ಭಗವಾನ್ ಶಿವನ ಪೂಜೆಯಲ್ಲಿ ಬಿಲ್ವಪತ್ರೆಯ ಪ್ರಾಮುಖ್ಯತೆಯು ಸಾಮಾನ್ಯವಾಗಿ ತಿಳಿದಿರುವ ವಿಚಾರ. ಈ ಲೇಖನದಲ್ಲಿ, ನಾವು ಬಿಲ್ವದ ದೈವಿಕ ವಿಷಯಗಳನ್ನು ನೋಡೋಣ.

ಬಿಲ್ವದ ಸಸ್ಯಶಾಸ್ತ್ರೀಯ ಹೆಸರು

ಏಗಲ್ ಮಾರ್ಮೆಲೋಸ್ (Aegle marmelos)

 

Click below to listen to Bilvashtakam 

 

Shiva Sthuthi | Tridalam Trigunaakaaram - Bilvashtakam | Lord Shiva Song | Devotional Song 

 

ಬಿಲ್ವ ಮರದ ಮೂಲ

ಕೃಷ್ಣ ಯಜುರ್ವೇದದ ಪ್ರಕಾರ ಒಂದು ಕಾಲದಲ್ಲಿ ಸೂರ್ಯನು ಪ್ರಕಾಶಿಸುವುದನ್ನು ನಿಲ್ಲಿಸಿದ. ದೇವತೆಗಳು ಯಾಗವನ್ನು ಮಾಡಿದರು, ಸೂರ್ಯದೇವನನ್ನು ಪ್ರಸನ್ನಗೊಳಿಸಿದರು ಮತ್ತು ಅವನು ಮತ್ತೆ ಪ್ರಕಾಶಿಸಲು ಆರಂಭಿಸಿದ. ಬಿಲ್ವ ಮರವು ಈ ಸಮಯದಲ್ಲಿ ಅಸ್ತಿತ್ವಕ್ಕೆ ಬಂದಿತು. ಒಂದು ವೇಳೆ ಯಜ್ಞದಲ್ಲಿ ಬಿಲ್ವಮರವನ್ನು ಬಲಿಸ್ತಂಭವನ್ನಾಗಿ ಉಪಯೋಗಿಸಿದರೆ, ಯಜಮಾನನ ಪ್ರಭೆಯು ಹೆಚ್ಚುತ್ತದೆ.

ಶತಪಥ ಬ್ರಾಹ್ಮಣನ ಪ್ರಕಾರ ಬಿಲ್ವವು ಪ್ರಜಾಪತಿಯ ಮಜ್ಜೆ ಅಥವಾ ಎಲುಬಿನ ಕೊಬ್ಬಿನಿಂದ ಅಸ್ತಿತ್ವಕ್ಕೆ ಬಂದಿತು.

ಬಿಲ್ವದ ಶ್ರೇಷ್ಠತೆ

ವೇದಗಳು ಬ್ರಹ್ಮವರ್ಚಸ್ಸನ್ನು ಪಡೆಯುವುದಕ್ಕೆ ಬಿಲ್ವದ ಬಗ್ಗೆ ಹೇಳುತ್ತದೆ. ಬಿಲ್ವವನ್ನು ಯಾಗದಲ್ಲಿ ಉಪಯೋಗಿಸುವುದರಿಂದ ಆಹಾರ, ಶಕ್ತಿ ಮತ್ತು ಸಂತತಿಯ ಸಮೃದ್ಧಿಯನ್ನು ಅದು ದಯಪಾಲಿಸುತ್ತದೆ.

ಅಥರ್ವವೇದವು ಬಿಲ್ವವನ್ನು ಮಹಾನ್ ವೈ ಭದ್ರೋ ಬಿಲ್ವಃ - ಅಂದರೆ ಬಿಲ್ವ ಉತ್ತಮವಾದುದು ಮತ್ತು ಶ್ರೇಷ್ಠವಾದುದು ಎಂದು ವರ್ಣಿಸುತ್ತದೆ.

