107.4K
16.1K

Comments

Security Code

04299

finger point right
ಸನಾತನ ಧರ್ಮದ ಉಳಿವಿಗಾಗಿ ಹಾಗೂ ಮುಂದಿನ ಪೀಳಿಗೆಗೆ ಧರ್ಮ ಮತ್ತು ಆಧ್ಯಾತ್ಮದ ದಾರಿ ದೀವಿಗೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೇದಧಾರಕ್ಕೆ ಇದರ ಎಲ್ಲಾ ಗೌರವಾನ್ವಿತ ಕಾರ್ಯಕರ್ತರಿಗೆ ಸಚ್ಚಿದಾನಂದೇಶ್ವರನ ಸಂಪೂರ್ಣ ಅನುಗ್ರಹ ಉಂಟಾಗಲಿ ಎಂದು ಪರಮೇಶ್ವರನಲ್ಲಿ ನನ್ನ ಮನಃಪೂರ್ವಕ ಪ್ರಾರ್ಥನೆ ಸರ್ವೇ ಜನೋ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಪ್ರಪಂಚೇಶ್ವರನ ವಿಸ್ತೃತ ಪರಿಚಯ ಪ್ರಪಂಚಕ್ಕೆ ಪರಿಚಯಿಸುತ್ತಿರುವ ನಿಮ್ಮ ವಾಹಿನಿಯ ಸೇವೆ ಈಶ್ವರ ಮೆಚ್ಚುವಂತಹದ್ದಾಗಿದೆ. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ತುಂಬಾ ಮಾಹಿತಿಯುಳ್ಳ ವೆಬ್‌ಸೈಟ್ -ದೇವರಾಜ್

ನಿಮ್ಮ ತಂಡ ಪ್ರತಿ ಪೂಜೆಯನ್ನು ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ನೆರವೇರಿಸುತ್ತಿದೆ. ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಮಾಡಿದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು. ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ. 🙏 -ಆನಂದ ಶೆಟ್ಟಿ

