ಭೀಮನು ತನ್ನ 10000 ಆನೆಗಳಿಗೆ ಸಮನಾದ ಶಕ್ತಿ ಹೊಂದಿರುವುದಕ್ಕೆ ಪ್ರಸಿದ್ಧಿಯಾಗಿದ್ದಾನೆ. ಅವನು ಇಂತಹ ಶಕ್ತಿಯನ್ನು ಹೇಗೆ ಪಡೆದ ಎಂಬುದನ್ನು ನೋಡೋಣ.

ದುರ್ಯೋಧನನು ಭೀಮನಿಗೆ ವಿಷವನ್ನು ಹಾಕುತ್ತಾನೆ

ಹುಡುಗರಾದ ಪಾಂಡವರು ಮತ್ತು ಕೌರವರು ಗಂಗಾನದಿಯ ದಡಕ್ಕೆ ವಾಯುವಿಹಾರಕ್ಕೆ ಹೋಗಿದ್ದರು. ಅಲ್ಲಿದ್ದ ಒಂದು ತುಂಬಾ ಸುಂದರವಾದ ಉದ್ಯಾನವನದಲ್ಲಿ ಅವರು ಆಟವಾಡುತ್ತಿದ್ದರು.
ದಾಯಾದಿಗಳಾದ ಅವರುಗಳು ತಾವು ಅರಮನೆಯಿಂದ ತಂದಿದ್ದ ಸವಿಯಾದ ತಿಂಡಿಗಳನ್ನು ಒಬ್ಬರಿಗೊಬ್ಬರು ತಿನ್ನಿಸುತ್ತಾ ಇದ್ದರು. ಆ ಸಮಯದಲ್ಲಿ ದುರ್ಯೋಧನನು ಭೀಮನಿಗೆ ಯಾವುದೋ ತಿಂಡಿಯಲ್ಲಿ ಕಾಲಕೂಟವೆಂಬ ಮಾರಕ ವಿಷವನ್ನು ಮಿಶ್ರಮಾಡಿ ಕೊಟ್ಟ. 

Click below to watch video - ಅಬ್ಬಬ್ಬಾ ಎಷ್ಟು ಪರಾಕ್ರಮಿ ಗೊತ್ತಾ ಭೀಮ!  

 

ಅಬ್ಬಬ್ಬಾ ಎಷ್ಟು ಪರಾಕ್ರಮಿ ಗೊತ್ತಾ ಭೀಮ! Bheema Full Story in Kannada|Mahabharatha Bhima |SR TV mythology 

 

ನಂತರ ಏನಾಯಿತು?

ನಂತರ ಅವರೆಲ್ಲರೂ ನೀರಿನಲ್ಲಿ ಆಟವಾಡಿದರು.
ಸಂಜೆಯ ವೇಳೆಗೆ ಎಲ್ಲರಿಗೂ ದಣಿವಾಗಿತ್ತು. ಅವರೆಲ್ಲರೂ ರಾತ್ರಿಯನ್ನು ಅಲ್ಲಿಯೇ ಕಳೆಯಬೇಕೆಂದು ನಿರ್ಧರಿಸಿದರು.
ಅವರೆಲ್ಲರೂ ಮಲಗಲು ಸಿದ್ದರಾದಾಗ, ದುರ್ಯೋಧನನಿಗೆ ಭೀಮನು ವಿಷದ ಪ್ರಭಾವಕ್ಕೆ ಒಳಗಾಗಿರುವುದು ಅರಿವಾಯಿತು.
ಅವನು ಭೀಮನನ್ನು ಬಳ್ಳಿಗಳಿಂದ ಕಟ್ಟಿಹಾಕಿ ಅವನನ್ನು ಗಂಗೆಯಲ್ಲಿ ತಳ್ಳಿದ.

ಭೀಮನು 10000 ಆನೆಗಳ ಬಲವನ್ನು ಹೇಗೆ ಪಡೆದುಕೊಂಡ?

