ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ
ನಾ ತಾಳಲಾರೆ ಈ ವಿರಹ ಕೃಷ್ಣ
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ
ಕಮಲವಿಲ್ಲದ ಕೆರೆ ನನ್ನ ಬಾಳು
ಚಂದ್ರ ಇಲ್ಲದಾ ರಾತ್ರಿ ಬೀಳು
ನೀ ಸಿಗದೇ ಉರಿ ಉರಿ ಕಳೆದೆ ಇರುಳ
ಮಾತೆಲ್ಲ ಬಿಗಿದಿದೆ ದುಃಖ ಕೊರಳ
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ
ಅನ್ನ ಸೇರದು ನಿದ್ದೆ ಬಂದುದೆಂದು
ಕುದಿವೆ ಒಂದೇ ಸಮ ಕೃಷ್ಣ ಎಂದು
ಯಾರು ಅರಿವರು ಹೇಳು ನನ್ನ ನೋವ
ತಲ್ಲಣಿಸಿ ಕೂಗುತಿದೆ ದಾಸಿ ಜೀವ
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ
ಒಳಗಿರುವ ಗಿರಿಧರನೇ ಹೊರಗೆ ಬಾರೋ
ಕಣ್ಣೆದುರು ನಿಂತು ಆ ರೂಪ ತೋರೋ
ಜನುಮ ಜನುಮದಾ ರಾಗ ನನ್ನ ಪ್ರೀತಿ ಕೃಷ್ಣ ಕೃಷ್ಣ ಕೃಷ್ಣಾ
ಕೃಷ್ಣ
ಜನುಮ ಜನುಮದಾ ರಾಗ ನನ್ನ ಪ್ರೀತಿ
ನಿನ್ನೊಳಗೆ ಹರಿವುದೇ ಅದರಾ ರೀತಿ
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ
ನಾ ತಾಳಲಾರೆ ಈ ವಿರಹ ಕೃಷ್ಣ
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ಕೃಷ್ಣ ಕೃಷ್ಣ
ನಿಸ್ವಾರ್ಥ ಪ್ರೀತಿ ಮತ್ತು ಸಮರ್ಪಣೆಯಿಂದ ಇತರರಿಗೆ ಸೇವೆ ಮಾಡಿ. ಇದು ಆಧ್ಯಾತ್ಮಿಕ ಬೆಳವಣಿಗೆಗೆ ಕಾರಣವಾಗುತ್ತದೆ.
ಶಿವನು ತೀವ್ರವಾದ ತಪಸ್ಸನ್ನು ಮಾಡುತ್ತಿದ್ದನು. ಅವನ ದೇಹವು ಬಿಸಿಯಾಯಿತು ಮತ್ತು ಅವನ ಬೆವರಿನಿಂದ, ನರ್ಮದಾ ನದಿಯು ಅಸ್ತಿತ್ವಕ್ಕೆ ಬಂದಿತು. ನರ್ಮದೆಯನ್ನು ಶಿವನ ಮಗಳು ಎಂದು ಪರಿಗಣಿಸಲಾಗಿದೆ.
ನಕಾರಾತ್ಮಕ ಶಕ್ತಿಗಳನ್ನು ಹೊರಹಾಕಲು ಜ್ವಾಲಾಮಾಲಿನಿ ಮಂತ್ರ
ಓಂ ನಮೋ ಭಗವತಿ ಜ್ವಾಲಾಮಾಲಿನಿ ಗೃಧ್ರಗಣಪರಿವೃತೇ ಸ್ವಾಹಾ....
Click here to know more..ಶ್ರೀ ಕೃಷ್ಣ ದ್ವಾದಶಾಕ್ಷರ ಮಂತ್ರ
ಓಂ ನಮೋ ಭಗವತೇ ವಾಸುದೇವಾಯ....
Click here to know more..ಅರ್ಧನಾರೀಶ್ವರ ಅಷ್ಟೋತ್ತರ ಶತನಾಮಾವಲಿ
ಓಂ ಅಖಿಲಾಂಡಕೋಟಿಬ್ರಹ್ಮಾಂಡರೂಪಾಯ ನಮಃ . ಓಂ ಅಜ್ಞಾನಧ್ವಾಂತದೀಪಾ....
Click here to know more..