ಅನೇಕ ವರ್ಷಗಳ ತಪಸ್ಸಿನ ಫಲವಾಗಿ ಋಷಿ ಮೃಕಂಡು ಹಾಗೂ ಆತನ ಪತ್ನಿ ಮರುದ್ಮತಿ, ಮಾರ್ಕಾಂಡೇಯನೆಂಬ ಮಗನನ್ನು ಪಡೆದರು. ಈ ಮಗನಾದರೋ ಕೇವಲ ಹದಿನಾರು ವರ್ಷಗಳ ಅಲ್ಪಾಯುಷಿಯಾಗಿದ್ದ. ಆತನ ಹದಿನಾರನೆಯ ವರ್ಷದ ಹುಟ್ಟಿದ ದಿನದಂದು, ಸಾವಿನ ದೇವತೆಯಾದ ಯಮ ದೇವನು, ಮಾರ್ಕಾಂಡೇಯನ ಹರಣವನ್ನು ಒಯ್ಯಲು ಬಂದೇ ಬಿಟ್ಟನು. ಮಾರ್ಕಾಂಡೇಯನು ಮಹಾನ್ ಶಿವಭಕ್ತ. ಆತನು ಶಿವಲಿಂಗವನ್ನು ಬಳಸಿ ಹಿಡಿದು ಅತ್ಯಂತ ದೃಢ ಭಕ್ತಿಯಿಂದ ಪ್ರಾರ್ಥಿಸಿಕೊಳ್ಳುತ್ತಾನೆ. ಅವನ ಭಕ್ತಿಗೆ ಮೆಚ್ಚಿದ ಶಿವನು, ಅವನೆದುರು ಪ್ರತ್ಯಕ್ಷನಾಗಿ ಅವನಿಗೆ ಚಿರಂಜೀವಿಯಾಗಿರುವ ವರವನ್ನು ದಯಪಾಲಿಸುತ್ತಾನೆ. ಈ ಕಥೆಯು ಭಕ್ತಿಯ ಪರಾಕಾಷ್ಠೆ ಹಾಗೂ ಅದರ ಮಹಿಮೆಯನ್ನು ಸಾರುತ್ತದೆ ಜೊತೆಗೆ ಮಹಾಮಹಿಮ ಪರಮೇಶ್ವರ ನ ಭಕ್ತವಾತ್ಸಲ್ಯವನ್ನೂ ಸಾದರ ಪಡಿಸುತ್ತದೆ.
ದೇವರ ಮೇಲಿನ ಪ್ರೀತಿಯು ಹೃದಯವನ್ನು ತುಂಬಿದಾಗ, ಅಹಂಕಾರ, ದ್ವೇಷ ಮತ್ತು ಆಸೆಗಳು ಮಾಯವಾಗುತ್ತವೆ, ಶಾಂತಿ ಮತ್ತು ಪವಿತ್ರತೆಯಿಂದ ಹೃದಯ ತುಂಬಿರುತ್ತದೆ