ದಿವಾಕರಾಯ ವಿದ್ಮಹೇ ರಾಶಿಚಕ್ರಾಧಿಪಾಯ ಧೀಮಹಿ . ತನ್ನಃ ಸೂರ್ಯಃ ಪ್ರಚೋದಯಾತ್ ..
ಸೃಷ್ಟಿಯ ಸಮಯದಲ್ಲಿ, ಬ್ರಹ್ಮನು ಲೋಕವು ಶೀಘ್ರದಲ್ಲೇ ಜೀವಿಗಳಿಂದ ತುಂಬಿಹೋಗುವುದು ಕಲ್ಪಿಸಿರಲಿಲ್ಲ. ಬ್ರಹ್ಮನು ಲೋಕದ ಸ್ಥಿತಿಯನ್ನು ನೋಡಿ ಚಿಂತಿತನಾದನು ಮತ್ತು ಎಲ್ಲವನ್ನು ದಹಿಸಲು ಅಗ್ನಿಯನ್ನು ಕಳುಹಿಸಿದನು. ಭಗವಾನ್ ಶಿವನು ಮಧ್ಯಸ್ಥಿಕೆ ನೀಡಿ ಜನಸಂಖ್ಯೆಯನ್ನು ನಿಯಂತ್ರಿಸಲು ವ್ಯವಸ್ಥಿತವಾದ ಮಾರ್ಗವನ್ನು ಶಿಪಾರಸ್ಸು ಮಾಡಿದನು. ಆಗ ಬ್ರಹ್ಮನು ಆ ವಿಧಾನವನ್ನು ಕಾರ್ಯಗತಗೊಳಿಸಲು ಮರಣ ಮತ್ತು ಮೃತ್ಯುದೇವನನ್ನು ಸೃಷ್ಟಿಸಿದನು.
ಭಗವಾನ್ ಹನುಮಂತನು ಭಕ್ತಿ ಸೇವೆ , ಕರ್ತವ್ಯ ದೃಢ ವಿಶ್ವಾಸ ಬ್ರಹ್ಮಚರ್ಯ ಶೌರ್ಯ ಸಹನೆ ವಿಧೇಯತೆಗಳ ಸಂಕೇತ . ಅತ್ಯಂತ ಬಲಶಾಲಿಯಾಗಿದ್ದರೂ ಕೂಡ ಆತ ವಿನಯ ,ನಮ್ರತೆ ವಿಧೇಯತೆ ಇತ್ಯಾದಿ ಗುಣಗಳ ಆಗರ .ಅವನ ಅಪಾರ ಶಕ್ತಿಯು ಯಾವಾಗಲೂ ದೈವಿಕ ಶಕ್ತಿಯ ವಿಜೃಂಬಣೆಗೋಸುಗ ಉಪಯೋಗಿಸಲ್ಪಡುತ್ತಿತ್ತು ಯಾವಾತನು ತನ್ನ ಶಕ್ತಿಯನ್ನು ಸಮಾಜದ ಒಳಿತಿಗಾಗಿ ಬಳಸುತ್ತಾನೋ ಅವನ ಮೇಲೆ ಪರಮಾತ್ಮನ ಒಲವು ಇದ್ದೇ ಇರುತ್ತದೆ. ಹನುಮಂತನು ತನ್ನ ಬಲವನ್ನು ಕ್ಷುಲ್ಲಕ ಕಾರಣಗಳಿಗಾಗಿ ಹಾಗೂ ಮಮಕಾರ ಅಥವಾ ದೇಷಗಳ ಸಾಧನೆಗೆ ಎಂದಿಗೂ ಬಳಸಲಿಲ್ಲ ಯಾವತ್ತಿಗೂ ಅಹಂಕಾರಕ್ಕೆ ಒಳಗಾಗಲಿಲ್ಲ ಹನುಮಂತನೊಬ್ಬನೇ ಅಹಂಕಾರಕ್ಕೆ ಒಳಗಾಗದ ದೇವತೆ ಆತ ತನ್ನ ಕರ್ತವ್ಯ ವನ್ನು ನಿಸ್ವಾರ್ಥದಿಂದ ಮಾಡುತ್ತಾ ಶ್ರೀ ರಾಮನನ್ನೇ ಅನುಗಾಲವೂ ನೆನೆಯುತ್ತಾ ಇರುವಂತಹವ