164.4K
24.7K

Comments

Security Code

56651

finger point right
ಉತ್ತಮ ಚಾನಲ್ ಧನ್ಯವಾದಗಳು ‌ನಿಮಗೇ -User_sn8b4j

ಇಲ್ಲಿ ಪ್ರಕಟವಾಗುತ್ತಿರುವ ಪ್ರತಿಯೊಂದು ನನಗೆ ಉಪಯುಕ್ತವಾಗಿದೆ -Raghu prasad

ಈ ಮಂತ್ರವು ನನ್ನ ಆತ್ಮಕ್ಕೆ ಉಲ್ಲಾಸವನ್ನು ನೀಡುತ್ತದೆ, ಧನ್ಯವಾದಗಳು ಗುರುಜಿ. -ರಾಧಾ ಕೆ

ಸನಾತನ ಧರ್ಮದ ಕುರಿತಾದ ವೈಭವವನ್ನು ತೆರೆದಿಡುತ್ತದೆ 🕉️ -ಗೀತಾ ರಾವ್

ನಿಮ್ಮ ಮಂತ್ರಗಳು ನನ್ನ ಜೀವನದ ಒಂದು ಭಾಗವಾಗಿದೆ. -ಪೂಜಾ ನಾಯ್ಕ್

Read more comments

Knowledge Bank

ದುರ್ದಮನಿಗೆ ಕೊಡಲ್ಪಟ್ಟ ಶಾಪ ಹಾಗೂ ಅದರ ವಿಮೋಚನೆ

ದುರ್ದಮನು ವಿಶ್ವಾವಸು ಎಂಬ ಒಬ್ಬ ಗಂಧರ್ವನ ಮಗ.ಒಂದು ಸಲ ಆತ ತನ್ನ ಸಾವಿರಾರು ಜನ ಪತ್ನಿಯರೊಂದಿಗೆ ಕೈಲಾಸದ ಬಳಿಯ ಸರೋವರದಲ್ಲಿ ಆನಂದದಿಂದ ವಿಹರಿಸುತ್ತಿದ್ದ . ಸಮೀಪದಲ್ಲಿಯೇ ತಪಸ್ಸನ್ನು ಆಚರಿಸುತ್ತಿದ್ದ ವಸಿಷ್ಟ ಮುನಿಯ ತಪಸ್ಸಿಗೆ ಇದರಿಂದ ಅಡಚಣೆ ಉಂಟಾಗಿ, ಅವರು ಅವನನ್ನು‌ ರಾಕ್ಷಸನಾಗೆಂದು ಶಪಿಸಿದರು. ಆಗ ದುರ್ದಮನ ಪತ್ನಿಯರೆಲ್ಲರು ಅವನನ್ನು ಕ್ಷಮಿಸಬೇಕೆಂದು ವಸಿಷ್ಟರನ್ನು ಬೇಡಿಕೊಂಡರು ಮಹಾವಿಷ್ಣುವಿನ ಅನುಗ್ರಹದಿಂದ ದುರ್ದಮನು ಹದಿನೇಳು ವರ್ಷಗಳ ನಂತರ ಮತ್ತೊಮ್ಮೆ ಗಂಧರ್ವನಾಗುತ್ತಾನೆಂದು ವಸಿಷ್ಟರು ಹೇಳಿದರು. ಕಾಲಾಂತರದಲ್ಲಿ ದುರ್ದಮನು ಗಾಲವ ಮುನಿಯನ್ನು ನುಂಗಲು ಪ್ರಯತ್ನಿಸುತ್ತಿದ್ದಾಗ ಮಹಾವಿಷ್ಣು ವಿನಿಂದ ಶಿರಚ್ಛೇದನಕ್ಕೆ ಒಳಗಾದನು ಹಾಗೂ ಮೂಲ ಸ್ವರೂಪವನ್ನು ಮರಳಿ ಪಡೆದನು. ಈ ಕಥೆಯ ನೀತಿ ಏನೆಂದರೆ, ಮಾಡುವ ಎಲ್ಲಾ ಕರ್ಮಗಳಿಗೆ ಪ್ರತಿಫಲ ಇದ್ದೇ ಇರುತ್ತದೆ ಆದರೆ ಅನುಕಂಪ ಹಾಗೂ ದೈವ ಕೃಪೆಯಿಂದ ದೇವತಾನುಗ್ರಹ ಸಾ

