ದಕ್ಷಿಣ ಪೂರ್ವ ದಿಕ್ಕನ್ನು ವಾಸ್ತುಶಾಸ್ತ್ರದಲ್ಲಿ ಆಗ್ನೇಯ ದಿಕ್ಕು ಎಂದು ಕರೆಯುತ್ತಾರೆ. ಆಗ್ನೇಯ ದಿಕ್ಕಿನ ಆಡಳಿತ ದೈವವು ಅಗ್ನಿ. ಅಗ್ನಿ ಭಗವಾನರು ತುಂಬಾ ಮುಂಗೋಪವನ್ನು ಹೊಂದಿರುವರು ಮತ್ತು ತ್ವರಿತ ಕ್ರಿಯಾಶೀಲರು. ಅವರಿಗೆ ಎಲ್ಲವನ್ನೂ ಸುಟ್ಟು ಹಾಕುವ ಮತ್ತು ನಾಶಮಾಡುವ ಶಕ್ತಿಯು ಇದೆ. ಆಗ್ನೇಯ ದಿಕ್ಕಿನ ದೋಷಪೂರಿತ ವಾಸ್ತುವಿನ ಫಲಿತಾಂಶಗಳು ತ್ವರಿತವಾದದು ಮತ್ತು ಹೆಚ್ಚು ವಿನಾಶಕಾರಿಯಾಗಿರುತ್ತದೆ.
Click below to listen to Agni Mantra
ಒಂದು ಕಟ್ಟಡದ ಅಥವಾ ಸ್ಥಳದ ಪೂರ್ವ ಮತ್ತು ದಕ್ಷಿಣ ಪಾಶ್ರ್ವಗಳು ಸಂಧಿಸುವ ಬಿಂದುವನ್ನು ಆಗ್ನೇಯ ದಿಕ್ಕೆಂದು ಕರೆಯುತ್ತೇವೆ.
ಸ್ನಾನದ ಮನೆಯನ್ನು ಕೇವಲ ಸ್ನಾನಕ್ಕಾಗಿ ಉಪಯೋಗಿಸುವುದಾದರೆ ಅದನ್ನು ಆಗ್ನೇಯ ದಿಕ್ಕಿನಲ್ಲಿ ಇಡಬಹುದು. ಕಮೋಡ್(ವೆಸ್ಟ್ರನ್ ಕ್ಲಾಸೆಟ್) ಅನ್ನು ಅಲ್ಲಿ ಇಡಬಾರದು.
ಇಲ್ಲ. ಒಂದು ವೇಳೆ ನೀವು ಪೂಜಾಮಂದಿರವನ್ನು ಅಲ್ಲಿ ಸ್ಥಾಪಿಸಿದರೆ ದೇವತೆಗಳು ಕುಪಿತರಾಗುತ್ತಾರೆ.
ಎಂದಿಗೂ ಕಟ್ಟಡವು ಆಗ್ನೇಯ ದಿಕ್ಕಿನಲ್ಲಿ ವಿಸ್ತರಿಸಲು ಬಿಡಬೇಡಿ. ಇದು ಕಟ್ಟಡದಲ್ಲಿ ವಾಸಿಸುವವರಿಗೆ ಆತಂಕ ಮತ್ತು ಖಿನ್ನತೆಯನ್ನು ಉಂಟು ಮಾಡುತ್ತದೆ ಮತ್ತು ನಿರ್ವಹಿಸಲಾಗದ ಸಾಲಕ್ಕೆ ಎಡೆಮಾಡಿಕೊಡುತ್ತದೆ.
ಅಗ್ನಿ ಮತ್ತು ನೀರು ಪರಸ್ಪರ ವಿರೋಧಿ ಅಂಶಗಳು. ಭಾವಿಯನ್ನು ತೆಗೆಯುವುದು, ನೀರಿನ ಟ್ಯಾಂಕ್ ಅಥವಾ ಸಂಪ್ ಅನ್ನು ಆಗ್ನೇಯ ದಿಕ್ಕಿನಲ್ಲಿ ಕಟ್ಟುವುದು ಅಗ್ನಿ ದುರಂತಗಳಿಗೆ ಕಾರಣವಾಗಬಹುದು ಅಥವಾ ವಾಸಿಸುವವರಿಗೆ ಸುಟ್ಟ ಗಾಯಗಳಾಗಬಹುದು.
