ಓಂ ಹ್ರೀಂ ಸ್ಫುರ ಸ್ಫುರ ಪ್ರಸ್ಫುರ ಪ್ರಸ್ಫುರ ಘೋರ ಘೋರತರ ತನುರೂಪ ಚಟ ಚಟ ಪ್ರಚಟ ಪ್ರಚಟ ಕಹ ಕಹ ವಮ ವಮ ಬಂಧಯ ಬಂಧಯ ಖಾದಯ ಖಾದಯ ಹುಂ ಫಟ್ ಸ್ವಾಹಾ .
ನಮ್ಮ ಹಿಂದೂ ಧರ್ಮದಲ್ಲಿ ಸ್ನಾನಕ್ಕಿಂತ ಮೊದಲು ಆಹಾರ ಸೇವನೆ ಮಾಡುವುದನ್ನು ನಿರಾಕರಿಸಲಾಗಿದೆ. ಸ್ನಾನದಿಂದ ದೇಹ ಮತ್ತು ಮನಸ್ಸು ಎರಡೂ ಶುದ್ಧವಾಗುತ್ತದೆ. ಸ್ವಚ್ಛವಾಗಿ ಆಹಾರವನ್ನು ಸ್ವೀಕರಿಸುವುದಕ್ಕೆ ಅನುವು ಮಾಡಿಕೊಡುತ್ತದೆ. ಸ್ನಾನ ಮಾಡದೇ ಆಹಾರ ಸೇವಿಸುವುದು ಅಶುದ್ಧ ಎನಿಸಿಕೊಳ್ಳುತ್ತದೆ. ಇದು ಆಧ್ಯಾತ್ಮಿಕ ಸಾಧನೆಗೆ ಅಡ್ಡಿಪಡಿಸುತ್ತ್ತದೆ. ಸ್ನಾನದಿಂದ ಮನಸ್ಸು ಉತ್ತೇಜಿತಗೊಳ್ಳುತ್ತದೆ. ಜೀರ್ಣಕ್ರಿಯೆ ಹಾಗೂ ರಕ್ತ ಪರಿಚಲನೆ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಆಹಾರವು ಪವಿತ್ರ ವಾದುದು.ಶರೀರ ಮಲಿನವಾಗಿದ್ದಾಗ ಆಹಾರ ಸೇವನೆ ಅಗೌರವ ಸೂಚಕ. ಈ ಅಭ್ಯಾಸದಿಂದ . ಆಹಾರ ಹಾಗೂ ಆರೋಗ್ಯ ಎರಡೂ ಉತ್ತಮ ವಾಗಿರುತ್ತದೆ. ಆರೋಗ್ಯ ಹಾಗೂ ಆಧ್ಯಾತ್ಮಿಕತೆಯೊಂದಿಗೆ ಸಂಪರ್ಕಸಾಧ್ಯವಾಗುತ್ತದೆ. ಇದೊಂದು ಅಭ್ಯಾಸದಿಂದ ಪರಿಪೂರ್ಣ ವಾಗಿ ಹಿಂದೂಧರ್ಮದ ನಿಯಮಗಳನ್ನು ಅಳವಡಿಸಿಕೊಳ್ಳಲು ಅನುವಾಗುತ್ತದೆ. ಆದ್ದರಿಂದ ದೇಹ ಹಾಗೂ ಆಹಾರ ಎರಡನ್ನೂ ಗೌರವಿದುವುದು ಅತ್ಯಂತ ಅಗತ್ಯ.
ಅಷ್ಟಾವಕ್ರರು ೮ ಬಗೆಯ ವಿಕಾರದೊಂದಿಗೆ ವಿರೂಪರಾಗಿ ಜನಿಸಿದರೂ ಅದೈತ ಸಿದ್ಧಾಂತದ ಬಗ್ಗೆ ಅವರ ಭೋದನೆಗಳು ತುಂಬಾ ಪ್ರಸಿದ್ಧವಾಗಿದೆ ವೈದಿಕ ಸಿದ್ಧಾಂತದ ಬಗ್ಗೆ ಆಳವಾದ ತಿಳುವಳಿಕೆ ಯುಳ್ಳ ಮಹಾನ್ ಸಾಧಕರು ಹಾಗೂ ಆದ್ಯಾತ್ಮಿಕ ಗುರು. ಇವರ ಅಷ್ಟಾವಕ್ರ ಗೀತವೆಂಬ ಮಹಾಗ್ರಂಥ ದಲ್ಲಿ ಇವರ ಪ್ರತಿಪಾದನೆಯನ್ನು ಕಾಣಬಹುದಾಗಿದೆ.