ಯಾರಿಗೆ ಯಾವುದಾದರೊಂದು ಶಾಶ್ವತ ಜ್ಞಾನವನ್ನು ಪ್ರಕಟಪಡಿಸಲಾಗಿರುತ್ತದೋ ಅವರನ್ನು ಋಷಿಯೆಂದು ಕರೆಯಲಾಗುತ್ತದೆ. ಅವರ ಮೂಲಕ, ಈ ಜ್ಞಾನವು ಮಂತ್ರವಾಗಿ ಪ್ರಕಟವಾಗುತ್ತದೆ. ಯಾರು ಜ್ಞಾನಿಗಳಾಗಿ, ಪಂಡಿತರಾಗಿ, ಬುದ್ಧಿವಂತರಾಗಿ ಮತ್ತು ಆಳವಾದ ಅವಲೋಕನವನ್ನು ಮಾಡುವ ಶಕ್ತಿಯನ್ನು ಹೊಂದಿರುತ್ತಾರೋ ಅವರನ್ನು ಮುನಿಗಳೆಂದು ಕರೆಯಲಾಗುತ್ತದೆ. ಮುನಿಗಳು ತಮ್ಮ ಹೇಳಿಕೆ ಬಗ್ಗೆ ಕೂಡ ನಿಯಂತ್ರಣವನ್ನು ಹೊಂದಿರುತ್ತಾರೆ.
ಜೀವನದಲ್ಲಿ ನಾವು ಅನೇಕ ಬಾರಿ ನಮ್ಮ ಅರಿವು ಮತ್ತು ವಿವೇಚನೆಯನ್ನು ಮರೆಮಾಚುವ ಭ್ರಮೆಗೆ ಒಳಗಾಗುತ್ತೇವೆ. ಈ ಭ್ರಮೆಗಳು ವಿಭಿನ್ನ ಥರದವುಗಳು: ತಪ್ಪು ಅಭಿಪ್ರಾಯಗಳು, ತಪ್ಪು ನಂಬಿಕೆಗಳು, ಮತ್ತು ಗುರಿಯನ್ನು ತಲುಪಲು ಅಡ್ಡಿಯಾಗುವ ಅನವಶ್ಯಕ ಸವಾಲುಗಳು. ಆದ್ದರಿಂದ, ಉತ್ತಮ ಜ್ಞಾನ ಮತ್ತು ಅರಿವನ್ನು ಬೆಳೆಸಿಕೊಳ್ಳುವುದು ಅಗತ್ಯ. ಪರಿಶೀಲನೆ ಮತ್ತು ಬುದ್ಧಿವಂತಿಕೆಯ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಹೊಳೆಯುವ ವಸ್ತುಗಳೆಲ್ಲಾ ಬಂಗಾರವಲ್ಲ. ಸತ್ಯಾಸತ್ಯ ಜ್ಞಾನ, ಆಂತರಿಕ ಜ್ಞಾನ, ಮತ್ತು ವಿವೇಚನಾಶೀಲತೆಗಳಿಂದ ಸಂಸಾರ ಸಾಗರವನ್ನು ದಾಟಿ ಪರಮಾತ್ಮನ ಸಾಕ್ಷಾತ್ಕಾರವನ್ನು ಪಡೆಯಲು ಸಾಧ್ಯ. ಜೀವನದ ಜಂಜಾಟಗಳನ್ನು ಪ್ರಬುದ್ಧ ಮನಸ್ಸಿನಿಂದ ಗೆಲ್ಲುವುದು ಖಂಡಿತಾ ಸಾಧ್ಯ. ನಿಜವಾದ ಜ್ಞಾನವಿರುವುದೇ ಜೀವನದ ಉದ್ದೇಶವನ್ನು ಅರಿಯುವುದರಲ್ಲಿ, ನಮ್ಮ ಯೋಗ್ಯತೆಯನ್ನು ಅರಿತು ಉನ್ನತವನ್ನು ಸಾಧಿಸುವುದರಲ್ಲಿ.
ಓಂ ನಮಃ ಪಂಚವಕ್ತ್ರಾಯ ದಶಬಾಹುತ್ರಿನೇತ್ರಿಣೇ. ದೇವ ಶ್ವೇತವೃಷಾರೂಢ ಶ್ವೇತಾಭರಣಭೂಷಿತ. ಉಮಾದೇಹಾರ್ದ್ಧಸಂಯುಕ್ತ ನಮಸ್ತೇ ವಿಶ್ವಮೂರ್ತಯೇ.....
ಓಂ ನಮಃ ಪಂಚವಕ್ತ್ರಾಯ ದಶಬಾಹುತ್ರಿನೇತ್ರಿಣೇ. ದೇವ ಶ್ವೇತವೃಷಾರೂಢ ಶ್ವೇತಾಭರಣಭೂಷಿತ. ಉಮಾದೇಹಾರ್ದ್ಧಸಂಯುಕ್ತ ನಮಸ್ತೇ ವಿಶ್ವಮೂರ್ತಯೇ.