ಆಗಮ ಹಾಗೂ ತಂತ್ರಗಳು ಪ್ರಾಯೋಗಿಕ ಆಚರಣೆಗಳ ಬಗ್ಗೆ ಹೆಚ್ಚು ಮಹತ್ವವನ್ನು ಕೊಡುತ್ತವೆ. ಅಂದರೆ ದಿನ ನಿತ್ಯದ ಜೀವನ ಕ್ರಮ ಹಾಗೂ ಆಧ್ಯಾತ್ಮಿಕ ಆಚರಣೆಗಳ ಬಗ್ಗೆ ತಿಳಿಸಿಕೊಡುತ್ತದೆ. ಆಗಮಗಳು ದೇವತಾ ಪೂಜಾ ವಿಧಿ ವಿಧಾನಗಳು, ದೇವಾಲಯ ನಿರ್ಮಾಣ, ಅರ್ಚನೆ, ಆರಾಧನೆ ಇತ್ಯಾದಿ ವಿಧಾನಗಳನ್ನು ತಿಳಿಸಿ ಕೊಡುತ್ತದೆ. ಇವುಗಳು ದೇವಾಲಯ ವಾಸ್ತುಶಿಲ್ಪ, ಉತ್ಸವಾದಿಗಳ ಬಗ್ಗೆ ತಿಳಿಸಿ ಕೊಡುತ್ತವೆ. ಇಷ್ಟೇ ಅಲ್ಲದೆ, ದೇವತಾ ಪೂಜಾ ಕ್ರಮ, ಮಡಿ ,ಮೈಲಿಗೆ, ಇತ್ಯಾದಿಗಳ ಬಗ್ಗೆಯೂ ತಿಳುವಳಿಕೆಯನ್ನು ಕೊಡುತ್ತದೆ. ತಂತ್ರಗಳು ಆಂತರಿಕ ಸಾಧನೆಗಳ ಬಗ್ಗೆ ತಿಳಿಸಿಕೊಡುತ್ತದೆ. ಧ್ಯಾನ , ಯೋಗ, ಮಂತ್ರ, ಇವುಗಳನ್ನು ಒಳಗೊಂಡಿರುತ್ತದೆ. ತಂತ್ರಗಳು ವೈಯುಕ್ತಿಕ ಆಧ್ಯಾತ್ಮಿಕ ಸಾಧನೆಗೆ ಸಹಾಯ ಮಾಡುತ್ತವೆ. ದೈವ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಬೇಕಾದ ವಿದ್ಯೆಯನ್ನು ಈ ಮೂಲಕ ತಿಳಿಯಬಹುದಾಗಿದೆ. ಆಗಮ ಹಾಗೂ ತಂತ್ರಗಳು ಜ್ಞಾನದಿಂದ ಕರ್ಮ ಪ್ರಯೋಗದ ಬಗ್ಗೆ ಮಾಹಿತಿ ಕೊಡುತ್ತವೆ. ಮಾನವರ ಆಧ್ಯಾತ್ಮಿಕ ಬದುಕಿಗೆ ಸಹಾಯ ಮಾಡುತ್ತವೆ. ಇವುಗಳಲ್ಲಿ ಕೇವಲ ಸಿದ್ಧಾಂತ ಮಾತ್ರವಲ್ಲದೆ ಪ್ರಾಯೋಗಿಕ ವಿಧಿ ವಿಧಾನಗಳನ್ನು ಹೇಳಲಾಗಿದೆ. ಆಗಮ ಹಾಗೂ ತಂತ್ರಗಳ ನೆರವಿನಿಂದ ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಬಹುದಾಗಿದೆ. ಜಟಿಲವಾದ ಸಮಸ್ಯೆಗಳಿಗೆ ಸರಳ ಉಪಾಯಗಳನ್ನು ಹೇಳಲಾಗಿದೆ. ಇದರಿಂದ ದಿನನಿತ್ಯದ ಬದುಕಿನಲ್ಲಿ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆದ್ದರಿಂದ ಆಗಮ ಹಾಗೂ ತಂತ್ರಗಳು ಆಧ್ಯಾತ್ಮಿಕತೆಯನ್ನು ಅರ್ಥೈಸಿಕೊಳ್ಳಲು ಅಗತ್ಯ.
ದಕ್ಷಿಣೆ ಎಂಬುದು ಧಾರ್ಮಿಕ ಗುರುಗಳು ಪುರೋಹಿತರು ಅಥವಾ ಅದ್ಯಾಪಕರುಗಳಿಗೆ ಗೌರವಪೂರ್ವಕವಾಗಿ ಅಥವಾ ಕೃತಜ್ಞತಾ ಸೂಚಕವಾಗಿಕೊಡಲ್ಪಡುವ ಸಾಂಪ್ರದಾಯಿಕ ಉಡುಗೊರೆ ಅಥವಾ ಕೊಡುಗೆಯಾಗಿದೆ ಈ ದಕ್ಷಿಣೆಯು ಯಾವುದೇ ರೀತಿಯ ದ್ರವ್ಯ ಅಂದರೆ ಧನ ಧಾನ್ಯ ವಸ್ತ್ರಗಳರೂಪದಲ್ಲಿ ಅಥವಾ ಇನ್ಯಾವುದೇ ಬೆಲೆಬಾಳುವ ವಸ್ತುಗಳ ರೂಪದಲ್ಲಿಯೂ ಇರಬಹುದು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ತೊಡಗಿರುವ ವ್ಯಕ್ತಿಗಳಿಗೆ , ಜನರು ಸ್ವಯಂಪ್ರೇರಣೆಯಿಂದ ದಕ್ಷಿಣೆಯನ್ನು ನೀಡುತ್ತಾರೆ .ಇಂತಹ ಸ್ವಾರ್ಥರಹಿತ ವ್ಯಕ್ತಿಗಳನ್ನು ಗೌರವಿಸಲು ಮತ್ತು ಬೆಂಬಲಿಸಲು ಸಮ್ಮಾನಪೂರ್ವಕವಾಗಿ ದಕ್ಷಿಣೆಯನ್ನು ಸಮರ್ಪಿಸಲಾಗುತ್ತ
ಓಂ ಹ್ರೀಂ ಗ್ಲೌಂ ಸರಸ್ವತ್ಯೈ ನಮಃ ಹ್ರೀಂ ಓಂ....
ಓಂ ಹ್ರೀಂ ಗ್ಲೌಂ ಸರಸ್ವತ್ಯೈ ನಮಃ ಹ್ರೀಂ ಓಂ
ಗಂಡ ಮತ್ತು ಹೆಂಡತಿಯ ನಡುವೆ ಪ್ರೀತಿಯನ್ನು ಹೆಚ್ಚಿಸಲು ಮಂತ್ರ
ದಾಶರಥಾಯ ವಿದ್ಮಹೇ ಸೀತಾನಾಥಾಯ ಧೀಮಹಿ ತನ್ನೋ ರಾಮಃ ಪ್ರಚೋದಯಾತ್....
Click here to know more..ಮಹಾಭಾರತ ಪಾತ್ರಗಳು - ಭಾಗ 6
ಮಯೂರೇಶ ಸ್ತೋತ್ರಂ
ಪುರಾಣಪುರುಷಂ ದೇವಂ ನಾನಾಕ್ರೀಡಾಕರಂ ಮುದಾ. ಮಾಯಾವಿನಂ ದುರ್ವಿಭಾ....
Click here to know more..