ಗಂಗಾ ನದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮುಳುಗಿದ ಮೇಲೆ ಭೀಮನು ನಾಗಲೋಕವನ್ನು ತಲುಪಿದ. ಹಲವಾರು ನಾಗಗಳು ಅವನೊಬ್ಬ ಶತ್ರುವೆಂದು ಭಾವಿಸಿ ಕಚ್ಚಿದವು. ನಾಗಗಳ ವಿಷವು ದುರ್ಯೋಧನ ಕೊಟ್ಟ ವಿಷಕ್ಕೆ ವಿಷ-ವಿರೋಧಿಯಾಗಿ ಕೆಲಸ ಮಾಡಿತು. ಭೀಮ ಮೇಲೆದ್ದ, ತನ್ನನ್ನು ತಾನು ಒಂದುಗೂಡಿಸಿಕೊಂಡು ನಾಗಗಳನ್ನು ಹಿಡಿದು ಅವರನ್ನು ನೆಲಕ್ಕೆ ಅಪ್ಪಳಿಸಲು ಪ್ರಾರಂಭಿಸಿದ.

ನಾಗಗಳ ದೊರೆಯಾದ ವಾಸುಕಿಯು ಇದರ ಬಗ್ಗೆ ತಿಳಿದ ಮತ್ತು ಕೆಳಗೆ ಬಂದ. ಆರ್ಯಕ ಎಂಬ ಒಬ್ಬ ಹಿರಿಯ ನಾಗನು ಭೀಮನು ತನ್ನ ಮೊಮ್ಮಗನ ಮೊಮ್ಮಗ ಎಂಬುದನ್ನು ಗುರುತಿಸಿದ.

ಆರ್ಯಕನ ಮಗಳ ಮಗ, ಶೂರಸೇನ. ಅವನು ಕುಂತಿಯ ತಂದೆ.

ವಾಸುಕಿಯು ಭೀಮನಿಗೆ ಬಹಳಷ್ಟು ಸ್ವರ್ಣ ಮತ್ತು ಅಮೂಲ್ಯ ರತ್ನಗಳನ್ನು ನೀಡಿದ. ಭೀಮನನ್ನು ನಾಗಲೋಕದಲ್ಲಿರುವ ಕುಂಡಗಳಲ್ಲಿನ ಔಷಧದ ಗುಟುಕನ್ನು ಕುಡಿಯಲು ಬಿಟ್ಟರೆ ಪ್ರತಿಯೊಂದು ಕುಂಡವೂ ಅದನ್ನು ಕುಡಿದವರಿಗೆ ಒಂದು ಸಾವಿರ ಆನೆಗಳ ಬಲವನ್ನು ಕೊಡುತ್ತದೆಂದು ಆರ್ಯಕನು ಸೂಚಿಸಿದ.

ಭೀಮನು ಎಲ್ಲಾ ಕುಂಡಗಳಿಂದ ಔಷಧದ ಗುಟುಕನ್ನು ಕುಡಿದ ಮತ್ತು ಅದನ್ನು ಜೀರ್ಣಿಸಿಕೊಳ್ಳಲು ಏಳು ದಿನಗಳ ಕಾಲ ಮಲಗಿ ಬಿಟ್ಟ.

ಅವನು ಎಂಟನೆಯ ದಿನ ಮೇಲೆ ಎದ್ದ.

ಭೀಮನಿಗೆ ಅವನು 10000 ಆನೆಗಳ ಬಲವನ್ನು ಹೊಂದಿರುವುದಾಗಿಯೂ ಮತ್ತು ಯಾರಿಗೂ ಅವನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ನಾಗಗಳು ಹೇಳಿದರು.

यत् ते पीतो महाबाहो रसोऽयं वीर्यसम्भृतः।
तस्मान्नागायुतबलो रणेऽधृष्यो भविष्यसि॥

ನಾಗಗಳು ಅವನನ್ನು ಮರಳಿ ಕರೆದುಕೊಂಡು ಬಂದು ಅದೇ ಉದ್ಯಾನವನದಲ್ಲಿ ಬಿಟ್ಟರು. ಅರಮನೆಗೆ ಹಿಂತಿರುಗಿದ ಮೇಲೆ, ಭೀಮ ಏನಾಯಿತೆಂದು ಎಲ್ಲರಿಗೂ ಹೇಳಿದ.

