ಶ್ರೀ ಮದ್ಭಗವದ್ಗೀತೆಯಲ್ಲಿ ರಾಜಾ ಕಕುದ್ಮಿ ಹಾಗೂ ಆತನ ಮಗಳು ರೇವತಿ ಯ ಕುರಿತು ಒಂದು ಕಥೆ ಬರುತ್ತದೆ. ತನ್ನ ಮಗಳು ರೇವತಿಗೆ ಒಳ್ಳೆಯ ವರನನ್ನು ಹುಡುಕುವ ಸಲುವಾಗಿ ರಾಜಾ ಕಕುದ್ಮಿ , ತನ್ನ ಮಗಳೊಂದಿಗೆ ಬ್ರಹ್ಮಲೋಕಕ್ಕೆ ಹೋಗುತ್ತಾನೆ.ಅಂತೂ ಮತ್ತೆ ಭೂಲೋಕಕ್ಕೆ ಮರಳಿಬಂದಾಗ, ಎಲ್ಲವೂ ಬದಲಾದಂತೆ ಹಾಗೂ ಬೇರೆಯೇ ಯಾವುದೋ ಯುಗಕ್ಕೆ ಬಂದಂತೆ ಅವರಿಬ್ಬರಿಗೂ ಭಾಸವಾಗುತ್ತದೆ. ತುಂಬಾ ಸಂವತ್ಸರಗಳು ಕಳೆದು ಅವರಿಗೆ ತಿಳಿದಿರುವ ಎಲ್ಲರೂ ಸಾವನ್ನಪ್ಪಿದ್ದರು. ರೇವತಿ ಯು ನಂತರ ಶ್ರೀ ಕೃಷ್ಣ ನ ಅಣ್ಣ ಬಲರಾಮ ನನ್ನು ಮದುವೆ ಯಾದಳು. ಈ ಕಥೆಯಿಂದ ನಮ್ಮ ಪೂರ್ವೇತಿಹಾಸದಲ್ಲಿ ಸಮಯದ ವಿಸ್ತರಣೆಯ ಬಗ್ಗೆ ಇದ್ದ ಮಾಹಿತಿ ಯ ಬಗ್ಗೆ ತಿಳಿದು ಬರುತ್ತದೆ.
ಮಹಾವಿಷ್ಣುವಿನ ಕೈಯಲ್ಲಿರು ಸುದರ್ಶನ ಚಕ್ರವು ೧೦೦೦ಗಳಷ್ಟು ಅರೆಗಳನ್ನು ಹೊಂದಿದ್ದು ಅತ್ಯಂತ ಪ್ರಬಲ ಆಯುಧ ವೆಂದು ಪರಿಗಣಿಸಲ್ಪಟ್ಟಿದೆ ಈ ಆಯುಧವು ಮನೋವೇಗದಲ್ಲಿ ಕಾರ್ಯವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದು ತನ್ನ ದಾರಿಯಲ್ಲಿ ಬರುವ ಎಲ್ಲವನ್ನೂ ನಾಶ ಮಾಡಬಲ್ಲದು ಇದು ತನ್ನದೇ ವೈಯುಕ್ತಿಕ ಪ್ರಜ್ಞೆ ಯನ್ನು ಹೊಂದಿದ್ದು ವಿಷ್ಣುವಿನ ಆಜ್ಞೆ ಯನ್ನು ಮಾತ್ರ ಪರಿಪಾಲಿಸುತ್ತದೆ.
ತತ್ಪುರುಷಾಯ ವಿದ್ಮಹೇ ಸಹಸ್ರಾಕ್ಷಾಯ ಧೀಮಹಿ ತನ್ನಃ ಶಕ್ರಃ ಪ್ರಚೋದಯಾತ್....
ತತ್ಪುರುಷಾಯ ವಿದ್ಮಹೇ ಸಹಸ್ರಾಕ್ಷಾಯ ಧೀಮಹಿ ತನ್ನಃ ಶಕ್ರಃ ಪ್ರಚೋದಯಾತ್