ಯಾಗದಲ್ಲಿ ಉಪಯೋಗಿಸುವ ಸಲಕರಣೆಗಳು ಮತ್ತು ಪಾತ್ರೆಗಳನ್ನು ಮಾಡಲು ಉಪಯೋಗಿಸಲಾಗುತ್ತದೆ.

ಬಿಲ್ವವು ಒಂದು ಯಾಗ-ವೃಕ್ಷ ಮತ್ತು ಅದನ್ನು ಬಹಳವಾಗಿ ಯಜ್ಞಗಳಿಗೆ ಪಾತ್ರೆಗಳು ಮತ್ತು ಸಲಕರಣೆಗಳನ್ನು ಮಾಡಲು ಉಪಯೋಗಿಸಲಾಗುತ್ತದೆ.

ಈ ಉದ್ದೇಶ್ಯಕ್ಕಾಗಿ ಉಪಯೋಗಿಸುವ ಇತರ ಮರಗಳೆಂದರೆ: ಅಶ್ವತ್ಥ (Ficus religiosa), ಉದುಂಬರ (Ficus glomerata), ಕಾರ್ಶ್ಮರ್ಯ (Gmelina arborea), ಖಾದಿರ (Acacia catechu), ಪಲಾಶ (Butea frondosa), ವೈಕಂಕತ (Flacourtia sapida), and ಶಮೀ (Prosopis spicigera)

ಬಿಲ್ವವನ್ನು ಬಲಿಸ್ತಂಭ, ದಂಡ ಮತ್ತು ಶುಕ್ರಪಾತ್ರವನ್ನು ಮಾಡಲು ಉಪಯೋಗಿಸುತ್ತಾರೆ. ಅವುಗಳನ್ನು ಪರಿಧಿಗಾಗಿ ಮತ್ತು ಸಮಿತ್ತುಗಳಿಗಾಗಿಯೂ ಉಪಯೋಗಿಸುತ್ತಾರೆ.

ಹಲವಾರು ಧಾರ್ಮಿಕ ಆಚರಣೆಗಳಲ್ಲಿ ಅನ್ನವನ್ನು ಮಾಡುವ ಪಾತ್ರೆಯು ಬಿಲ್ವದ ಹಣ್ಣಿನ ಆಕಾರದಲ್ಲಿರುತ್ತದೆ. ಏಕೆಂದರೆ ಬಿಲ್ವದ ದೈವಿಕ ಗುಣಗಳು ಅಕ್ಕಿಗೆ ವರ್ಗಾಹಿಸಲೆಂಬುದು ಅದರ ಉದ್ದೇಶ್ಯ.

ಶ್ರೀಫಲ-ಕೃಚ್ಛ್ರ ಎಂಬ ಒಂದು ವ್ರತದಲ್ಲಿ, ವ್ರತವನ್ನು ಮಾಡುವವರು ಒಂದು ಬಿಲ್ವಮರದ ಕೆಳಗೆ ಕುಳಿತಿರುವ ಲಕ್ಷ್ಮಿದೇವಿಯನ್ನು ಆರಾಧಿಸುತ್ತಾರೆ. ಅವರು ಮರದ ಕೆಳಗಡೆ ಮಲಗುತ್ತಾರೆ ಮತ್ತು ಕೇವಲ ಬಿಲ್ವದ ಹಣ್ಣನ್ನು ಆಹಾರವಾಗಿ ಸ್ವೀಕರಿಸುತ್ತಾರೆ.

ಬಿಲ್ವವನ್ನು ರಕ್ಷಾ ತಾಯಿತಗಳನ್ನು ಮಾಡಲು ಉಪಯೋಗಿಸುತ್ತಾರೆ.

ಬಿಲ್ವೋಪನಿಷತ್

ಬಿಲ್ವವು ಎಷ್ಟು ಮಹತ್ತರವಾದುದೆಂದರೆ ಅದರ ಬಗ್ಗೆ ಒಂದು ಉಪನಿಷತ್ ಇದೆ. ಬಿಲ್ವೋಪನಿಷತ್ ನಲ್ಲಿ ಭಗವಾನ್ ಶಿವ ತಾನೇ ಋಷಿ ವಾಮದೇವರಿಗೆ ಬಿಲ್ವದ ಮಹತ್ವವನ್ನು ಉಪದೇಶಿಸುತ್ತಾನೆ.

