ಚಂಡೇಶ್ವರ್ಯೈ ಚ ವಿದ್ಮಹೇ ಮಹಾದೇವ್ಯೈ ಚ ಧೀಮಹಿ . ತನ್ನಃ ಚಂಡೀ ಪ್ರಚೋದಯಾತ್ ..
ಶ್ರೀ ಮದ್ಭಗವದ್ಗೀತೆಯಲ್ಲಿ ರಾಜಾ ಕಕುದ್ಮಿ ಹಾಗೂ ಆತನ ಮಗಳು ರೇವತಿ ಯ ಕುರಿತು ಒಂದು ಕಥೆ ಬರುತ್ತದೆ. ತನ್ನ ಮಗಳು ರೇವತಿಗೆ ಒಳ್ಳೆಯ ವರನನ್ನು ಹುಡುಕುವ ಸಲುವಾಗಿ ರಾಜಾ ಕಕುದ್ಮಿ , ತನ್ನ ಮಗಳೊಂದಿಗೆ ಬ್ರಹ್ಮಲೋಕಕ್ಕೆ ಹೋಗುತ್ತಾನೆ.ಅಂತೂ ಮತ್ತೆ ಭೂಲೋಕಕ್ಕೆ ಮರಳಿಬಂದಾಗ, ಎಲ್ಲವೂ ಬದಲಾದಂತೆ ಹಾಗೂ ಬೇರೆಯೇ ಯಾವುದೋ ಯುಗಕ್ಕೆ ಬಂದಂತೆ ಅವರಿಬ್ಬರಿಗೂ ಭಾಸವಾಗುತ್ತದೆ. ತುಂಬಾ ಸಂವತ್ಸರಗಳು ಕಳೆದು ಅವರಿಗೆ ತಿಳಿದಿರುವ ಎಲ್ಲರೂ ಸಾವನ್ನಪ್ಪಿದ್ದರು. ರೇವತಿ ಯು ನಂತರ ಶ್ರೀ ಕೃಷ್ಣ ನ ಅಣ್ಣ ಬಲರಾಮ ನನ್ನು ಮದುವೆ ಯಾದಳು. ಈ ಕಥೆಯಿಂದ ನಮ್ಮ ಪೂರ್ವೇತಿಹಾಸದಲ್ಲಿ ಸಮಯದ ವಿಸ್ತರಣೆಯ ಬಗ್ಗೆ ಇದ್ದ ಮಾಹಿತಿ ಯ ಬಗ್ಗೆ ತಿಳಿದು ಬರುತ್ತದೆ.
ಅಮೃತವನ್ನು ಪಡೆಯುವುದಕ್ಕಾಗಿ ದೇವ ದಾನವರು ಸಮುದ್ರ ಮಥನವನ್ನು ಮಾಡಿದರು ಇದರಿಂದ ಅಮೃತವೇ ಅಲ್ಲದೆ ಇನ್ನೂ ಅನೇಕ ಉಪಯುಕ್ತ ಹಾಗೂ ವಿನಾಶಕಾರಿ ವಸ್ತುಗಳೂ ಹೊರಬಂದವು ಈ ಪ್ರಕ್ರಿಯೆಯಿಂದ ಅನೇಕ ಆಕಾಶ ಕಾಯಗಳು ಅಮೂಲ್ಯ ದ್ರವ್ಯಗಳು ಕಾಮಧೇನು ಕೇಳಿದನ್ನು ಕೊಡುವ ಕಲ್ಪವೃಕ್ಷ ಸಂಪತ್ತಿನ ಅಧಿದೇವತೆ ಲಕ್ಷ್ಮಿ ...ಇತ್ಯಾದಿಗಳು ಹೊರಬಂದವು.