ರಾವಣನು ತನ್ನ ಹತ್ತು ತಲೆಗಳನ್ನು ಬಲಿನೀಡಿದ ಕಥೆ

ವೈಶ್ರವಣ ಅರ್ಥಾತ್ ಕುಬೇರನು ಕಠಿಣ ತಪಸ್ಸನ್ನು ಆಚರಿಸಿ ಲೋಕಪಾಲಕರಲ್ಲಿ ಒಬ್ಬನಾಗಿ ಸ್ಥಾನವನ್ನು ಪಡೆದುಕೊಂಡನು ಹಾಗೂ ಪುಷ್ಪಕ ವಿಮಾನವನ್ನೂ ಬಳುವಳಿಯಾಗಿ ಪಡೆದನು. ತನ್ನ ತಂದೆ ವಿಶ್ರಾವಸುವಿನ ಆದೇಶದಂತೆ ಲಂಕಾನಗರದಲ್ಲಿ ವಾಸಮಾಡತೊಡಗಿದನು. ಕುಬೇರನ ವೈಭವೋಪೇತ ಜೀವನವನ್ನು ಕಂಡು ಕರುಬಿದ ವಿಶ್ರಾವಸುವಿನ ಎರಡನೇ ಹೆಂಡತಿ ಕೈಕಸೆಯು ತನ್ನ ಮಗ ರಾವಣನಿಗೆ ಇದೇ ರೀತಿಯ ಶ್ರೇಷ್ಟತೆಯನ್ನು ಸಾಧಿಸಲು ಪ್ರೇರೇಪಿಸಿದಳು. ತಾಯಿಯ ಮಾತಿನಂತೆ ರಾವಣನು ತನ್ನ ತಮ್ಮಂದಿರಾದ ವಿಭೀಷಣ ಕುಂಭಕರ್ಣರೊಂದಿಗೆ ಗೋಕರ್ಣಕ್ಕೆ ತೆರಳಿ ಘೋರ ತಪಸ್ಸನ್ನು ಆಚರಸಿದನು. ಈ ರೀತಿಯಲ್ಲಿ ದಶ ಸಹಸ್ರ ವರ್ಷಗಳ ಕಾಲ ತೀವ್ರವಾದ ತಪಸ್ಸನ್ನು ಆಚರಿಸಿದನು. ಪ್ರತಿ ಸಾವಿರ ವರ್ಷಗಳ ಕೊನೆಯಲ್ಲಿ ತನ್ನ ಒಂದೊಂದು ಶಿರವನ್ನು ಅಗ್ನಿಯಲ್ಲಿ ಆಹುತಿಯಾಗಿ ಕೊಡುತ್ತಿದ್ದನು. ಇದೇ ರೀತಿಯಲ್ಲಿ ಒಂಬತ್ತು ಸಾವಿರ ವರ್ಷಗಳಲ್ಲಿ ಒಂಬತ್ತು ತಲೆಗಳನ್ನು ಯಜ್ಞದಲ್ಲಿ ಅರ್ಪಿಸಿದನು. ಹತ್ತನೇ ತಲೆಯನ್ನು ಕಡಿದು ಅರ್ಪಿಸುವ ಸಮಯದಲ್ಲಿ ಬ್ರಹ್ಮನು ಪ್ರತ್ಯಕ್ಷನಾದನು. ರಾವಣನ ಭಕ್ತಿಗೆ ಮೆಚ್ಚಿದ ಬ್ರಹ್ಮನು ಅವನಿಗೆ ಅದೃಶ್ಯನಾಗುವ ವರವನ್ನು ಕೊಟ್ಟ‌ನು. ಇದರಿಂದ ಆತನು ದೇವತೆ ದಾನವರು ಹಾಗೂ ಇನ್ನಿತರ ಆಕಾಶಕಾಯಗಳಿಗೆ ಕಾಣದಂತೆ ಇರಬಲ್ಲವನಾಗಿದ್ದ. ಇಷ್ಟೇ ಅಲ್ಲದೇ ಬ್ರಹ್ಮನು ಅವನ ಎಲ್ಲಾ ತಲೆಗಳನ್ನು ಪುನಃ ಸ್ಥಾಪಿಸಿದನು. ಹೀಗೆ ರಾವಣ ತನ್ನ ಹತ್ತು ತಲೆಗಳನ್ನು ಮರಳಿ ಪಡೆದನು.

