ಭಗವಾನ್ ಹನುಮಂತನು ಭಕ್ತಿ ಸೇವೆ , ಕರ್ತವ್ಯ ದೃಢ ವಿಶ್ವಾಸ ಬ್ರಹ್ಮಚರ್ಯ ಶೌರ್ಯ ಸಹನೆ ವಿಧೇಯತೆಗಳ ಸಂಕೇತ . ಅತ್ಯಂತ ಬಲಶಾಲಿಯಾಗಿದ್ದರೂ ಕೂಡ ಆತ ವಿನಯ ,ನಮ್ರತೆ ವಿಧೇಯತೆ ಇತ್ಯಾದಿ ಗುಣಗಳ ಆಗರ .ಅವನ ಅಪಾರ ಶಕ್ತಿಯು ಯಾವಾಗಲೂ ದೈವಿಕ ಶಕ್ತಿಯ ವಿಜೃಂಬಣೆಗೋಸುಗ ಉಪಯೋಗಿಸಲ್ಪಡುತ್ತಿತ್ತು ಯಾವಾತನು ತನ್ನ ಶಕ್ತಿಯನ್ನು ಸಮಾಜದ ಒಳಿತಿಗಾಗಿ ಬಳಸುತ್ತಾನೋ ಅವನ ಮೇಲೆ ಪರಮಾತ್ಮನ ಒಲವು ಇದ್ದೇ ಇರುತ್ತದೆ. ಹನುಮಂತನು ತನ್ನ ಬಲವನ್ನು ಕ್ಷುಲ್ಲಕ ಕಾರಣಗಳಿಗಾಗಿ ಹಾಗೂ ಮಮಕಾರ ಅಥವಾ ದೇಷಗಳ ಸಾಧನೆಗೆ ಎಂದಿಗೂ ಬಳಸಲಿಲ್ಲ ಯಾವತ್ತಿಗೂ ಅಹಂಕಾರಕ್ಕೆ ಒಳಗಾಗಲಿಲ್ಲ ಹನುಮಂತನೊಬ್ಬನೇ ಅಹಂಕಾರಕ್ಕೆ ಒಳಗಾಗದ ದೇವತೆ ಆತ ತನ್ನ ಕರ್ತವ್ಯ ವನ್ನು ನಿಸ್ವಾರ್ಥದಿಂದ ಮಾಡುತ್ತಾ ಶ್ರೀ ರಾಮನನ್ನೇ ಅನುಗಾಲವೂ ನೆನೆಯುತ್ತಾ ಇರುವಂತಹವ
ನಾರದ ಮುನಿಗಳು ತ್ರಿಲೋಕ ಸಂಚಾರಿ ಗಳು ಮನ್ ವೇಗದಲ್ಲಿ ಮೂರೂಲೋಕಗಳನ್ನು ಸಂಚರಿಸಬಲ್ಲಂತವರು ಅವರು ನಮ್ಮ ಪುರಾಣಗಳಲ್ಲಿ ಕಲಹಪ್ರಿಯರೆಂದೇ ಪ್ರಖ್ಯಾತ ರಾದವರು ಆದರೂ ಪ್ರಪಂಚದ ವಕ್ರತೆಗಳೆಲ್ಲವೂ ಕಳೆದು ದೈವ ಸಂಕಲ್ಪವು ನೆರವೇರುವಲ್ಲಿ ಹಾಗೂ ಸಂಘರ್ಷಗಳನ್ನು ಕಳೆದು ಅನುಕೂಲಕರ ಪರಿಸ್ಥಿತಿಯನ್ನು ಉಂಟುಮಾಡುವುದರಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ ನಾರದರ ಕಥೆಗಳು ಅವರ ಚಾಣಾಕ್ಷ ಬುದ್ಧಿಯಿಂದ ಹಾಗೂ ಮಹತ್ತರವಾದುದನ್ನುಸಾಧಿಸುವ ದೃಷ್ಟಿಯಿಂದ ಎಲ್ಲರ ಗಮನ ಸೆಳೆಯುತ್ತದೆ.