ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವು ಎನ್ನ ನಾಲಿಗೆಗೆ ಬರಲಿ.
ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ
ಎಷ್ಟಾದರೂ ಮತಿಗೆಟ್ಟು ಇರಲಿ
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ
ಅಷ್ಟಾಕ್ಷರ ಮಹಾ ಮಂತ್ರದ ನಾಮವ.
ಸಂತತ ಹರಿ ನಿನ್ನ ಸಾಸಿರ ನಾಮವ
ಅಂತರಂಗದ ಒಳಗಿರಿಸಿ
ಎಂತೋ ಪುರಂದರ ವಿಠಲ ರಾಯನ
ಅಂತ್ಯ ಕಾಲದಲ್ಲಿ ಚಿಂತಿಸೋ ಹಾಂಗೆ.
ಶ್ರೀ ಮದ್ಭಗವದ್ಗೀತೆಯಲ್ಲಿ ರಾಜಾ ಕಕುದ್ಮಿ ಹಾಗೂ ಆತನ ಮಗಳು ರೇವತಿ ಯ ಕುರಿತು ಒಂದು ಕಥೆ ಬರುತ್ತದೆ. ತನ್ನ ಮಗಳು ರೇವತಿಗೆ ಒಳ್ಳೆಯ ವರನನ್ನು ಹುಡುಕುವ ಸಲುವಾಗಿ ರಾಜಾ ಕಕುದ್ಮಿ , ತನ್ನ ಮಗಳೊಂದಿಗೆ ಬ್ರಹ್ಮಲೋಕಕ್ಕೆ ಹೋಗುತ್ತಾನೆ.ಅಂತೂ ಮತ್ತೆ ಭೂಲೋಕಕ್ಕೆ ಮರಳಿಬಂದಾಗ, ಎಲ್ಲವೂ ಬದಲಾದಂತೆ ಹಾಗೂ ಬೇರೆಯೇ ಯಾವುದೋ ಯುಗಕ್ಕೆ ಬಂದಂತೆ ಅವರಿಬ್ಬರಿಗೂ ಭಾಸವಾಗುತ್ತದೆ. ತುಂಬಾ ಸಂವತ್ಸರಗಳು ಕಳೆದು ಅವರಿಗೆ ತಿಳಿದಿರುವ ಎಲ್ಲರೂ ಸಾವನ್ನಪ್ಪಿದ್ದರು. ರೇವತಿ ಯು ನಂತರ ಶ್ರೀ ಕೃಷ್ಣ ನ ಅಣ್ಣ ಬಲರಾಮ ನನ್ನು ಮದುವೆ ಯಾದಳು. ಈ ಕಥೆಯಿಂದ ನಮ್ಮ ಪೂರ್ವೇತಿಹಾಸದಲ್ಲಿ ಸಮಯದ ವಿಸ್ತರಣೆಯ ಬಗ್ಗೆ ಇದ್ದ ಮಾಹಿತಿ ಯ ಬಗ್ಗೆ ತಿಳಿದು ಬರುತ್ತದೆ.
ಅನಂಗ ಎಂದರೆ "ದೇಹವಿಲ್ಲದವನು". ಇದು ಕಾಮದೇವಯ ಒಂದು ಹೆಸರು. ಪುರಾಣಗಳ ಪ್ರಕಾರ, ಶಿವನು ತನ್ನ ತಪಸ್ಸಿನ ಅವಸ್ಥೆಯಲ್ಲಿ ಕಾಮದೇವನನ್ನು ಭಸ್ಮ ಮಾಡಿದನು, ಇದರಿಂದ ಅವನು ಅನಂಗ ಅಥವಾ 'ದೇಹವಿಲ್ಲದ' ಆದನು. ಕಾಮದೇವನು ಪ್ರೇಮ ಮತ್ತು ಕಾಮನೆಯ ಸಂಕೇತವಾಗಿದೆ, ಮತ್ತು ಅವರ ಇತರ ಹೆಸರುಗಳಲ್ಲಿ 'ಮದನ,' 'ಮನ್ಮಥ,' ಮತ್ತು 'ಕಂದರ್ಪ' ಸೇರಿವೆ. ಕಾಮದೇವನು ಪ್ರೇಮ ಮತ್ತು ಕಾಮನೆಯ ದೇವತೆ. ಅವರ ಕಥೆಯನ್ನು ಭಾರತೀಯ ಸಂಸ್ಕೃತಿಯಲ್ಲಿ ಪ್ರೇಮ ಮತ್ತು ವಾಸನೆಯ ಸಂಕೇತವಾಗಿ ಪರಿಗಣಿಸಲಾಗಿದೆ.