Quiz

ಯಾವ ದೇವರಿಗೆ ನಾಲ್ಕು ತಲೆಗಳಿವೆ?

ಅಂತರಿಕ್ಷಚರಾ ದೇವೀ ಸರ್ವಾಲಂಕಾರಭೂಷಿತಾ . ಅಯೋಮುಖೀ ತೀಕ್ಷ್ಣತುಂಡಾ ಶಕುನೀ ತೇ ಪ್ರಸೀದತು .. ದುರ್ದರ್ಶನಾ ಮಹಾಕಾಯಾ ಪಿಂಗಾಕ್ಷೀ ಭೈರವಸ್ವರಾ . ಲಂಬೋದರೀ ಶಂಕುಕರ್ಣೀ ಶಕುನೀ ತೇ ಪ್ರಸೀದತು ......

ಅಂತರಿಕ್ಷಚರಾ ದೇವೀ ಸರ್ವಾಲಂಕಾರಭೂಷಿತಾ . ಅಯೋಮುಖೀ ತೀಕ್ಷ್ಣತುಂಡಾ ಶಕುನೀ ತೇ ಪ್ರಸೀದತು ..
ದುರ್ದರ್ಶನಾ ಮಹಾಕಾಯಾ ಪಿಂಗಾಕ್ಷೀ ಭೈರವಸ್ವರಾ . ಲಂಬೋದರೀ ಶಂಕುಕರ್ಣೀ ಶಕುನೀ ತೇ ಪ್ರಸೀದತು ..

Other languages: EnglishHindiMalayalamTeluguTamil

Recommended for you

ರಕ್ಷಣೆಗಾಗಿ ಹನುಮಾನ್ ಮಂತ್ರ

ರಕ್ಷಣೆಗಾಗಿ ಹನುಮಾನ್ ಮಂತ್ರ

ಓಂ ಹ್ರೀಂ ಓಂ ನಮೋ ಭಗವನ್ ಪ್ರಕಟಪರಾಕ್ರಮ ಆಕ್ರಾಂತದಿಙ್ಮಂಡಲ ಯಶೋ�....

Click here to know more..

ರಕ್ಷಣೆ ಮತ್ತು ಸಮೃದ್ಧಿಗಾಗಿ ರಾಮ ಮಂತ್ರ

ರಕ್ಷಣೆ ಮತ್ತು ಸಮೃದ್ಧಿಗಾಗಿ ರಾಮ ಮಂತ್ರ

ರಾಮಭದ್ರ ಮಹೇಷ್ವಾಸ ರಘುವೀರ ನೃಪೋತ್ತಮ . ದಶಾಸ್ಯಾಂತಕ ಮಾಂ ರಕ್ಷ �....

Click here to know more..

ಜಗನ್ಮಂಗಲ ರಾಧಾ ಕವಚಂ

ಜಗನ್ಮಂಗಲ ರಾಧಾ ಕವಚಂ

ಓಂ ಅಸ್ಯ ಶ್ರೀಜಗನ್ಮಂಗಲಕವಚಸ್ಯ. ಪ್ರಜಾಪತಿರ್ಋಷಿಃ. ಗಾಯತ್ರೀ ಛಂ�....

Click here to know more..