ಇಲ್ಲಿ ಪ್ರಕಟವಾಗುತ್ತಿರುವ ಪ್ರತಿಯೊಂದು ನನಗೆ ಉಪಯುಕ್ತವಾಗಿದೆ -Raghu prasad

Read more comments

Knowledge Bank

ರಾವಣನು ತನ್ನ ಹತ್ತು ತಲೆಗಳನ್ನು ಬಲಿನೀಡಿದ ಕಥೆ

ವೈಶ್ರವಣ ಅರ್ಥಾತ್ ಕುಬೇರನು ಕಠಿಣ ತಪಸ್ಸನ್ನು ಆಚರಿಸಿ ಲೋಕಪಾಲಕರಲ್ಲಿ ಒಬ್ಬನಾಗಿ ಸ್ಥಾನವನ್ನು ಪಡೆದುಕೊಂಡನು ಹಾಗೂ ಪುಷ್ಪಕ ವಿಮಾನವನ್ನೂ ಬಳುವಳಿಯಾಗಿ ಪಡೆದನು. ತನ್ನ ತಂದೆ ವಿಶ್ರಾವಸುವಿನ ಆದೇಶದಂತೆ ಲಂಕಾನಗರದಲ್ಲಿ ವಾಸಮಾಡತೊಡಗಿದನು. ಕುಬೇರನ ವೈಭವೋಪೇತ ಜೀವನವನ್ನು ಕಂಡು ಕರುಬಿದ ವಿಶ್ರಾವಸುವಿನ ಎರಡನೇ ಹೆಂಡತಿ ಕೈಕಸೆಯು ತನ್ನ ಮಗ ರಾವಣನಿಗೆ ಇದೇ ರೀತಿಯ ಶ್ರೇಷ್ಟತೆಯನ್ನು ಸಾಧಿಸಲು ಪ್ರೇರೇಪಿಸಿದಳು. ತಾಯಿಯ ಮಾತಿನಂತೆ ರಾವಣನು ತನ್ನ ತಮ್ಮಂದಿರಾದ ವಿಭೀಷಣ ಕುಂಭಕರ್ಣರೊಂದಿಗೆ ಗೋಕರ್ಣಕ್ಕೆ ತೆರಳಿ ಘೋರ ತಪಸ್ಸನ್ನು ಆಚರಸಿದನು. ಈ ರೀತಿಯಲ್ಲಿ ದಶ ಸಹಸ್ರ ವರ್ಷಗಳ ಕಾಲ ತೀವ್ರವಾದ ತಪಸ್ಸನ್ನು ಆಚರಿಸಿದನು. ಪ್ರತಿ ಸಾವಿರ ವರ್ಷಗಳ ಕೊನೆಯಲ್ಲಿ ತನ್ನ ಒಂದೊಂದು ಶಿರವನ್ನು ಅಗ್ನಿಯಲ್ಲಿ ಆಹುತಿಯಾಗಿ ಕೊಡುತ್ತಿದ್ದನು. ಇದೇ ರೀತಿಯಲ್ಲಿ ಒಂಬತ್ತು ಸಾವಿರ ವರ್ಷಗಳಲ್ಲಿ ಒಂಬತ್ತು ತಲೆಗಳನ್ನು ಯಜ್ಞದಲ್ಲಿ ಅರ್ಪಿಸಿದನು. ಹತ್ತನೇ ತಲೆಯನ್ನು ಕಡಿದು ಅರ್ಪಿಸುವ ಸಮಯದಲ್ಲಿ ಬ್ರಹ್ಮನು ಪ್ರತ್ಯಕ್ಷನಾದನು. ರಾವಣನ ಭಕ್ತಿಗೆ ಮೆಚ್ಚಿದ ಬ್ರಹ್ಮನು ಅವನಿಗೆ ಅದೃಶ್ಯನಾಗುವ ವರವನ್ನು ಕೊಟ್ಟ‌ನು. ಇದರಿಂದ ಆತನು ದೇವತೆ ದಾನವರು ಹಾಗೂ ಇನ್ನಿತರ ಆಕಾಶಕಾಯಗಳಿಗೆ ಕಾಣದಂತೆ ಇರಬಲ್ಲವನಾಗಿದ್ದ. ಇಷ್ಟೇ ಅಲ್ಲದೇ ಬ್ರಹ್ಮನು ಅವನ ಎಲ್ಲಾ ತಲೆಗಳನ್ನು ಪುನಃ ಸ್ಥಾಪಿಸಿದನು. ಹೀಗೆ ರಾವಣ ತನ್ನ ಹತ್ತು ತಲೆಗಳನ್ನು ಮರಳಿ ಪಡೆದನು.

ಮಂತ್ರದ ಅರ್ಥ ಮಾಡಿಕೊಳ್ಳುವುದರ ಮಹತ್ವ

ಯಾರು ಮಂತ್ರದ ಅರ್ಥತಿಳಿಯದೆ ಕೇವಲ ಪಠನೆ ಮಾಡುವರೋ ಅವರಿಗೆ ಅದರಿಂದ ಯಾವುದೇ ಫಲ ಸಿಗಲಾರದು. ಸಾವಿರಾರು ಬಾರಿ ಜಪಿಸಿದರೂ ಜಯಸಿಗಲಾರದು. ಆದ್ದರಿಂದ ಮಂತ್ರದ ಅರ್ಥತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಮಂತ್ರದ ಸಾರವನ್ನು ತಿಳಿದು ಕೊಳ್ಳುವುದು ಇನ್ನೂ ಮುಖ್ಯ. ಅರಿವಿಲ್ಲದ ಜಪ ಪ್ರಯೋಜನಕ್ಕೆ ಬರಲಾರದು. ಹಲವಾರು ಭಾರಿ ಜಪಿಸಿದರೂ ಯಾವ ಪರಿಣಾಮವೂ ಆಗಲಾರದು. ಆದ್ದರಿಂದ ಮಂತ್ರದ ಮನನ ಹಾಗೂ ಅರಿವು ಜಯ ಸಾಧಿಸಲು ಸಹಾಯ ಮಾಡುತ್ತದೆ.

Quiz

ದೇವರ ಪುರೋಹಿತರು ಯಾರು?

