ಮಘಾ ನಕ್ಷತ್ರ

ಮಘಾ ನಕ್ಷತ್ರ - ಗುಣಲಕ್ಷಣಗಳು, ಹೊಂದಿಕೆಯಾಗದ ನಕ್ಷತ್ರಗಳು, ಆರೋಗ್ಯ ಸಮಸ್ಯೆಗಳು, ಸೂಕ್ತ ವೃತ್ತಿ, ಅದೃಷ್ಟ ರತ್ನ, ಸೂಕ್ತವಾದ ಬಣ್ಣಗಳು, ಹೆಸರುಗಳು, ವಿವಾಹ, ಪರಿಹಾರಗಳು, ಮಂತ್ರ..

ಮಘಾ ನಕ್ಷತ್ರ

ಸಿಂಹ ರಾಶಿಯ  1ಡಿಗ್ರಿ ಯಿಂದ 13 ಡಿಗ್ರಿ  ಹಾಗೂ 20 ನಿಮಿಷಗಳಷ್ಟು  ಭಾಗವನ್ನು ಆಕ್ರಮಿಸಿರುವ ನಕ್ಷತ್ರ ಕ್ಕೆ ಮಘಾ ನಕ್ಷತ್ರ ಎನ್ನಲಾಗಿದೆ. ಇದು ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಹತ್ತನೆಯ ನಕ್ಷತ್ರ ಎನಿಸಿಕೊಂಡಿದೆ ಮಘಾ ನಕ್ಷತ್ರವನ್ನು ಪಾಶ್ಚಾತ್ಯ Regulus ಜೊತೆ ಹೋಲಿಸಬಹುದಾಗಿದೆ.

 

ಗುಣ ಲಕ್ಷಣಗಳು   

ಈ ನಕ್ಷತ್ರ ದಲ್ಲಿ ಜನಿಸಿರುವವರು - 

  • ಜಿಜ್ಞಾಸೆ
  • ಆತ್ಮವಿಶ್ವಾಸ
  • ಕಲಾವಂತಿಕೆ
  • ಶೀಘ್ರ ಕೋಪ
  • ಪ್ರಾಮಾಣಿಕತೆ
  • ರೂಪವಂತ
  • ಇನ್ನೊಬ್ಬರ ಅಡಿಯಾಳಾಗಿರಲು ಇಷ್ಟಪಡದೇ ಇರುವುದು
  • ನೇರ ಮಾತಾಡುವುದು  ಬದುಕನ್ನು ಪ್ರೀತಿಸುವುದು
  • ಪ್ರದರ್ಶನ ಪ್ರಿಯತೆ
  • ಯಾವುದೇ ಗುಟ್ಟನ್ನಾದರೂ ಬಚ್ಚಿಟ್ಟುಕೊಳ್ಳುವುದು
  • ಅಧಿಕಾರಿಗಳಿಂದ ಪ್ರಯೋಜನ ಪಡೆದುಕೊಳ್ಳುವುದು
  • ಉತ್ತಮ ಸಾರ್ವಜನಿಕ ಸಂಪರ್ಕ
  • ಇತರರ ಮೇಲೆ ಪ್ರಭಾವ ಬೀರುವ ಶಕ್ತಿ 
  • ಶಕ್ತಿವಂತ
  • ಜವಾಬ್ದಾರಿಯುತ
  • ಸ್ಪೂರ್ತಿ ಯುತ
  • ಬೇರೆಯವರಿಗೆ ಸಹಾಯ ಮಾಡುವುದು
  • ವಿಶ್ವಾಸಾರ್ಹ 
  • ಧೈರ್ಯವಂತ
  • ಮಹತ್ವಾಕಾಂಕ್ಷಿ
  • ಹೋರಾಟ ಪ್ರವೃತ್ತಿಯ
  • ರಸಿಕತೆ

ಇತ್ಯಾದಿ ಗುಣಗಳನ್ನು ಹೊಂದಿರುವವರಾಗಿರುತ್ತಾರೆ.