ಬಿಲ್ವದ ಎಡ ಎಲೆಯ ಮೇಲೆ ಬ್ರಹ್ಮ, ಬಲದಲ್ಲಿ ವಿಷ್ಣು ಮತ್ತು ಮಧ್ಯದ ಎಲೆಯ ಮೇಲೆ ಶಿವ ವಾಸಿಸುತ್ತಾರೆ. ಬೇರೆ ಎಲ್ಲಾ ದೇವತೆಗಳು ಬಿಲ್ವದ ಎಲೆಯ ತೊಟ್ಟಿನಲ್ಲಿ ವಾಸಿಸುತ್ತಾರೆ.

ಒಂದೇ ತೊಟ್ಟಿನಲ್ಲಿ ಕೂಡಿರುವ ಮೂರು ಎಲೆಗಳು ಕೆಳಕಂಡ ಮೂರು ವಿಚಾರಗಳನ್ನು ಪ್ರತಿನಿಧಿಸುತ್ತವೆ:

1. ಮೂವರು ತ್ರಿಮೂರ್ತಿಗಳೂ ಒಂದೇ ಪರಮಸತ್ಯದ ವಿವಿಧ ಅಂಶಗಳಾಗಿದ್ದಾರೆ.

2. ಸತ್ವ, ರಜಸ್ಸು ಮತ್ತು ತಮೋಗುಣಗಳು ಪರಸ್ಪರ ಸಂಬಂಧಿಸಿವೆ.

3. ಇಚ್ಚಾ-ಶಕ್ತಿ, ಜ್ಞಾನ-ಶಕ್ತಿ ಮತ್ತು ಕ್ರಿಯಾ-ಶಕ್ತಿಗಳು ಪರಸ್ಪರ ಸಂಬಂಧಿಸಿವೆ.

ಬಿಲ್ವಪತ್ರೆಯ ಹಿಂಭಾಗದಲ್ಲಿ ಅಮೃತವಿದೆ. ಆದುದರಿಂದ ಶಿವನಿಗೆ ಬಿಲ್ವಾರ್ಚನೆಯನ್ನು ಮಾಡುವಾಗ, ಎಲೆಯು ಮೇಲಕ್ಕೆ ಮುಖ ಮಾಡಿರಬೇಕು. ಹಿಂಭಾಗವು ಲಿಂಗ/ಮೂರ್ತಿಯನ್ನು ಮುಟ್ಟಿರಬೇಕು.

ಭಗವಾನ್ ಶಿವನು ಬಿಲ್ವವನ್ನು ಅರ್ಪಿಸದಿದ್ದರೆ ತನ್ನ ಆರಾಧನೆಯು ಅಪೂರ್ಣವೆಂದು ಹೇಳುತ್ತಾನೆ. ಬಿಲ್ವಪತ್ರೆಯೊಂದಿಗೆ ಆರಾಧಿಸುವುದರಿಂದ ಸೌಕರ್ಯ, ಸಂತೋಷ ಮತ್ತು ಮೋಕ್ಷವು ದೊರಕುತ್ತದೆ. ಅದು ಎಲ್ಲಾ ಪಾಪಗಳಿಂದ ವಿಮುಕ್ತಿಯನ್ನು ನೀಡುತ್ತದೆ.

ಭಗವಾನ್ ಶಿವನನ್ನು ಬಿಲ್ವಪತ್ರೆಯಿಂದ ಪೂಜಿಸುವುದರಿಂದ ತೀರ್ಥಯಾತ್ರೆಗಳು, ದಾನ, ತಪಸ್ಸು, ಯಾಗಗಳನ್ನು ಮಾಡುವ ಮತ್ತು ವೇದಗಳನ್ನು ಕಲಿಯುವುದರಿಂದ ಸಿಗುವ ಫಲಿತಾಂಶಗಳನ್ನು ಕೊಡುತ್ತದೆ.