ಕೃಷ್ಣ ನೀ ಬೇಗನೇ ಬಾರೋ| ಬೇಗನೆ ಬಾರೋ ನೀ ಮುಖವನ್ನು ತೋರೋ| (ಕೃಷ್ಣ ನೀ ಬೇಗನೇ ಬಾರೋ) ಕಾಲಾಲಂದುಗೆ ಗೆಜ್ಜೆ ನೀಲದ ಭಾವುಲಿ ನೀಲವರ್ಣನೆ ನಾಟ್ಯವಾಡುತ ಬಾರೋ| (ಕೃಷ್ಣ ನೀ ಬೇಗನೇ ಬಾರೋ) ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರ ಕೊರಳಲ್ಲಿ ಹಾಕಿದ....

ಕೃಷ್ಣ ನೀ ಬೇಗನೇ ಬಾರೋ|

ಬೇಗನೆ ಬಾರೋ ನೀ ಮುಖವನ್ನು ತೋರೋ|
(ಕೃಷ್ಣ ನೀ ಬೇಗನೇ ಬಾರೋ)

ಕಾಲಾಲಂದುಗೆ ಗೆಜ್ಜೆ ನೀಲದ ಭಾವುಲಿ
ನೀಲವರ್ಣನೆ ನಾಟ್ಯವಾಡುತ ಬಾರೋ|
(ಕೃಷ್ಣ ನೀ ಬೇಗನೇ ಬಾರೋ)

ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರ
ಕೊರಳಲ್ಲಿ ಹಾಕಿದ ವೈಜಯಂತಿಮಾಲೆ|
(ಕೃಷ್ಣ ನೀ ಬೇಗನೇ ಬಾರೋ)

ಕಾಶೀ ಪೀತಾಂಬರ ಕೈಯಲ್ಲಿ ಕೊಳಲು
ಪೂಸಿದ ಶ್ರೀ ಗಂಧ ಮೈಯೊಳು ಘಮಘಮ!|
(ಕೃಷ್ಣ ನೀ ಬೇಗನೇ ಬಾರೋ)

ತಾಯಿಗೆ ಬಾಯಲ್ಲಿ ಜಗವನ್ನು ತೋರಿದ
ಜಗದೋದ್ಧಾರಕ ನಮ್ಮ ಉಡುಪಿ ಶ್ರೀ ಕೃಷ್ಣ|
(ಕೃಷ್ಣ ನೀ ಬೇಗನೇ ಬಾರೋ)

kri'shna nee begane baaro|

begane' baaro nee mukhavannu toro|
(kri'shna nee begane baaro)

kaalaalanduge' ge'jje' neelada bhaavuli
neelavarnane' naat'yavaad'uta baaro|
(kri'shna nee begane baaro)

ud'iyalli ud'uge'jje' be'ral'alli ungura
ko'ral'alli haakida vaijayantimaale'|
(kri'shna nee begane baaro)

kaashee peetaambara kaiyalli ko'l'alu
poosida shree gandha maiyo'l'u ghamaghama!|
(kri'shna nee begane baaro)

taayige' baayalli jagavannu torida
jagadoddhaaraka namma ud'upi shree kri'shna|
(kri'shna nee begane baaro)

Recommended for you

ಸೂರ್ಯನೊಂದಿಗೆ ಸ್ಪರ್ಧೆ

ಸೂರ್ಯನೊಂದಿಗೆ ಸ್ಪರ್ಧೆ

Click here to know more..

ಶಿವ ಪಾರ್ವತೀ ಮಂತ್ರ

ಶಿವ ಪಾರ್ವತೀ ಮಂತ್ರ

ಹ್ರೀಂ ಓಂ ಹ್ರೀಂ ನಮಃ ಶಿವಾಯ....

Click here to know more..

ವರಾಹ ಸ್ತೋತ್ರ

ವರಾಹ ಸ್ತೋತ್ರ

ಸಟಾಶಿಖೋದ್ಧೂತಶಿವಾಂಬುಬಿಂದುಭಿರ್ವಿಮೃಜ್ಯಮಾನಾ ಭೃಶಮೀಶ ಪಾವಿ�....

Click here to know more..