ಒಬ್ಬ ಮನುಷ್ಯನು ಮೂರು ಋಣಗಳೊಂದಿಗೆ ಹುಟ್ಟಿ ಬಂದಿರುತ್ತಾನೆ : ಋಷಿ ಋಣ ( ಋಷಿ ಮುನಿಗಳ ಮೇಲಿನ ಋಣ ), ಪಿತೃ ಋಣ ( ಪೂರ್ವಜರ ಮೇಲಿನ ಋಣ), ಹಾಗೂ ದೇವ ಋಣ (ದೇವತೆಗಳ ಮೇಲಿನ ಋಣ ). ಈ ಎಲ್ಲಾ ಋಣಗಳಿಂದ ಮುಕ್ತರಾಗಲು ನಮ್ಮ ಧರ್ಮ ಗ್ರಂಥ ಗಳಲ್ಲಿ ಕೆಲವು ದೈನಂದಿನ ಕರ್ತವ್ಯ ಗಳನ್ನು ಹೇಳಲಾಗಿದೆ . ಅವೆಂದರೆ ದೇಹ ಶುದ್ದಿ, ಸಂಧ್ಯಾವಂದನೆ( ತ್ರಿ ಕಾಲ ವಂದನೆ ), ತರ್ಪಣ ( ಹಿರಿಯರಿಗೆ ಅರ್ಪಣೆ ), ನಿತ್ಯ ದೇವತಾ ಆರಾಧನೆ, ಹಾಗೂ ಇನ್ನಿತರ ನಿತ್ಯ ಆಚರಣೆಗಳ ಜೊತೆಗೆ ನಮ್ಮ ಧಾರ್ಮಿಕ ಗ್ರಂಥ ಗಳ ಅಧ್ಯಯನ, ದೈಹಿಕ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಇವೇ ಮೊದಲಾದವುಗಳು. ಸಂಧ್ಯಾವಂದನೆ ಯ ಮೂಲಕ ದೈನಂದಿನ ಪ್ರಾರ್ಥನೆಗಳನ್ನು ಮಾಡಿ ತರ್ಪಣದ ಮೂಲಕ ಪೂರ್ವಜರನ್ನು ಸ್ಮರಿಸಿ ದೇವರ ಪೂಜೆಯನ್ನು ನಿತ್ಯ ನೈಮಿತ್ತಿಕ ವಾಗಿ ಮಾಡುತ್ತಾ, ಜೊತೆಗೆ ಶಾಸ್ತ್ರ ಗಳ ಅಧ್ಯಯನದಿಂದ ಜ್ಞಾನಾರ್ಜನೆಯನ್ನು ಮಾಡುತ್ತಾ ಇರುವುದು. ಈ ಎಲ್ಲಾ ವಿಧವಾದ ಆಚರಣೆ ಗಳಿಂದ ಆಧ್ಯಾತ್ಮಿಕ ಕರ್ತವ್ಯ ಗಳನ್ನು ನಿರ್ವಹಿಸುವುದು ಸಾಧ್ಯವಾಗುತ್ತದೆ
ಧರ್ಮಶಾಸ್ತ್ರದಲ್ಲಿ, ನಿರ್ಣಯ ಸಿಂಧು ಮತ್ತು ಧರ್ಮ ಸಿಂಧುಗಳಂತಹ ಪಠ್ಯಗಳು ನಿಬಂಧ ಗ್ರಂಥಗಳು ಎಂಬ ವರ್ಗಕ್ಕೆ ಸೇರಿವೆ. ಅವು ಸನಾತನ ಧರ್ಮದ ಪ್ರಕಾರ ನೀತಿವಂತ ಜೀವನ ತತ್ವಗಳ ಸಿದ್ಧ ಉಲ್ಲೇಖವಾಗಿದೆ.