ದುರ್ಯೋಧನನು ಭೀಮನಿಗೆ ಮತ್ತೊಮ್ಮೆ ಕಾಲಕೂಟವನ್ನು ಆಹಾರದಲ್ಲಿ ಮಿಶ್ರ ಮಾಡಿ ವಿಷವನ್ನು ಹಾಕಲು ಪ್ರಯತ್ನಿಸಿದ. ಈ ಬಾರಿ, ದೃತರಾಷ್ಟ್ರನ ಮಗನಾದ ಯುಯುಟ್ಸು ಅವನಿಗೆ ಎಚ್ಚರಿಕೆ ಕೊಟ್ಟ. ಆದರೂ ಸಹ ಭೀಮ ಆ ವಿಷ ಸೇರಿಸಿದ ಆಹಾರವನ್ನು ಸೇವಿಸಿದ ಮತ್ತು ಅದನ್ನು ಜೀರ್ಣಿಸಿಕೊಂಡ.

ಅವನಿಗೆ ಏನೂ ಆಗಲಿಲ್ಲ.

(ಮಹಾಭಾರತ. ಆದಿಪರ್ವ 127 ಮತ್ತು 128)

163.1K
24.5K

Comments

Security Code

12653

finger point right
Very very versatile. -Subraya Karanth

ತುಂಬಾ ಉಪಯುಕ್ತ.ಜೇವನ ಜಂಜಾಟದಲ್ಲಿ ಮುಳುಗಿದ ಜನರಿಗೆ ಮನಸ್ಸಿಗೆ ನೆಮ್ಮದಿ ಶಾಂತಿ ಕೊಡುತ್ತದೆ ನಿಮ್ಮ ಚಾನೆಲ್.🙏🙏 -User_smrvhs

ಒಳ್ಳೇಯ‌ ವಿಶಯಗಳು ಇವೇ‌ ಧನ್ಯವಾದಗಳು -ಚನ್ನವೀರಪ್ಪ

ತುಂಬಾ ಉಪಯುಕ್ತ -ಪವಿತ್ರಾ ಹೆಗ್ಡೆ

ಬಹಳ ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು -ಸಿದ್ದು ಕುದರಿಮಠ. ಘಟಪ್ರಭಾ.

Read more comments

Knowledge Bank

ಇತಿಹಾಸ ಮತ್ತು ಪುರಾಣಗಳ ಮಹತ್ವ

ಇತಿಹಾಸ ಹಾಗೂ ಪುರಾಣಗಳೆರಡೂ ಚರಿತ್ರೆ ಯ ಆತ್ಮ ಹಾಗೂ ದೇಹವಿದ್ದಂತೆ. ಇತಿಹಾಸ (ರಾಮಾಯಣ ಮಹಾಭಾರತ ಗಳು)ವು ಚರಿತ್ರೆಯ ಆತ್ಮವನ್ನು ಪ್ರತಿನಿಧಿಸಿದರೆ, ಪುರಾಣವು, ಅದರ ದೇಹವಿದ್ದಂತೆ. ಪುರಾಣವಿಲ್ಲದೆ ಇತಿಹಾಸದ ಸಾರವು ಸ್ಪಷ್ಟವಾಗಿ ವ್ಯಕ್ತವಾಗಲಾರದು. ಪುರಾಣವು ಚರಿತ್ರೆ ಯ ಸಮಗ್ರ ತತ್ವ ವಾಗಿದ್ದು, ಬ್ರಹ್ಮಾಂಡದ ಅತ್ಯಮೂಲ್ಯ ವಿಷಯಗಳಾದ ಸೃಷ್ಟಿ, ದೇವತೆಗಳು ಹಾಗೂ ಪುರಾಣ ಪ್ರಸಿದ್ಧ ರಾಜರುಗಳ ವಂಶಾವಳಿಗಳು, ನೀತಿ ಕತೆಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಸೃಷ್ಟಿ ಯ ಜಟಿಲವಾದ ಸಂಗತಿಗಳು ಹಾಗೂ ಮನುಕುಲದ ಉತ್ಪತ್ತಿಯ ವಿಷಯದಲ್ಲಿ ಆಧುನಿಕ ವಿಜ್ಞಾನದ ಸಿದ್ಧಾಂತದೊಂದಿಗಿನ ಸಾಮ್ಯತೆ ಹಾಗೂ ವೈರುಧ್ಯಗಳನ್ನು ಸೂಕ್ಷ್ಮ ವಾಗಿ ಪರಿಶೀಲಿಸಿ, ಪ್ರತಿಪಾದಿಸುತ್ತದೆ