ಲಕ್ಷ್ಮಿದೇವಿಯು ಬಿಲ್ವವೃಕ್ಷದಲ್ಲಿ ವಾಸಿಸುತ್ತಾಳೆ. ಬಿಲ್ವದ ಹಣ್ಣನ್ನು ಶ್ರೀ-ಫಲವೆಂದು ಕರೆಯುತ್ತಾರೆ.

ತವ ವೃಕ್ಷೋಽಥ ಬಿಲ್ವಃ ತಸ್ಯ ಫಲಾನಿ ತಪಸಾ ನುದಂತು- ಎಂದು ಶ್ರೀಸೂಕ್ತವು ಹೇಳುತ್ತದೆ. ಬಿಲ್ವದ ಹಣ್ಣುಗಳಿಗೆ ಅಡೆತಡೆಗಳನ್ನು ತೆಗೆದುಹಾಕುವ ಶಕ್ತಿಯು ಇದೆ. ಲಕ್ಷ್ಮಿದೇವಿಯನ್ನು ಪ್ರಸನ್ನಗೊಳಿಸಲು ಮಾಡುವ ಹೋಮವನ್ನು ಬಿಲ್ವದ ಹಣ್ಣುಗಳಿಂದ ನಿರ್ವಹಿಸುತ್ತಾರೆ.

 

150.6K
22.6K

Comments

Security Code

14227

finger point right
🙏🌿ಧನ್ಯವಾದಗಳು -User_sq2x0e

ಸನಾತನ ಧರ್ಮದ ಬಗ್ಗೆ ಮಾಹಿತಿಯ ಖಜಾನೆ -ಲಕ್ಷ್ಮಿ

ಇದನ್ನು ಒದಲು ತುಂಬಾ ಸಂತೋಷವಾಗುತ್ತದೆ ಮತ್ತು ಧಾರ್ಮಿಕ ಉಪಯುಕ್ತ ಮಾಹಿತಿ ಇದೆ. ನಿಮ್ಮ ಕಾರ್ಯಕ್ಕೆ ಹೃದಯಪೂರ್ವಕ ವಂದನೆಗಳು -ಶಿವರಾಮ್

ತುಂಬಾ ಚೆನ್ನಾದ ವೆಬ್‌ಸೈಟ್ 👍 -ಹರ್ಷವರ್ಧನ್

ಮಾನಸಿಕ ಸ್ಥೈರ್ಯ ಧೈರ್ಯ ತುಂಬಿ ಮನುಕುಲದ ಉದ್ಧಾರಕ್ಕಾಗಿ ನಿರ್ಮಿತವಾಗಿದೆ ನಿಮ್ಮ ಅತ್ಯುತ್ತಮ ವೆಬ್ ಸೈಟ್ ಬಹಳ ಖುಷಿಯಾಗುತ್ತೆ ಸಕಲವೂ ಈಶ್ವರನ ಇಚ್ಚೆ. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

Read more comments

Knowledge Bank

ವ್ಯಾಸರು ವೇದವನ್ನು ಏಕೆ ನಾಲ್ಕು ಭಾಗಗಳಾಗಿ ವಿಂಗಡಿಸಿದರು?

1. ಕಲಿಕೆಯ ಸೌಲಭ್ಯಕ್ಕಾಗಿ. 2.ಯಜ್ಞಗಳಲ್ಲಿ ಅವುಗಳ ಬಳಕೆಯ ಆಧಾರದ ಮೇಲೆ ವೇದವನ್ನು ವಿಂಗಡಿಸಲಾಗಿದೆ ಮತ್ತು ಸಂಕಲಿಸಲಾಗಿದೆ.

