಮ್ನಾ ದ್ಯೌರ್ವರಿಣಾಽನ್ತರಿಕ್ಷಂ ಮಹಿತ್ವಾ . ಉಪಸ್ಥೇ....
Click here to know more..ರಾಮ ಪಂಚರತ್ನ ಸ್ತೋತ್ರ
ಯೋಽತ್ರಾವತೀರ್ಯ ಶಕಲೀಕೃತ- ದೈತ್ಯಕೀರ್ತಿ- ರ್ಯೋಽಯಂ ಚ ಭೂಸುರವರಾ�....
Click here to know more..