ಋಷಿ ಮತ್ತು ಮುನಿಗಳ ನಡುವೆ ವ್ಯತ್ಯಾಸವೇನು?

ಯಾರಿಗೆ ಯಾವುದಾದರೊಂದು ಶಾಶ್ವತ ಜ್ಞಾನವನ್ನು ಪ್ರಕಟಪಡಿಸಲಾಗಿರುತ್ತದೋ ಅವರನ್ನು ಋಷಿಯೆಂದು ಕರೆಯಲಾಗುತ್ತದೆ. ಅವರ ಮೂಲಕ, ಈ ಜ್ಞಾನವು ಮಂತ್ರವಾಗಿ ಪ್ರಕಟವಾಗುತ್ತದೆ. ಯಾರು ಜ್ಞಾನಿಗಳಾಗಿ, ಪಂಡಿತರಾಗಿ, ಬುದ್ಧಿವಂತರಾಗಿ ಮತ್ತು ಆಳವಾದ ಅವಲೋಕನವನ್ನು ಮಾಡುವ ಶಕ್ತಿಯನ್ನು ಹೊಂದಿರುತ್ತಾರೋ ಅವರನ್ನು ಮುನಿಗಳೆಂದು ಕರೆಯಲಾಗುತ್ತದೆ. ಮುನಿಗಳು ತಮ್ಮ ಹೇಳಿಕೆ ಬಗ್ಗೆ ಕೂಡ ನಿಯಂತ್ರಣವನ್ನು ಹೊಂದಿರುತ್ತಾರೆ.

Quiz

ಶ್ರೀರಾಮನನ್ನು ವನವಾಸದ ಮೇಲೆ ಕಳುಹಿಸಲು ಪ್ರೇರೇಪಿಸಿದ ಕೈಕೇಯಿಯ ದಾಸಿಯ ಹೆಸರೇನು?

Recommended for you

ಆಹಾರ ಸಂಬಂಧಿತ ವ್ಯವಹಾರದಲ್ಲಿ ಯಶಸ್ಸಿಗೆ ಮಂತ್ರ

ಆಹಾರ ಸಂಬಂಧಿತ ವ್ಯವಹಾರದಲ್ಲಿ ಯಶಸ್ಸಿಗೆ ಮಂತ್ರ

ಅನ್ನವಾನನ್ನಾದೋ ಭವತಿ. ಮಹಾನ್ ಭವತಿ ಪ್ರಜಯಾ ಪಶುಭಿರ್ಬ್ರಹ್ಮವರ್....

Click here to know more..

ಆಧ್ಯಾತ್ಮಿಕ ಬೆಳವಣಿಗೆಗೆ ಶಿವ ಮಂತ್ರ

ಆಧ್ಯಾತ್ಮಿಕ ಬೆಳವಣಿಗೆಗೆ ಶಿವ ಮಂತ್ರ

ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರಃ ಪ್ರಚೋದಯ....

Click here to know more..

ಭಗವದ್ಗೀತೆ - ಅಧ್ಯಾಯ 2

ಭಗವದ್ಗೀತೆ - ಅಧ್ಯಾಯ 2

ಅಥ ದ್ವಿತೀಯೋಽಧ್ಯಾಯಃ . ಸಾಂಖ್ಯಯೋಗಃ . ಸಂಜಯ ಉವಾಚ - ತಂ ತಥಾ ಕೃಪಯಾ....

Click here to know more..