ಕಠೋಪನಿಷತ್ತುಗಳಲ್ಲಿ ಯಮನು ಪ್ರೇಯ ಮತ್ತು ಶ್ರೇಯಗಳ ನಡುವಿನ ವ್ಯತ್ಯಾಸವನ್ನು ಕುರಿತು ಏನು ಬೋಧಿಸುತ್ತಾನೆ?

ಕಠೋಪನಿಷತ್ತುಗಳಲ್ಲಿ, ಯಮನು ಪ್ರೇಯ (ಪ್ರಿಯ, ಸುಖಕರ) ಮತ್ತು ಶ್ರೇಯ (ಉತ್ತಮ, ಲಾಭಕಾರಿ) ನಡುವಿನ ವ್ಯತ್ಯಾಸವನ್ನು ವಿವರಿಸುತ್ತಾನೆ. ಶ್ರೇಯವನ್ನು ಆರಿಸುವುದರಿಂದ ಕಲ್ಯಾಣ ಮತ್ತು ಪರಮ ಗುರಿಯತ್ತ ದಾರಿ ನಿಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಪ್ರೇಯವನ್ನು ಆರಿಸುವುದರಿಂದ ತಾತ್ಕಾಲಿಕ ಸುಖ ಮತ್ತು ಗುರಿಯ ದೃಷ್ಟಿ ಹೋಗುವಿಕೆಗೆ ಕಾರಣವಾಗುತ್ತದೆ. ಬುದ್ಧಿವಂತರು ಪ್ರೇಯ ಬದಲು ಶ್ರೇಯವನ್ನು ಆರಿಸುತ್ತಾರೆ. ಈ ಆಯ್ಕೆ ಜ್ಞಾನ ಮತ್ತು ಬುದ್ಧಿಯತ್ತ ಸಾಗುವಿಕೆಯಾಗಿದೆ, ಇದು ಕಠಿಣ ಮತ್ತು ಶಾಶ್ವತವಾಗಿದೆ. ಮತ್ತೊಂದೆಡೆ, ಪ್ರೇಯವನ್ನು ಹಿಂಬಾಲಿಸುವುದು ಅಜ್ಞಾನ ಮತ್ತು ಭ್ರಮೆಗೆ ಕಾರಣವಾಗುತ್ತದೆ, ಇದು ಸುಲಭ ಆದರೆ ತಾತ್ಕಾಲಿಕ. ಯಮನು ಶಾಶ್ವತ ಉತ್ತಮವನ್ನು ತಾತ್ಕಾಲಿಕ ಸಂತೃಪ್ತಿಗೆ ಮೇಲಾಗಿಟ್ಟುಕೊಳ್ಳುವ ಬಗ್ಗೆ ಒತ್ತಿಸು ಕೊಡುತ್ತಾನೆ

Quiz

ಯಮ - ಯಮಿ ಸಂವಾದ ಎಂದರೇನು?

Recommended for you

ಬ್ರಹ್ಮವೈವರ್ತ ಪುರಾಣ

ಬ್ರಹ್ಮವೈವರ್ತ ಪುರಾಣ

ಮಾಲಾವತೀ ಕಾಲಪುರುಷ ಸಂವಾದ - ಮಾಲಾವತಿ, ನಿನ್ನ ಪತಿ ಯಾವ ರೋಗದಿಂದ ಸ�....

Click here to know more..

ಹರಿಕಥಾಮೃತಸಾರ

ಹರಿಕಥಾಮೃತಸಾರ

ಹರಿಕಥಾಮೃತಸಾರವನ್ನು ಶ್ರೀ ಜಗನ್ನಾಥ ವಿಟ್ಟಲ ದಾಸರು ಬರೆದಿದ್ದಾ�....

Click here to know more..

ಅನ್ನಪೂರ್ಣಾ ಸ್ತೋತ್ರ

ಅನ್ನಪೂರ್ಣಾ ಸ್ತೋತ್ರ

ನಿತ್ಯಾನಂದಕರೀ ವರಾಭಯಕರೀ ಸೌಂದರ್ಯರತ್ನಾಕರೀ ನಿರ್ಧೂತಾಖಿಲಘೋರ....

Click here to know more..