    

ಮಂತ್ರ   

 

ಓಂ ಪಿತೃಭ್ಯೋ ನಮಃ  

 

ಪ್ರತಿಕೂಲ ನಕ್ಷತ್ರಗಳು

  

  • ಉತ್ತರ ಫಾಲ್ಗುಣಿ
  • ಚಿತ್ರಾ
  • ವಿಶಾಖ
  • ಪೂರ್ವಾಭಾದ್ರ
  • ಉತ್ತರಾಭಾದ್ರ 
  • ರೇವತಿ 

   

ಮಘಾ ನಕ್ಷತ್ರ ದಲ್ಲಿ ಹುಟ್ಟಿದವರು ಇಂತಹ ದಿನಗಳಲ್ಲಿ  ಯಾವುದೇ ಪ್ರಮುಖ ಕಾರ್ಯಗಳನ್ನು ಆರಂಬಿಸಬಾರದು ಹಾಗೂ ಇಂತಹ ನಕ್ಷತ್ರಗಳಲ್ಲಿ ಹುಟ್ಟಿದವರೊಂದಿಗೆ ಯಾವುದೇ ಪಾಲುದಾರಿಕೆ ಇಟ್ಟು ಕೊಳ್ಳಬಾರದು.

 

ಆರೋಗ್ಯ ಸಮಸ್ಯೆಗಳು    

  • ಹೃದಯ ಸಂಬಂಧಿ ರೋಗಗಳು
  • ಬೆನ್ನು ನೋವು
  • ತೀವ್ರ ಹೃದಯ ಬಡಿತ
  • ಎಚ್ಚರ ತಪ್ಪುವುದು
  • ಮೂತ್ರಕೋಶದ ಕಲ್ಲು
  • ಕಾಲರಾ
  •  ಮನೋರೋಗ

 

 ಈ ನಕ್ಷತ್ರ ದಲ್ಲಿ ಜನಿಸಿದವರಿಗೆ ಸೂಕ್ತ ವೃತ್ತಿಗಳು

  • ಗುತ್ತಿಗೆಯ ವೃತ್ತಿ 
  • ಔಷಧ ಹಾಗೂ ರಾಸಾಯನಿಕ ಶಾಸ್ತ್ರ ಸಂಬಂಧೀ ಕೆಲಸಗಳು
  • ಅಪರಾಧ ಶಾಸ್ತ್ರ
  • ರಕ್ಷಣಾ ಇಲಾಖೆ
  • ವೈದ್ಯಕೀಯ
  • ಅನುಕರಣಾ ಆಭರಣ
  • ಆಯುಧ ವಿದ್ಯೆ
  • ಇತ್ಯಾದಿಗಳು

 

ಮಘಾ ನಕ್ಷತ್ರ ದಲ್ಲಿ ಹುಟ್ಟಿದವರು ವಜ್ರ ಧರಿಸಬಹುದೇ? 

ಇಲ್ಲ  ಇದು ಅವರಿಗೆ ಆಗಿ ಬರುವುದಿಲ್ಲ. 

ಅದೃಷ್ಟದ ಕಲ್ಲು

ಗೋಮೇದಿಕ 

ಅನುಕೂಲಕರ ಬಣ್ಣ 

ಕೆಂಪು 

 

ಮಾಘ ನಕ್ಷತ್ರದ ಹೆಸರುಗಳು‌

ಅಕಾರಾದಿ ನಿಯಮ ಪ್ರಕಾರ ಈ ನಕ್ಷತ್ರ ದಲ್ಲಿ ಹುಟ್ಟಿದವರ ಮೊದಲ ಅಕ್ಷರ-     

  • ಮೊದಲ ಚರಣ - ಮಾ 
  • ಎರಡನೆ ಚರಣ - ಮಿ  
  • ಮೂರನೇ ಚರಣ - ಮೂ 
  •  ನಾಲ್ಕನೇ ಚರಣ - ಮೆ     

 

ಈ ವರ್ಣಗಳನ್ನು ಸಾಂಪ್ರದಾಯಿಕ ವಾಗಿ ಹೆಸರಿಡುವ ಸಂದರ್ಭದಲ್ಲಿ ಬಳಸಬಹುದಾಗಿದೆ.

