ಜೀವನದಲ್ಲಿ ನಾವು ಅನೇಕ ಬಾರಿ ನಮ್ಮ ಅರಿವು ಮತ್ತು ವಿವೇಚನೆಯನ್ನು ಮರೆಮಾಚುವ ಭ್ರಮೆಗೆ ಒಳಗಾಗುತ್ತೇವೆ. ಈ ಭ್ರಮೆಗಳು ವಿಭಿನ್ನ ಥರದವುಗಳು: ತಪ್ಪು ಅಭಿಪ್ರಾಯಗಳು, ತಪ್ಪು ನಂಬಿಕೆಗಳು, ಮತ್ತು ಗುರಿಯನ್ನು ತಲುಪಲು ಅಡ್ಡಿಯಾಗುವ ಅನವಶ್ಯಕ ಸವಾಲುಗಳು. ಆದ್ದರಿಂದ, ಉತ್ತಮ ಜ್ಞಾನ ಮತ್ತು ಅರಿವನ್ನು ಬೆಳೆಸಿಕೊಳ್ಳುವುದು ಅಗತ್ಯ. ಪರಿಶೀಲನೆ ಮತ್ತು ಬುದ್ಧಿವಂತಿಕೆಯ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಹೊಳೆಯುವ ವಸ್ತುಗಳೆಲ್ಲಾ ಬಂಗಾರವಲ್ಲ. ಸತ್ಯಾಸತ್ಯ ಜ್ಞಾನ, ಆಂತರಿಕ ಜ್ಞಾನ, ಮತ್ತು ವಿವೇಚನಾಶೀಲತೆಗಳಿಂದ ಸಂಸಾರ ಸಾಗರವನ್ನು ದಾಟಿ ಪರಮಾತ್ಮನ ಸಾಕ್ಷಾತ್ಕಾರವನ್ನು ಪಡೆಯಲು ಸಾಧ್ಯ. ಜೀವನದ ಜಂಜಾಟಗಳನ್ನು ಪ್ರಬುದ್ಧ ಮನಸ್ಸಿನಿಂದ ಗೆಲ್ಲುವುದು ಖಂಡಿತಾ ಸಾಧ್ಯ. ನಿಜವಾದ ಜ್ಞಾನವಿರುವುದೇ ಜೀವನದ ಉದ್ದೇಶವನ್ನು ಅರಿಯುವುದರಲ್ಲಿ, ನಮ್ಮ ಯೋಗ್ಯತೆಯನ್ನು ಅರಿತು ಉನ್ನತವನ್ನು ಸಾಧಿಸುವುದರಲ್ಲಿ.
ಅನಾದಿ ಕಾಲದಿಂದ, ತಲೆತಲಾಂತರವಾಗಿ ಮುಂದುವರೆದುಕೊಂಡು ಬಂದಿರುವ, ಕೇವಲ ಒಂದು ವ್ಯಕ್ತಿ ಗೆ ಸಂಬಂಧ ಪಡದಿರುವ, ದಂತಕಥೆಗಳಿಗೆ ಐತಿಹ್ಯ ಎನ್ನಲಾಗುತ್ತದೆ.ಈ ಐತಿಹ್ಯವು, ವಿದ್ವಾಂಸರಿಂದ ಹಾಗೂ ಒಂದು ವರ್ಗದ ಜನರಿಂದ, ಜನಜನಿತ ವಾಗಿ ಒಪ್ಪಿಕೊಂಡು, ನಿರಂತರವಾಗಿ ನಂಬಿಕೊಂಡು ಬಂದಿರುವ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ವೃತ್ತಾಂತವಾಗಿರುತ್ತದೆ