ದುರ್ದಮನು ವಿಶ್ವಾವಸು ಎಂಬ ಒಬ್ಬ ಗಂಧರ್ವನ ಮಗ.ಒಂದು ಸಲ ಆತ ತನ್ನ ಸಾವಿರಾರು ಜನ ಪತ್ನಿಯರೊಂದಿಗೆ ಕೈಲಾಸದ ಬಳಿಯ ಸರೋವರದಲ್ಲಿ ಆನಂದದಿಂದ ವಿಹರಿಸುತ್ತಿದ್ದ . ಸಮೀಪದಲ್ಲಿಯೇ ತಪಸ್ಸನ್ನು ಆಚರಿಸುತ್ತಿದ್ದ ವಸಿಷ್ಟ ಮುನಿಯ ತಪಸ್ಸಿಗೆ ಇದರಿಂದ ಅಡಚಣೆ ಉಂಟಾಗಿ, ಅವರು ಅವನನ್ನು ರಾಕ್ಷಸನಾಗೆಂದು ಶಪಿಸಿದರು. ಆಗ ದುರ್ದಮನ ಪತ್ನಿಯರೆಲ್ಲರು ಅವನನ್ನು ಕ್ಷಮಿಸಬೇಕೆಂದು ವಸಿಷ್ಟರನ್ನು ಬೇಡಿಕೊಂಡರು ಮಹಾವಿಷ್ಣುವಿನ ಅನುಗ್ರಹದಿಂದ ದುರ್ದಮನು ಹದಿನೇಳು ವರ್ಷಗಳ ನಂತರ ಮತ್ತೊಮ್ಮೆ ಗಂಧರ್ವನಾಗುತ್ತಾನೆಂದು ವಸಿಷ್ಟರು ಹೇಳಿದರು. ಕಾಲಾಂತರದಲ್ಲಿ ದುರ್ದಮನು ಗಾಲವ ಮುನಿಯನ್ನು ನುಂಗಲು ಪ್ರಯತ್ನಿಸುತ್ತಿದ್ದಾಗ ಮಹಾವಿಷ್ಣು ವಿನಿಂದ ಶಿರಚ್ಛೇದನಕ್ಕೆ ಒಳಗಾದನು ಹಾಗೂ ಮೂಲ ಸ್ವರೂಪವನ್ನು ಮರಳಿ ಪಡೆದನು. ಈ ಕಥೆಯ ನೀತಿ ಏನೆಂದರೆ, ಮಾಡುವ ಎಲ್ಲಾ ಕರ್ಮಗಳಿಗೆ ಪ್ರತಿಫಲ ಇದ್ದೇ ಇರುತ್ತದೆ ಆದರೆ ಅನುಕಂಪ ಹಾಗೂ ದೈವ ಕೃಪೆಯಿಂದ ದೇವತಾನುಗ್ರಹ ಸಾ
ಚಕ್ರ ವ್ಯೂಹದೊಳಗೆ ಅಭಿಮನ್ಯು ಸತ್ತ ಸ್ಥಳವನ್ನು ಪ್ರಸ್ತುತ ಅಭಿಮನ್ಯುಪುರ ಎಂದು ಕರೆಯಲಾಗುತ್ತದೆ. ಇದು ಕುರುಕ್ಷೇತ್ರ ನಗರದಿಂದ 8 ಕಿ.ಮೀ ದೂರದಲ್ಲಿದೆ. ಇದನ್ನು ಮೊದಲು ಅಮೀನ್, ಅಭಿಮನ್ಯು ಖೇಡಾ ಮತ್ತು ಚಕ್ರಮ್ಯು ಎಂದು ಕರೆಯಲಾಗುತ್ತಿತ್ತು.