ಕೆಲವು ಸಮುದಾಯಗಳಲ್ಲಿ ಅಜ್ಜ ಅಜ್ಜಿಯರ ಹೆಸರುಗಳನ್ನು ಇಡುವ ಸಂಪ್ರದಾಯವನ್ನು ಪಾಲಿಸಲಾಗುತ್ತದೆ ಇದು ತಪ್ಪೇನಲ್ಲ    ಶಾಸ್ತ್ರದ ಪ್ರಕಾರ ಯಾವುದೇ ಕಛೇರಿಯ ದಾಖಲೆಯಲ್ಲಿ ಅಥವಾ ಇನ್ನಾವುದೇ ವ್ಯಾವಹಾರಿಕ ಉದ್ದೇಶ ಗಳಿಗಾಗಿ ಬಳಸುವ ಹೆಸರುಗಳನ್ನು ಬೇರೆಯಾಗಿಯೇ ಇರಬೇಕಾಗುತ್ತದೆ ಇದನ್ನು ವ್ಯವಹಾರ ನಾಮವೆಂದು ಕರೆಯಲಾಗುತ್ತದೆ  ಶಾಸ್ತ್ರೀಯ ನಾಮವನ್ನು ಕೇವಲ ಕುಟುಂಬ ಸದಸ್ಯರು ಮಾತ್ರ  ತಿಳಿದಿರಬೇಕಾಗುತ್ತದೆ.  

 

ಮಘಾ ನಕ್ಷತ್ರ ದಲ್ಲಿ ಹುಟ್ಟಿದವರು ಅಧಿಕೃತ ಹೆಸರು ಗಳನ್ನು ಇಡುವಾಗ - ತ ಥ ದ ಧ ನ ಯ ರ ಲ‌ ವ ಎ ಐ ಹ ಈ ಅಕ್ಷರಗಳನ್ನು  ವರ್ಜಿಸಬೇಕು

 

ವೈವಾಹಿಕ ಜೀವನ

ಮಘಾ ನಕ್ಷತ್ರ ದಲ್ಲಿ ಜನಿಸಿದ ಮಹಿಳೆಯರು ಉತ್ತಮ ವೈವಾಹಿಕ ಜೀವನವನ್ನು ನಡೆಸುತ್ತಾರೆ ಆದರೂ ಅವರಲ್ಲಿ ಕೆಲ ಮಾನಸಿಕ ಒತ್ತಡಗಳು ತಲೆದೋರಬಹುದು. 

 

ಪರಿಹಾರಗಳು

 ಆದಿತ್ಯ ಮಂಗಳ ಕುಜ ಹಾಗೂ ಬೃಹಸ್ಪತಿ ದೆಸೆಗಳು  ಈ ನಕ್ಷತ್ರ ದವರಿಗೆ ಅಷ್ಟೊಂದು ಆಗಿಬರುವುದಿಲ್ಲ ಅಂತಹವರು ಈ ಕೆಳಗಿನ ಉಪಾಯಗಳನ್ನು ಅನುಸರಿಸ ಬೇಕಾಗುತ್ತದೆ -

 

 

ಯಾವಾಗಲೂ ಸೂರ್ಯ ಮಂತ್ರ ಕೇತು ಮಂತ್ರ ಗಣಪತಿ ಮಂತ್ರ ಗಳನ್ನು ಕೇಳುವುದು ಒಳ್ಳೆಯದು         

 

ಮಘಾ ನಕ್ಷತ್ರ 

  • ದೇವತೆ - ಪಿತೃ ದೇವತೆ
  • ಅಧಿದೇವತೆ - ಕೇತು
  • ಪ್ರಾಣಿ - ಇಲಿ
  • ಮರ - ಆಲದ ಮರ
  • ಪಕ್ಷಿ - ಕಾಗೆ 
  • ಪಂಚಭೂತ - ಜಲ
  • ಗಣ - ಅಸುರ
  • ಯೋನಿ -  ಗಂಡು ಇಲಿ
  • ನಾಡಿ - ಅಂತ್ಯ
  • ಚಿಹ್ನೆ -  ಸಿಂಹಾಸನ
 Image courtesy: https://commons.wikimedia.org/wiki/File:Throne_of_Sultan_Mahmud_II_(1808-1839).jpg

 

ಕನ್ನಡ

ಕನ್ನಡ

ಜ್ಯೋತಿಷ್ಯ

Click on any topic to open

Copyright © 2025 | Vedadhara | All Rights Reserved. | Designed & Developed by Claps and Whistles
| | | | |
Vedahdara - Personalize
Whatsapp Group Icon
Have questions on Sanatana Dharma? Ask here...